Thursday, March 23, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕ್ಯಾಶ್ಯೂ ಇಂಡಿಯಾ ಆಪ್; ಬೆಳೆ ಸಂಬಂಧಿ ಆಪ್ ತಯಾರಿಕೆಯಲ್ಲಿ ವಿನೂತನ ಹೆಜ್ಜೆ

admin by admin
July 31, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಕ್ಯಾಶ್ಯೂ ಇಂಡಿಯಾ ಆಪ್; ಬೆಳೆ ಸಂಬಂಧಿ ಆಪ್ ತಯಾರಿಕೆಯಲ್ಲಿ ವಿನೂತನ ಹೆಜ್ಜೆ:

ನಮ್ಮ ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ “ಕ್ಯಾಶ್ಯೂ ಇಂಡಿಯಾ (Cashew India)” ಆಪ್ ನ್ನು ಗೇರು ಕೃಷಿಕರು ಹಾಗೂ ಗೇರಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಸಹಿತ ಅಭಿವೃದ್ಧಿಗೊಳಿಸಲಾಗಿದೆ. ಗೂಗಲ್ ಪ್ಲೇಸ್ಟೋರಿನಲ್ಲಿ ಲಭ್ಯವಿರುವ ಇದು ಕೃಷಿ ಆಸಕ್ತರೆಲ್ಲರೂ ನೋಡಲೇಬೇಕಾದ ಅನನ್ಯ ಆಪ್. ಬೆಳೆ ಸಂಬಂಧೀ ಆಪ್ಸ್ ತಯಾರಿಕೆಯಲ್ಲಿ ಇದೊಂದು ಮಾದರಿಯಾಗಬಲ್ಲ ವಿನೂತನ ಹೆಜ್ಜೆ ಎಂಬ ಭರವಸೆ ಹುಟ್ಟಿಸಿದೆ. ಸುಮಾರು ಒಂದು ವರ್ಷದ ಹಲವರ ಶ್ರಮ ಇದರ ಹಿಂದಿದೆ.

Related posts

Astrology

Astrology : ” 27 ಜನ್ಮ ನಕ್ಷತ್ರಗಳ ಗುಣಲಕ್ಷಣ ಅರ್ಥ ಸಹಿತ ಸಂಪೂರ್ಣ ಮಾಹಿತಿಗಳ ವಿವರಣೆ ತಿಳಿಯಿರಿ “

March 22, 2023
Kantara

Kantara : ಯುಗಾದಿ ಹಬ್ಬಕ್ಕೆ “ಕಾಂತಾರ” ಅಪ್ಡೇಟ್ ನೀಡಿದ ಹೊಂಬಾಳೆ ತಂಡ….

March 22, 2023

‘ಕೃಷಿಕ ಸ್ನೇಹಿ’, ‘ಸಮಗ್ರ ಮಾಹಿತಿ’, ‘ಸುಲಭ ಬಳಕೆ’ ‘ದೇಶವ್ಯಾಪಿ‘ ಮಾನದಂಡಗಳನ್ನಿಟ್ಟುಕೊಂಡು ರೂಪಿಸಿದ ಈ ‘ಕ್ಯಾಶ್ಯೂ ಇಂಡಿಯಾ’ ಆಪ್ ನ ಹಲವು ವೈಶಿಷ್ಟ್ಯಗಳು ಇಲ್ಲಿವೆ.

1. ಗೇರು ಕಸಿಗಿಡಗಳು, ನರ್ಸರಿ, ಕೃಷಿ, ಕೀಟ ಮತ್ತು ರೋಗ ನಿರ್ವಹಣೆ, ಕೊಯ್ಲೋತ್ತರ ಸಂಸ್ಕರಣೆ, ಮಾರುಕಟ್ಟೆ ಮಾಹಿತಿ, ಇ-ಮಾರುಕಟ್ಟೆ, ಗೇರಿಗೆ ಸಂಬಂಧಪಟ್ಟ ಕೃಷಿಕರು, ಸಂಶೋಧಕರು, ಅಭಿವೃದ್ಧಿ ಇಲಾಖೆಗಳು, ಸಂಸ್ಕರಣಾ ಘಟಕಗಳು ಇವೆಲ್ಲದರ ಮಾಹಿತಿಯನ್ನು ಒಂದೆಡೆ ಕೊಡುವ ಪ್ರಯತ್ನ.

