ದೆಹಲಿಯಲ್ಲಿ ಒಮಿಕ್ರಾನ್ ಸೋಂಕು ಕೇಸ್ ಪತ್ತೆ Omicron saaksha tv
ನವದೆಹಲಿ : ಭಾರತದಲ್ಲಿ ಒಮಿಕ್ರಾನ್ ಸೋಂಕಿನ ಪ್ರಕರಣಗಳು ದಿನೇದಿನೆ ಏರಿಕೆಯಾಗುತ್ತಿವೆ.
ಇದೀಗ ದೆಹಲಿಯಲ್ಲಿ ಮೊದಲನೇ ಒಮಿಕ್ರಾನ್ ಪ್ರಕರಣ ಕಾಣಿಸಿಕೊಂಡಿದೆ. ಇದರೊಂದಿಗೆ ದೇಶದಲ್ಲಿ ಈವರೆಗೂ ಐದು ಒಮಿಕ್ರಾನ್ ಕೇಸ್ ಗಳು ಪತ್ತೆಯಾದಂತೆ ಆಗಿದೆ.
ಟಾಂಜಾನಿಯದಿಂದ ದೆಹಲಿಗೆ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಸದ್ಯ ಸೋಂಕಿತನಿಗೆ ಎಲ್ ಎನ್ ಜಿಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಮೊದಲ ಕಾಣಿಸಿಕೊಂಡ ಒಮಿಕ್ರಾನ್ ಸೋಂಕು ಭಾರತದ ಪೈಕಿ ಕರ್ನಾಟಕದಲ್ಲಿ ಮೊದಲ ಕಾಣಿಸಿಕೊಳ್ತು.
ಬೆಂಗಳೂರಿನ ಇಬ್ಬರು ಓಮಿಕ್ರಾನ್ ಸೋಂಕು ಪತ್ತೆಯಾಗಿತ್ತು. ಇದಾದ ಬಳಿಕ ಗುಜರಾತ್ ನ 75 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿತ್ತು. ಇದೀಗ ದೆಹಲಿಯಲ್ಲಿ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ.









