ಕ್ಯಾರೆಟ್ ಕೇಕ್ ರೆಸಿಪಿ ಒಮ್ಮೆ ಮಾಡಿ ನೋಡಿ
ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು: 1 ಕಪ್
ಹಾಲಿನ ಪುಡಿ: 2 ಟೇಬಲ್ ಸ್ಪೂನ್
ಸಕ್ಕರೆ: 3/4 ಕಪ್
ಮೊಸರು: 1/2 ಕಪ್
ತುಪ್ಪ: 1/4 ಕಪ್
ಬಾದಾಮಿ: 10
ಏಲಕ್ಕಿ ಪುಡಿ: 1/2 ಟೀಸ್ಪೂನ್
ಜಾಯಿಕಾಯಿ ಪುಡಿ: 1/2 ಟೀಸ್ಪೂನ್
ತುರಿದ ಕ್ಯಾರಟ್: 1 ಕಪ್
ಏಲಕ್ಕಿ: 2-3 ಹೂವು
ಹಾಲು: ಅಗತ್ಯವಿರುವಷ್ಟು
ವೆನಿಲ್ಲಾ ಎಸೆನ್ಸ್: 1 ಟೀಸ್ಪೂನ್
ಬೇಕಿಂಗ್ ಪೌಡರ್: 1 ಟೀಸ್ಪೂನ್
ಬೇಕಿಂಗ್ ಸೋಡಾ: 1/4 ಟೀಸ್ಪೂನ್
ಟೂಟಿ ಫ್ರೂಟಿ(Truity fruity)
ಮಾಡುವ ವಿಧಾನ:
1. ಮಿಕ್ಸರ್ ಜಾರಿನಲ್ಲಿ ಸಕ್ಕರೆ, ಏಲಕ್ಕಿ ಮತ್ತು ಬಾದಾಮಿ ಹಾಕಿ ಪುಡಿ ಮಾಡಿ.
2. ಒಂದು ಬೌಲ್ನಲ್ಲಿ ಮೊಸರು ಮತ್ತು ತುಪ್ಪ ಹಾಕಿ ಚೆನ್ನಾಗಿ ಹ್ಯಾಂಡ್ ವಿಸ್ಕ್ನ ಸಹಾಯದಿಂದ beat ಮಾಡಿ.
3. ನಂತರ ಅದಕ್ಕೆ ವೆನಿಲ್ಲಾ ಎಸೆನ್ಸ್ ಮತ್ತು ಸಕ್ಕರೆ-ಬಾದಾಮಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
4. ತುರಿದ ಕ್ಯಾರೆಟ್ ಸೇರಿಸಿ ಕಲೆಸಿ
5. ಗೋಧಿ ಹಿಟ್ಟು, ಹಾಲಿನ ಪುಡಿ, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್, ಜಾಯಿಕಾಯಿ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಮಿಕ್ಸ್ ಮಾಡಿ, ನಂತರ ಅಗತ್ಯವಿರುವಷ್ಟು ಹಾಲು ಸೇರಿಸಿ ಹದವಾದ ಬ್ಯಾಟರ್ ತಯಾರಿಸಿಕೊಳ್ಳಿ.
6. ಕೇಕ್ ಟಿನ್ ಅನ್ನು ಎಣ್ಣೆ ಹಾಕಿ ಗ್ರೀಸ್ ಮಾಡಿ, ಬ್ಯಾಟರ್ ಹಾಕಿ. ಮೇಲಿಂದ Truity fruity ಹಾಕಿ.
7. ತವ ಅಥವಾ ದಪ್ಪ ತಳದ ಕಡಾಯಿಯನ್ನು pre ಹೀಟ್ ಮಾಡಿ, ಕೇಕ್ ಟಿನ್ ಅದರಲ್ಲಿ ಇಟ್ಟು 40-45 ನಿಮಿಷ ಕಡಿಮೆ flameನಲ್ಲಿ bake ಮಾಡಿ.
8. ಆರೋಗ್ಯಕರ ಮತ್ತು ರುಚಿಕರ ಕ್ಯಾರೆಟ್ ಕೇಕ್ ರೆಡಿಯಾಗಿದೆ.