2. ಕೃಷಿಕ/ಬಳಕೆದಾರ ತನ್ನ ಗೇರು ತೋಟದ ಛಾಯಾಚಿತ್ರ ಹಾಗೂ ವೀಡಿಯೋಗಳನ್ನು ‘ಕೃಷಿ’ ವಿಭಾಗದಲ್ಲಿರುವ ಉಪವಿಭಾಗ ‘ನನ್ನ ಗೇರು ಬೆಳೆ’ ಯಡಿಯಲ್ಲಿ ಸಂಗ್ರಹಿಸಿಡಬಹುದು. ಆಯಾ ತೋಟದ ಖರ್ಚು-ವೆಚ್ಚ ಹಾಗೂ ತನ್ನ ಅನುಭವಗಳನ್ನು ಇಲ್ಲಿ ಸುಲಭವಾಗಿ ದಾಖಲಿಸಲು ಸಾಧ್ಯ.

3. ಈ ಆಪ್ ಮೂಲಕ ಆಯಾ ರಾಜ್ಯದಲ್ಲಿರುವ ಸಂಶೋಧನಾ ಕೇಂದ್ರಗಳಲ್ಲಿ ನಿಮಗೆ ಬೇಕಾದ ಗೇರು ಕಸಿಗಿಡಗಳನ್ನು ಬುಕ್ ಮಾಡಬಹುದು.

4. ಇಲ್ಲಿರುವ ‘ಮಾರುಕಟ್ಟೆ ಮಾಹಿತಿ’ ವಿಭಾಗದಲ್ಲಿ ನೀವು ಗೇರು ಉತ್ಪನ್ನಗಳನ್ನು ಕೊಡು/ಕೊಳ್ಳುವುದು ಸಾಧ್ಯ.

5. ಈ ಆಪ್ ನ್ನು ಗೇರು ಬೆಳೆಯುವ ೧೦ ರಾಜ್ಯಗಳಿಗೆ – ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಛತ್ತೀಸ್ ಘಡ, ಒರಿಸ್ಸ, ಪಶ್ಚಿಮ ಬಂಗಾಳ ಹಾಗೂ ಮೇಘಾಲಯ- ಅನುಕೂಲವಾಗುವಂತೆ ರೂಪಿಸಿದ್ದೇವೆ. ಇಷ್ಟು ರಾಜ್ಯಗಳಿಗೆ ಮಾಹಿತಿ ಕೊಡುವ ಆಪ್ ನಮ್ಮ ಗಮನಕ್ಕೆ ಇದುವರೆಗೆ ಬಂದಿಲ್ಲ.

6. ಹಿಂದಿ, ಆಂಗ್ಲ, ಕನ್ನಡ, ಮರಾಠಿ, ಗುಜರಾತಿ, ಮಲಯಾಳಂ, ತಮಿಳು, ತೆಲುಗು, ಒಡಿಯಾ, ಗಾರೋ ಹಾಗೂ ಬೆಂಗಾಲಿ – ಹೀಗೆ ೧೧ ಭಾಷೆಗಳಲ್ಲಿ ಪ್ರತ್ಯೇಕವಾಗಿ ಮಾಹಿತಿ ಲಭ್ಯ. ಒಂದು ರಾಜ್ಯಕ್ಕೆ ಎರಡು ಭಾಷೆ – ಇಂಗ್ಲೀಷ್ ಮತ್ತು ಅಲ್ಲಿನ ಸ್ಥಳೀಯ ಭಾಷೆ. ಇಷ್ಟು ಭಾಷೆಗಳಲ್ಲಿ ಮಾಹಿತಿ ಕೊಡುವ ಆಪ್ ಇದು ಮೊದಲಿರಬಹುದು!

7. ಕೃಷಿಕ/ಬಳಕೆದಾರ ‘ತಜ್ಜರನ್ನು ಕೇಳಿ’ ವಿಭಾಗದ ಮೂಲಕ ಬೇಕಾದ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಲು ಸಾಧ್ಯ.

8. ‘ಚರ್ಚಾ ಕೋಣೆ’ ಯ ಮೂಲಕ ಆಯಾ ಸಮಯದಲ್ಲಿ ಆಪ್ ಬಳಸುತ್ತಿರುವ ಬಳಕೆದಾರರೊಡನೆ ನೀವು ಸಂವಹನ ನಡೆಸಬಹುದು.

9. ಅಲ್ಲಲ್ಲಿ ಲಭ್ಯವಿರುವ ಇ-ಸ್ಪೀಕ್ ಗುಂಡಿಯನ್ನು ಒತ್ತಿದರೆ, ಅಲ್ಲಿರುವ ಬರಹಗಳ ಧ್ವನಿರೂಪವನ್ನು ಆಪ್ ಓದುತ್ತದೆ

ಆಪ್ ನ ಹಿಂದಿರುವ ಪರಿಣಿತರು:

ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ವಹಣೆ : ಡಾ. ಮೋಹನ್ ತಲಕಾಲುಕೊಪ್ಪ, ಹಿರಿಯ ವಿಜ್ಞಾನಿ, ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು

ತಾಂತ್ರಿಕ ಮಾಹಿತಿ : ವಿಜ್ಞಾನಿಗಳು, ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು ಹಾಗೂ ವಿಜ್ಞಾನಿಗಳು, ಅಖಿಲ ಭಾರತ ಸಮನ್ವಿತ ಗೇಋ ಸಂಶೋಧನಾ ಪ್ರಾಯೋಜನೆಯ ಕೇಂದ್ರಗಳು

ಮಾಹಿತಿ ಸಂಗ್ರಹ ,ಪರಿಷ್ಕರಣೆ ಮತ್ತು ನಿರ್ವಹಣೆ:
ಡಾ. ಮೋಹನ್ ತಲಕಾಲುಕೊಪ್ಪ, ಶ್ರೀ ಮುತ್ತುರಾಜು (ತಾಂತ್ರಿಕಾಧಿಕಾರಿ), ಹಾಗೂ
ಡಾ. ಎಂ. ಜಿ ನಾಯಕ್

ಪ್ರಕಟಣೆ: ಡಾ. ಎಂ.ಜಿ. ನಾಯಕ್, ನಿರ್ದೇಶಕರು (ಪ್ರಭಾರ) ಹಾಗೂ ಪ್ರಧಾನ ವಿಜ್ಞಾನಿ (ತೋಟಗಾರಿಕೆ), ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು

ತಂತ್ರಾಂಶ ಅಭಿವೃದ್ಧಿ: ಮಾರ್ಕೆಟಿಂಗ್ ಮೈಂಡ್ಸ್, ಜೈಪುರ, ರಾಜಸ್ತಾನ

ಆರ್ಥಿಕ ನೆರವು: ತೋಟಗಾರಿಕೆಯ ಸಮಗ್ರ ಅಭಿವೃದ್ಧಿ ಮಿಷನ್, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ, ನವದೆಹಲಿ ಮತ್ತು ಡಾ. ವೆಂಕಟೇಶ್ ಹುಬ್ಬಳ್ಳಿ, ನಿರ್ದೇಶಕರು, ಗೇರು ಮತ್ತು ಕೊಕೊ ಅಭಿವೃದ್ಧಿ ನಿರ್ದೇಶನಾಲಯ, ಕೊಚ್ಚಿನ್.

ದಯವಿಟ್ಟು ಗಮನಿಸಿ: ಈಗ ಹೊರಬಂದಿರುವುದು ಮೊದಲ ಆವೃತ್ತಿ. ಹಾಗಾಗಿ. ಇದರಲ್ಲಿ ಇನ್ನೂ ಹಲವಾರು ವಿಷಯಗಳನ್ನು ಸುಧಾರಿಸಬೇಕಿದೆ. ಜೊತೆಗೆ ಈ ಕಿರುತಂತ್ರಾಂಶ ಬಳಸಲು ಅಂತರ್ಜಾಲ ಸಂಪರ್ಕ ಅತೀ ಅಗತ್ಯ. ಇದಿಲ್ಲದೆ ಮಾಹಿತಿ ಕೊಡುವಂತೆ ಮಾಡಲು ಪ್ರಸಕ್ತ ಕೆಲವು ತಂತ್ರಜ್ಞಾನದ ತೊಡಕುಗಳಿವೆ. ಮುಂದಿನ ದಿನಗಳಲ್ಲಿ ಇವು ಸರಿಹೋಗಬಹುದು.

 

 

ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್ – https://play.google.com/store/apps/details?id=com.cashew.icar&hl=en_IN

ಮಾಹಿತಿ ಮತ್ತು ಲೇಖನ: – ಡಾ. ಮೋಹನ್ ತಲಕಾಲುಕೊಪ್ಪ , 9902273468 mohangs2007@gmail.com

Tags: cashewCashew India appkarnatakamangaluruNational Cashew Research Centeputturu
ShareTweetSendShare
Join us on:

Related Posts

Astrology

Astrology : ” 27 ಜನ್ಮ ನಕ್ಷತ್ರಗಳ ಗುಣಲಕ್ಷಣ ಅರ್ಥ ಸಹಿತ ಸಂಪೂರ್ಣ ಮಾಹಿತಿಗಳ ವಿವರಣೆ ತಿಳಿಯಿರಿ “

by Naveen Kumar B C
March 22, 2023
0

" 27 ಜನ್ಮ ನಕ್ಷತ್ರಗಳ ಗುಣಲಕ್ಷಣ ಅರ್ಥ ಸಹಿತ ಸಂಪೂರ್ಣ ಮಾಹಿತಿಗಳ ವಿವರಣೆ ತಿಳಿಯಿರಿ " ಭಾಗ 3 19. ಮೂಲಾ ನಕ್ಷತ್ರ ಚಿಹ್ನೆ- ಕಟ್ಟಿರುವ ಬೇರುಗಳ...

