ರಾವಣನನ್ನ ಹೊಗಳಿದ ಸೈಫ್ ವಿರುದ್ಧ ಕೇಸ್: ‘ಆದಿಪುರುಷ್’ ನಿಂದ ಕೈ ಬಿಡಿ.!
ಮುಂಬೈ : ಬಾಲಿವುಡ್ ನಟ ಸೈಫ್ ಅಲಿಖಾನ್ ಸದ್ಯ ಸಂದರ್ಶನವೊಂದರಲ್ಲಿ ರಾವಣನನ್ನ ಹೊಗಳಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಹೊತ್ತಿರುವ ಸೈಫ್ ವಿರುದ್ಧ ಇದೀಗ ಕೇಸ್ ದಾಖಲಾಗಿದೆ.
ಅಂದ್ಹಾಗೆ ಭಾರತ ಚಿತ್ರರಂಗದ ಬಹುನಿರೀಕ್ಷೆಯ ಆದಿಪುರುಷ್ ಸಿನಿಮಾದಲ್ಲಿ ಬಾಹುಬಲಿ ಪ್ರಭಾಸ್ ರಾಮನಾಗಿದ್ರೆ, ಸೈಫ್ ರಾವಣನಾಗಿ ಕಾಣಿಸಿಕೊಳ್ತಾಯಿದ್ದಾರೆ. ಇದೇ ವಿಚಾರವಾಗಿ ಮಾತನಾಡಿದ್ದ ಅವರು ನನಗೆ ರಾಕ್ಷಸ ರಾವಣ ಪಾತ್ರ ಮಾಡಲು ತುಂಬಾ ಇಷ್ಟ ಇದೆ. ರಾವಣ ಸಹೋದರಿ ಶೂರ್ಪನಖಿಯ ಮೂಗನ್ನು ರಾಮನ ಸಹೋದರ ಲಕ್ಷ್ಮಣ ಕತ್ತರಿಸಿದ್ದಕ್ಕಾಗಿಯೇ, ಸೀತಾ ಮಾತೆಯನ್ನು ರಾವಣ ಅಪಹರಣ ಮಾಡಿದ. ರಾಮನೊಂದಿಗೆ ಯುದ್ಧ ಮಾಡಿದ ಎಂದು ಹೇಳಿದ್ದಾರೆ.
ಲೈಟರ್ ತೋರಿಸಿ 79 ಸಾವಿರ ರೂಪಾಯಿ ದರೋಡೆ : ‘ಲೈಟರ್’ ಗೆ ಹೆದರಿದ್ರಾ ಚಾನ್ಸೇ ಇಲ್ಲ..!
ಅವರ ಈ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ. ಸೈಫ್ ಅಲಿ ಖಾನ್ ರ ಈ ಹೇಳಿಕೆಯಿಂದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಆದಿಪುರಷ್ ಸಿನಿಮಾದಿಂದ ಅವರನ್ನ ಕೈಬಿಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಇನ್ನೂ ಸೈಫ್ ಅವರು ತಮ್ಮ ಹೇಳಿಕೆಯನ್ನೂ ಹಿಂಪಡೆದಿದ್ದರೂ ಸಹ ಅವರ ಮೇಲೆ ಕೇಸ್ ದಾಖಲಾಗಿದೆ.
ವಕೀಲರೊಬ್ಬರು ಈ ಕೇಸ್ ದಾಖಲು ಮಾಡಿದ್ದು, ಡಿ. 23 ರಂದು ಎಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel