ADVERTISEMENT
Sunday, June 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Malenadu Karnataka

ಕಾರ್ ರೇಸಿಂಗ್ : ಸ್ಟೇರಿಂಗ್ ಹಿಡಿದು ಟ್ರ್ಯಾಕ್ ಗೆ ಇಳಿದ ಅಭಿನ್

admin by admin
March 8, 2021
in Malenadu Karnataka, Newsbeat, ಮಲೆನಾಡು ಕರ್ನಾಟಕ
Share on FacebookShare on TwitterShare on WhatsappShare on Telegram

ಕಾರ್ ರೇಸಿಂಗ್ : ಸ್ಟೇರಿಂಗ್ ಹಿಡಿದು ಟ್ರ್ಯಾಕ್ ಗೆ ಇಳಿದ ಅಭಿನ್

ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆ ಹಾಕಿ ಮತ್ತು ಅಥ್ಲೇಟಿಕ್ಸ್ ಅಷ್ಟೇ ಸೀಮಿತವಾಗಿದ್ದ ಕ್ರೀಡೆಯ ತವರು ಜಿಲ್ಲೆ ಕೊಡಗು ಕ್ರೀಡೆಯ ಒಂದೊಂದು ಹೊಸ ಆಯಾಮಗಳತ್ತ ಯುವ ಸಮೂಹ ಮುಖ ಮಾಡುತ್ತಲೇ ಬಂದಿದೆ. ಒಂದಷ್ಟು ಕ್ರಿಕೆಟ್ ಕಲಿಗಳು, ಮುಖ್ಯವಾಹಿನಿಗೆ ಬಂದಿರುವುದು ಹೊರತುಪಡಿಸಿ ಸಾಹಸಮಯ ಕ್ರೀಡೆಗಳಲ್ಲಿ ಅಂದಿನಿಂದ ಇಂದಿನವರೆಗೂ ಕಾರ್ ರೇಸಿಂಗ್ ನಲ್ಲಿ ಮುಂಚೂಣಿಯಲ್ಲಿರುವುದು ಜಗತ್ ನಂಜಪ್ಪ ರವರ ಹೆಸರು. ಇವರ ಜೊತೆಗೂಡಿ ಒಂದಷ್ಟು ಯುವ ಪ್ರತಿಭೆಗಳು ಆಫ್ ರೋಡ್ ನಿಂದ ಹಿಡಿದು ಆಟೋ ಕ್ರಾಸ್ ಟ್ರಾಕ್ ವರೆಗೂ ರೈಡರ್ ಗಳು ಮತ್ತು ಡ್ರೈವರ್ ಗಳು ತಯಾರಾಗಿ ರಾಜ್ಯ, ಹೊರರಾಜ್ಯ ಸೇರಿದಂತೆ ಕೆಲವರು ದೇಶದ ಹೊರಗೂ ಹೆಸರು ಮಾಡಿರುವವರೂ ಇದ್ದಾರೆ. ಇಂತಹವರ ಪಟ್ಟಿಗೆ ಮಡಿಕೇರಿ ಪಟ್ಟಣ ಯುವ ಪ್ರತಿಭೆ ಸ್ಟೇರಿಂಗ್ ಹಿಡಿದು ಟ್ರ್ಯಾಕ್ ಗೆ ಇಳಿದ್ದಾನೆ ಕಾನೂನು ಪದವಿ ಮಾಡುತ್ತಿರುವ ಈ ಯುವಕನ ಹೆಸರು ಅಭಿನ್ ಆರ್ ರೈ. ಪ್ರಕೃತಿ ವಿಕೋಪದಿಂದ ಕೊರೊನಾದವರೆಗೆ ಜಿಲ್ಲೆಯಲ್ಲಿ ಯಾವುದೇ ಆಟೋ ಕ್ರಾಸ್ ಸ್ಪರ್ಧೆಗಳು ಜಿಲ್ಲೆಯಲ್ಲಿ ನಡೆಯುತ್ತಿದ ಕಾರಣ ಮೋಟೋಕ್ರಾಸ್ ನಲ್ಲಿ ಸಾಕಷ್ಟು ಆಸಕ್ತಿ ಹೊಂದಿರುವ ಅಭಿನ್ ಅವಕಾಶಕ್ಕೆ ಹುಡುಕುತ್ತಾ ಇರುವ ಸಂದರ್ಭ 2020ರಲ್ಲಿ ಹಂಪಿಯಲ್ಲಿ ನಡೆದ 2000 ಸಿಸಿ ವಿಭಾಗದಲ್ಲಿ ಎರಡೇ ಸ್ಥಾನ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾನೆ. ಇದೇ ಸ್ಪರ್ಧೆಯ ಓಪನ್ ಕ್ಲಾಸ್ ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾನೆ. ಜೀಪ್ ಕ್ಲಾಸ್ ನಲ್ಲಿ ಮೂರನೇ ಸ್ಥಾನ ಮತ್ತು 2020-2021 ರಲ್ಲಿ ಹಂಪಿಯಲ್ಲಿ 1400 ವಿಭಾಗದಲ್ಲಿ ಎರಡನೇ ಸ್ಥಾನ, ನೋವಿಸ್ ಓಪನ್ ನಲ್ಲಿ ಎರಡನೇ ಸ್ಥಾನ, ಎಸ್ಟೀಂ ಓಪನ್ ನಲ್ಲಿ ಎರಡನೇ ಸ್ಥಾನ ಮತ್ತು ಓಪನ್ ಕ್ಲಾಸ್ ನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದ್ದಾನೆ. ಅಂದಹಾಗೆ ಇದು ಅಭಿನ್ ರೈನದ್ದು ಮೊದಲ ಪ್ರಯತ್ನ.