Kantara

Kantara : ಯುಗಾದಿ ಹಬ್ಬಕ್ಕೆ “ಕಾಂತಾರ” ಅಪ್ಡೇಟ್ ನೀಡಿದ ಹೊಂಬಾಳೆ ತಂಡ….

by Naveen Kumar B C
March 22, 2023
0

Kantara : ಯುಗಾದಿ ಹಬ್ಬಕ್ಕೆ “ಕಾಂತಾರ” ಅಪ್ಡೇಟ್ ನೀಡಿದ ಹೊಂಬಾಳೆ ತಂಡ….   ಹೊಂಬಾಳೆ ಫಿಲ್ಮ್ ನಿರ್ಮಾಣದಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರ 'ಕಾಂತಾರ' ಚಿತ್ರತಂಡದಿಂದ ಯುಗಾದಿ...

Hardik pandya

IND vs AUS : ಸರಣಿ ನಿರ್ಣಾಯಕ ಪಂದ್ಯದಲ್ಲಿ 270 ರನ್ ಟಾರ್ಗೆಟ್  ನೀಡಿದ ಆಸೀಸ್…. 

by Naveen Kumar B C
March 22, 2023
0

IND vs AUS : ಸರಣಿ ನಿರ್ಣಾಯಕ ಪಂದ್ಯದಲ್ಲಿ 270 ರನ್ ಟಾರ್ಗೆಟ್  ನೀಡಿದ ಆಸೀಸ್…. ಭಾರತ  ಆಸ್ಟ್ರೇಲಿಯಾ ಏಕದಿನ ಸರಣಿಯ ಕೊನೆಯ ಮತ್ತು ನಿರ್ಣಾಯಕ ಪಂದ್ಯಲ್ಲಿ ...

Delhi Budget

Delhi budget :  2023 -24 ನೇ ಸಾಲಿನ 78,800 ಕೋಟಿ ಬಜೆಟ್ ಮಂಡಿಸಿದ ಆಪ್ ಸರ್ಕಾರ… 

by Naveen Kumar B C
March 22, 2023
0

Delhi budget :  2023 -24 ನೇ ಸಾಲಿನ 78,800 ಕೋಟಿ ಬಜೆಟ್ ಮಂಡಿಸಿದ ಆಪ್ ಸರ್ಕಾರ… ಕೇಂದ್ರ ಸರ್ಕಾರದೊಂದಿಗೆ ಸಂಘರ್ಷದ ನಡುವೆಯೂ ದೆಹಲಿಯ ಆಮ್ ಆದ್ಮಿ...

Devanahalli venkataswamy

Devanahalli :  ಮಾಜಿ ಶಾಸಕ,  ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವೆಂಕಟಸ್ವಾಮಿಗೆ ಹೃದಯಾಘಾತ…. 

by Naveen Kumar B C
March 22, 2023
0

Devanahalli :  ಮಾಜಿ ಶಾಸಕ,  ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವೆಂಕಟಸ್ವಾಮಿಗೆ ಹೃದಯಾಘಾತ…. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಮಾಜಿ ಶಾಸಕ‌ ವೆಂಕಟಸ್ವಾಮಿ ಅವರಿಗೆ  ಹೃದಯಾಘಾತವಾಗಿದ್ದು, ಬೆಂಗಳೂರಿನ ಖಾಸಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology

Astrology : ” 27 ಜನ್ಮ ನಕ್ಷತ್ರಗಳ ಗುಣಲಕ್ಷಣ ಅರ್ಥ ಸಹಿತ ಸಂಪೂರ್ಣ ಮಾಹಿತಿಗಳ ವಿವರಣೆ ತಿಳಿಯಿರಿ “

March 22, 2023
Kantara

Kantara : ಯುಗಾದಿ ಹಬ್ಬಕ್ಕೆ “ಕಾಂತಾರ” ಅಪ್ಡೇಟ್ ನೀಡಿದ ಹೊಂಬಾಳೆ ತಂಡ….

March 22, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram