ವಾಹನ ಸವಾರರೇ ಎಚ್ಚರ ಎಚ್ಚರ ಎಚ್ಚರ
ಬೆಂಗಳೂರು : ವಾಹನ ಸವಾರರೇ ಎಚ್ಚರ ಎಚ್ಚರ ಎಚ್ಚರ… ಇನ್ಮುಂದೆ ನೀವು ನಿಮ್ಮ ವಾಹನಗಳ ನಂಬರ್ ಬೋರ್ಡ್ ಮೇಲೆ ಅನಧಿಕೃತವಾಗಿ ಯಾವುದೇ ಸಂಘ – ಸಂಸ್ಥೆಗಳ ಹೆಸರು, ಲೋಗೋ ಹಾಕುವಂತಿಲ್ಲ.
ಈ ಹಿಂದೆಯೇ ಈ ನಿಯಮವಿದ್ದರೂ ಕೆಲವರು ತಮ್ಮ ವಾಹನಗಳ ನೋಂದಣಿ ಫಲಕದ ಮೇಲೆ ಚಿಹ್ನೆ, ಹೆಸರು, ಲಾಂಛನ ಹಾಕಿಕೊಂಡು ಓಡಾಡುತ್ತಿದ್ದಾರೆ. ಇದನ್ನ ಗಂಭೀರವಾಗಿ ತೆಗೆದುಕೊಂಡಿರುವ ಸಾರಿಗೆ ಇಲಾಖೆ, ವಿಶೇಷ ಕಾರ್ಯಾಚರಣೆ ನಡೆಸಲು ಮುಂದಾಗಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ಸಾರಿಗೆ ಇಲಾಖೆಯಿಂದ ರಾಜ್ಯದ ಎಲ್ಲಾ ವಿಭಾಗಗಳ ಜಂಟಿ ಸಾರಿಗೆ ಆಯುಕ್ತರಿಗೆ ಖಡಕ್ ಸೂಚನೆ ಹೋಗಿದೆಯಂತೆ. ಅದರ ಅನ್ವಯ, ನಿಯಮಬಾಹಿರವಾಗಿ ಲಾಂಛನದಂತಹ ಸಂಸ್ಥೆಯ ಹೆಸರು, ಚಿನ್ನೆ ಬಳಸುವ ವಾಹನಗಳ ತಪಾಸಣೆ ನಡೆಸುವುದ ಜೊತೆಗೆ, ನಿಮ್ಮ ಕಚೇರಿ ವ್ಯಾಪ್ತಿಯಲ್ಲಿರುವ ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಹಾಗೂ ಇತರೆ ಸಂಸ್ಥೆಗಳು ಸೇರಿದಂತೆ ನಿಗಮ, ಮಂಡಳಿಗಳಿಗೆ, ಭೇಟಿ ನೀಡಿ, ಅನಧಿಕೃತ ಲಾಂಛನ ಅಳವಡಿಸಿದ ವಾಹನಗಳ ವಿರುದ್ಧ ತೀವ್ರ ತೀರಿಯ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರಂತೆ.
ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ತಮ್ಮ ಖಾಸಗಿ ವಾಹನದ ಮೇಲೆ ಸದಸ್ಯತ್ವವನ್ನು ಮತ್ತು ಇತರೆ ಸಂಘ ಸಂಸ್ಥೆಗಳ ಹೆಸರುಗಳನ್ನು ಹಾಕಿಕೊಳ್ಳುವುದು ಕೇಂದ್ರ ಮೋಟಾರು ವಾಹನಗಳ ನಿಯಮ 1989ರ ನಿಯಮ 50 ಮತ್ತು 51ರ ಹಾಗೂ 1950 ಕಲಂ 3,4ರ ಉಲ್ಲಂಘನೆಯಾಗಲಿದೆ. ಇದು ಉಚ್ಛ ನ್ಯಾಯಾಲಯದ ಆದೇಶದನ್ವಯ ಅಪರಾಧವಾಗಿದೆ.
case fix if sangha organization name symbol logo is illegally placed on vehicle registration plate 131759-2