Related posts

80 ಲಕ್ಷದ ವಾಚ್ ಅಲ್ಲ ಇದು ಅಂಬೇಡ್ಕರ್ ಚಿತ್ರವಿರುವ ಎಚ್ ಎಂಟಿ ವಾಚ್ ಅನುಮಾನವಿದ್ದರೆ ಮನೆಗೆ ಎಸ್‌ಐಟಿ ಕಳಿಸಿ ಎಂದು ಕುಮಾರಸ್ವಾಮಿ ಸವಾಲು

80 ಲಕ್ಷದ ವಾಚ್ ಅಲ್ಲ ಇದು ಅಂಬೇಡ್ಕರ್ ಚಿತ್ರವಿರುವ ಎಚ್ ಎಂಟಿ ವಾಚ್ ಅನುಮಾನವಿದ್ದರೆ ಮನೆಗೆ ಎಸ್‌ಐಟಿ ಕಳಿಸಿ ಎಂದು ಕುಮಾರಸ್ವಾಮಿ ಸವಾಲು

June 27, 2026
ಕೋರ್ಟ್ ನಲ್ಲಿ ಕ್ಷಮೆ ಕೇಳಲು ನಿರಾಕರಿಸಿದ ಪ್ರದೀಪ್ ಈಶ್ವರ್: ಕಾನೂನು ಸಮರದಲ್ಲಿ ಪ್ರತಾಪ್ ಸಿಂಹಗೆ ಮೇಲುಗೈ?- ಚಿಕ್ಕಬಳ್ಳಾಪುರ ಶಾಸಕರಿಗೆ ಕಾನೂನು ಶಾಕ್

ಕೋರ್ಟ್ ನಲ್ಲಿ ಕ್ಷಮೆ ಕೇಳಲು ನಿರಾಕರಿಸಿದ ಪ್ರದೀಪ್ ಈಶ್ವರ್: ಕಾನೂನು ಸಮರದಲ್ಲಿ ಪ್ರತಾಪ್ ಸಿಂಹಗೆ ಮೇಲುಗೈ?- ಚಿಕ್ಕಬಳ್ಳಾಪುರ ಶಾಸಕರಿಗೆ ಕಾನೂನು ಶಾಕ್

June 27, 2026

ರೇಸಿಂಗ್ ಗೀಳು: ಅಭಿನ್ ಚಿಕ್ಕದಿಂಲೂ ಕ್ರೀಡಾಸಕ್ತಿಯಿಂದಲೇ ಬೆಳೆದವನು, ಸಧ್ಯಕ್ಕೆ ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಭಿನ್ ರೈಗೆ ಸ್ಪೂರ್ತಿಯಾಗಿರುವುದು ಹೆಸರಾಂತ ರೇಸರ್ ಗಳಾದ ಗೌರವ್ ಗಿಲ್ ಮತ್ತು ಡೀನ್ ಮಸ್ಕರೇಹನಸ್. ಪೋಷಕರಾದ ರತ್ನಾಕರ್ ರೈ ಮತ್ತು ನಮಿತಾ ರೈ ರವರ ಸಾಕಷ್ಟು ಬೆಂಬಲ, ಪ್ರೋತ್ಸಾಹದಿಂದ ತನ್ನದೇ ಸಿಲ್ವರ್ ಬಣ್ಣದ ಎಸ್ಟೀಂ ಕಾರಿನಲ್ಲಿ ಯಾವೊಬ್ಬ ತರಬೇತುದಾರನಿಲ್ಲದೆ, ಆರ್ಥಿಕ ಸಹಾಯವಿಲ್ಲದೆ ಒಂದು ರೇಸಿಗೆ 30 ರಿಂದ 40 ಸಾವಿರ ಹಣ ಖರ್ಚು ಮಾಡಿ ಎಲ್ಲಾ ಸಿದ್ದತೆಯೊಂದಿಗೆ ಟ್ರ್ಯಾಗೆ ಇಳಿಯುತ್ತಾನೆ. ಆರಂಭಿಕ ಹಂತದಲ್ಲಿರುವ ಕಾರಣ, ಇನ್ನೂ ಒಂದು ವರ್ಷ ಪರಿಪೂರ್ಣ ರೇಸರ್ ಆಗಲು ಸಮಯ ಬೇಕಾಗಬಹುದೆಂದು ಅಭಿನ್ ತಿಳಿಸುತ್ತಾರೆ. ಅಟೋಮೊಬೈಲ್ ನಲ್ಲಿ ಸಾಕಷ್ಟು ಆಸಕ್ತಿ ಇದ್ದರೂ ಪೋಷಕರ ಮಾತಿಗೆ ಮಣಿದು ಕಾನೂನು ಪದವಿ ಮಾಡುತ್ತಿರುದುದಾಗಿ ಹೇಳುವ ಅಭಿನ್,ಬೆಂಗಳೂರಿನಲ್ಲಿರುವ ಖಾಸಗಿ ಟ್ರಾಕ್ ನಲ್ಲಿ ಈತನ ಪ್ರಾಕ್ಟಿಸ್ ಗೆ ಅನುಕೂಲವಾಗುತ್ತಿದೆ.

ಪಾರ್ಟ್ ಟೈಮ್ ಕೆಲಸ: ಆರ್ಥಿಕವಾಗಿ ಪೋಷಕರಿಂದ ಒಂದಿಷ್ಟು ಸಹಾಯ ಸಿಕ್ಕಿದರೂ,ರೇಸಿಂಗ್,ಓದಿನ ಜೊತೆ ಪಾರ್ಟ್ ಟೈಮ್ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದಾನೆ. ಐಡಿಯಲ್ ರೇಸಿಂಗ್ ತಂಡದ ಪರ ರೇಸಿಂಗ್ ನಲ್ಲಿ ಖಾಸಗಿಯಾಗಿ ಪಾಲ್ಗೊಳ್ಳುತ್ತಿದ್ದು ಪ್ರಾಯೋಜಕರು, ತರಬೇತುದಾರರ ನಿರೀಕ್ಷೆಯಲ್ಲಿದ್ದಾರೆ. ಸದ್ಯಕ್ಕೆ ರಾಜ್ಯದಲ್ಲಿ ಎಲ್ಲಿ ಆಟೋಕ್ರಾಸ್ ನಡೆಯಲಿ ಅಲ್ಲಿ ಅಭಿನ್ ರೈ ಇರುತ್ತಾನೆ. ಇತ್ತೀಚೆಗಷ್ಟೇ ಸಕಲೇಶಪುರದಲ್ಲಿ ನಡೆದ ಆಟೋ ಕ್ರಾಸ್ ನಲ್ಲೂ ಪಾಲ್ಗೊಂಡಿದ್ದಾನೆ. ನೋವಿಸ್ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾನೆ. ಬೆಳೆಯುವ ಸಿರಿ ಮೂಳಕೆಯಲ್ಲೇ ಎನ್ನುವಂತೆ, ಇಂತಹಾ ಮಹತ್ವಾಕಾಂಕ್ಷೆ ಇಟ್ಟಕೊಂಡು ಸಾಧನೆ ಮಾಡಲು ಮುಂದಾಗಿರುವ ಅಭಿನ್ ರೈ ನಂತಹಾ ಯುವ ಪ್ರತಿಭೆಗೆ ಸೂಕ್ತ ಪ್ರೋತ್ಸಾಹದ ಅಗತ್ಯ ಇರುವುದಂತೂ ಸತ್ಯ.

Motera stadium
ಜಾಹೀರಾತು
Tags: CarkarnatakaMadikeri
ShareTweetSendShare
Join us on:

Related Posts

80 ಲಕ್ಷದ ವಾಚ್ ಅಲ್ಲ ಇದು ಅಂಬೇಡ್ಕರ್ ಚಿತ್ರವಿರುವ ಎಚ್ ಎಂಟಿ ವಾಚ್ ಅನುಮಾನವಿದ್ದರೆ ಮನೆಗೆ ಎಸ್‌ಐಟಿ ಕಳಿಸಿ ಎಂದು ಕುಮಾರಸ್ವಾಮಿ ಸವಾಲು

80 ಲಕ್ಷದ ವಾಚ್ ಅಲ್ಲ ಇದು ಅಂಬೇಡ್ಕರ್ ಚಿತ್ರವಿರುವ ಎಚ್ ಎಂಟಿ ವಾಚ್ ಅನುಮಾನವಿದ್ದರೆ ಮನೆಗೆ ಎಸ್‌ಐಟಿ ಕಳಿಸಿ ಎಂದು ಕುಮಾರಸ್ವಾಮಿ ಸವಾಲು

by Shwetha
June 27, 2026
0

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಐಷಾರಾಮಿ ವಾಚ್ ಗಳ ಬಗ್ಗೆ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ತಮ್ಮದೇ ಶೈಲಿಯಲ್ಲಿ ಖಡಕ್ ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ...

ಕೋರ್ಟ್ ನಲ್ಲಿ ಕ್ಷಮೆ ಕೇಳಲು ನಿರಾಕರಿಸಿದ ಪ್ರದೀಪ್ ಈಶ್ವರ್: ಕಾನೂನು ಸಮರದಲ್ಲಿ ಪ್ರತಾಪ್ ಸಿಂಹಗೆ ಮೇಲುಗೈ?- ಚಿಕ್ಕಬಳ್ಳಾಪುರ ಶಾಸಕರಿಗೆ ಕಾನೂನು ಶಾಕ್

ಕೋರ್ಟ್ ನಲ್ಲಿ ಕ್ಷಮೆ ಕೇಳಲು ನಿರಾಕರಿಸಿದ ಪ್ರದೀಪ್ ಈಶ್ವರ್: ಕಾನೂನು ಸಮರದಲ್ಲಿ ಪ್ರತಾಪ್ ಸಿಂಹಗೆ ಮೇಲುಗೈ?- ಚಿಕ್ಕಬಳ್ಳಾಪುರ ಶಾಸಕರಿಗೆ ಕಾನೂನು ಶಾಕ್

by Shwetha
June 27, 2026
0

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ನಡುವಿನ ಕಾನೂನು ಸಂಘರ್ಷ ಈಗ ಹೊಸ ತಿರುವು ಪಡೆದುಕೊಂಡಿದೆ. ಪ್ರದೀಪ್ ಈಶ್ವರ್ ಅವರು ತಮ್ಮ...

CM Yogi Adityanath

ಸನಾತನ ಧರ್ಮದ ಜೊತೆ ಆಟವಾಡಿದರೆ ಸುಮ್ಮನಿರಲ್ಲ: ಅಯೋಧ್ಯೆ ದೇಣಿಗೆ ಹಗರಣದ ಬೆನ್ನಲ್ಲೇ ಗುಡುಗಿದ ಸಿಎಂ ಯೋಗಿ

by Shwetha
June 27, 2026
0

ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ವಿಶ್ವದಾದ್ಯಂತ ಇರುವ ಕೋಟ್ಯಂತರ ಭಕ್ತರು ಶ್ರದ್ಧಾಭಕ್ತಿಯಿಂದ ಸಮರ್ಪಿಸಿದ ದೇಣಿಗೆ ಮತ್ತು ಕಾಣಿಕೆಯನ್ನು ದುರುಪಯೋಗಪಡಿಸಿಕೊಂಡ ಘಟನೆ ಈಗ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಕ್ರಮದ...

ಅಡ್ಡ ಮತದಾನಕ್ಕೆ ನಾನೇ ಕಾರಣ ಎಂಬ ಆರೋಪ ಸುಳ್ಳು : ನನ್ನ ಟೈಮ್ ಚೆನ್ನಾಗಿದೆ, ಪಕ್ಷ ವಿರೋಧಿಗಳಿಗೆ ಹೆದರಲ್ಲ- ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿರೋಧಿಗಳಿಗೆ ವಿಜಯೇಂದ್ರ ಖಡಕ್ ಉತ್ತರ

ಅಡ್ಡ ಮತದಾನಕ್ಕೆ ನಾನೇ ಕಾರಣ ಎಂಬ ಆರೋಪ ಸುಳ್ಳು : ನನ್ನ ಟೈಮ್ ಚೆನ್ನಾಗಿದೆ, ಪಕ್ಷ ವಿರೋಧಿಗಳಿಗೆ ಹೆದರಲ್ಲ- ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿರೋಧಿಗಳಿಗೆ ವಿಜಯೇಂದ್ರ ಖಡಕ್ ಉತ್ತರ

by Shwetha
June 27, 2026
0

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಬೆಳವಣಿಗೆಯಿಂದ ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲಗಳಿಗೆ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಈಗ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ...

ಇಡಿ ಸಿಬಿಐ ಭಯಕ್ಕೆ ತಾಯಿಯಂತಾ ಪಕ್ಷವನ್ನೇ ಮಾರಿಕೊಂಡ್ರು: ಹೆತ್ತ ತಾಯಿಗೆ ದ್ರೋಹ ಬಗೆದಂತೆ ಪಕ್ಷಾಂತರ- ದ್ರೋಹಿಗಳಿಗೆ ಜನರೇ ಪಾಠ ಕಲಿಸ್ತಾರೆ ಎಂದು ಗುಡುಗಿದ ಮಮತಾ ಬ್ಯಾನರ್ಜಿ

ಇಡಿ ಸಿಬಿಐ ಭಯಕ್ಕೆ ತಾಯಿಯಂತಾ ಪಕ್ಷವನ್ನೇ ಮಾರಿಕೊಂಡ್ರು: ಹೆತ್ತ ತಾಯಿಗೆ ದ್ರೋಹ ಬಗೆದಂತೆ ಪಕ್ಷಾಂತರ- ದ್ರೋಹಿಗಳಿಗೆ ಜನರೇ ಪಾಠ ಕಲಿಸ್ತಾರೆ ಎಂದು ಗುಡುಗಿದ ಮಮತಾ ಬ್ಯಾನರ್ಜಿ

by Shwetha
June 27, 2026
0

ಪಕ್ಷದ ಸಂಕಷ್ಟದ ಸಮಯದಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿರುವ ಶಾಸಕರು ಮತ್ತು ಸಂಸದರ ವಿರುದ್ಧ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram