ಲೈಟರ್ ತೋರಿಸಿ 79 ಸಾವಿರ ರೂಪಾಯಿ ದರೋಡೆ : ‘ಲೈಟರ್’ ಗೆ ಹೆದರಿದ್ರಾ ಚಾನ್ಸೇ ಇಲ್ಲ..!
ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಲೈಟರ್ ನಿಂದ ಹೆದರಿಸಿ ಹಣ ದೋಚಿರುವ ಸಿನಿಮೀಯ ರೀತಿಯ ಪ್ರಕರಣ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೌದು… ಇದೇನಪ್ಪಾ ಲೈಟರ್ ಗೆ ಹೆದ್ರಿದ್ರಾ ಅಂತ ಆಶ್ಚರ್ಯ ಆಗುತ್ತೆ. ಆದ್ರೆ ಅದು ಅಂತಿಂತಾ ಲೈಟರ್ ಅಲ್ಲಾ..
‘PUBG’ ಪ್ರಿಯರಿಗೆ ನಿರಾಸೆಯಾಗಬಹುದು: ಗಮನಿಸಲೇ ಬೇಕಾದ ಸುದ್ದಿ!
ಪಿಸ್ತೂಲ್ ಮಾದರಿಯ ಲೈಟರ್ ( ನಕಲಿ ಪಿಸ್ತೂಲು) ನಿಂದ ಬೆದರಿಸಿ ದುಡ್ಡು ದೋಚಿದ್ದಾರೆ ಚಾಲಾಕಿ ಖದೀಮರು. ಅಷ್ಟೇ ಅಲ್ಲ ಮಾಡಿದ ತಪ್ಪಿಗೆ ಇದೀಗ ಜೈಲು ಸೇರಿದ್ದಾರೆ. ರಾಮನಗರ ಮೂಲದ ರವಿ ಮತ್ತು ಆತನ ಸಂಬಂಧಿ ರಾಜು ಬಂಧಿತ ಆರೋಪಿಗಳಾಗಿದ್ದಾರೆ.
ಅಂದ್ಹಾಗೆ ಡಿಸೆಂಬರ್ 2 ಕ್ಕೆ ಈ ಘಟನೆ ನಡೆದಿದ್ದು, ಇದೀಗ ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ. ರಾಹುಲ್ ಎಂಬ ವ್ಯಕ್ತಿ ತಮ್ಮ ಕಂಪನಿಗೆ ಸೇರಿದ ಹಣವನ್ನು ಸಂಗ್ರಹಿಸಿ ಕೊಂಡೊಯ್ಯುವಾಗ ಖದೀಮರು ಅವರಿಗೆ ನಕಲಿ ಪಿಸ್ತೂಲ್ ತೋರಿಸಿ ಬೆದರಿಸಿ ಹಣ ದರೋಡೆ ಮಾಡಿದ್ದರು. ಬಳಿಕ ಈ ಸಂಬಂಧ ರಾಹುಲ್ ಕೇಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರ ಕೈಗೆ ಕೊನೆಗೂ ಚಾಲಾಕಿ ಕಳ್ಳರು ಸಿಕ್ಕಿಬಿದ್ದಿದ್ದಾರೆ.
ಇನ್ನೂ ಬಂಧಿತರಿಂದ 60 ಸಾವಿರ ರೂಪಾಯಿ ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಪಿಸ್ತೂಲು ಮಾದರಿಯ ಲೈಟರ್ ಮತ್ತು ದ್ವಿಚಕ್ರ ವಾಹನವನ್ನು ಕೆಂಗೇರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel