ಕಾಂತರಾಜು ಸಮಿತಿ ಸಿದ್ಧಪಡಿಸಿರುವ ಜಾತಿಗಣತಿ ವರದಿ ಇದೀಗ ಕರ್ನಾಟಕದ ರಾಜಕೀಯ ವಾತಾವರಣವನ್ನು ಬಿರುಗಾಳಿಯಾಗಿ ತಿರುಗಿಸಿದೆ. ಈ ವರದಿ ರಾಜ್ಯದ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಚಿತ್ರಣವನ್ನು ನಿರೂಪಿಸುವ ಮಹತ್ವದ ದಾಖಲೆಯಾಗಿ ಪರಿಗಣಿಸಲ್ಪಡುತ್ತಿದ್ದು, ಕಾಂಗ್ರೆಸ್ ಪಕ್ಷದಿಂದ ಇದನ್ನು ಸಮರ್ಥಿಸುತ್ತಿದೆ.
ವಿವಿಧ ಜಾತಿಗಳ ಸಂಖ್ಯಾತ್ಮಕ ವಿವರಗಳನ್ನು ಒಳಗೊಂಡಿರುವ ಈ ವರದಿ ಕಾಂಗ್ರೆಸ್ ಪಕ್ಷದ ಪ್ರಕಾರ ವೈಜ್ಞಾನಿಕವಾಗಿ ಹಾಗೂ ಸಮಗ್ರವಾಗಿ ಸಿದ್ಧಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ವಿರೋಧಪಕ್ಷಗಳು ಈ ವರದಿಯನ್ನು ಅವೈಜ್ಞಾನಿಕ ಎಂದು ತಿರಸ್ಕರಿಸುತ್ತಿದ್ದು, ಇದು ರಾಜಕೀಯ ಲಾಭಕ್ಕಾಗಿ ಉದ್ದೇಶಿತ ವರದಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿವೆ.
ಈ ವರದಿಯ ಪ್ರಕಾರ, ರಾಜ್ಯದಲ್ಲಿ ಒಟ್ಟು 108 ಬಗೆಯ ಜಾತಿಗಳನ್ನು ಒಳಗೊಂಡ ಪರಿಶಿಷ್ಟ ಜಾತಿ ಸಮುದಾಯದ ಜನಸಂಖ್ಯೆ 1 ಕೋಟಿ ದಾಟಿದೆಯೆಂದು ಹೇಳಲಾಗಿದ್ದು, ಆದರೆ ವಿಶಿಷ್ಟ ಅಂಶವೆಂದರೆ ಮುಸ್ಲಿಂ ಸಮುದಾಯವು 75 ಲಕ್ಷ ಜನಸಂಖ್ಯೆಯೊಂದಿಗೆ ರಾಜ್ಯದ ಅತಿದೊಡ್ಡ ಜಾತಿಯಾಗಿ ಹೊರಹೊಮ್ಮಿದೆ ಎಂಬುದಾಗಿದೆ. ಈ ಅಂಶ ಬಹಿರಂಗವಾಗುತ್ತಿದ್ದಂತೆ, ವಿವಿಧ ಸಮುದಾಯಗಳೊಳಗಿನ ಚರ್ಚೆಗೂ, ರಾಜಕೀಯ ಗದ್ದಲಕ್ಕೂ ಕಾರಣವಾಗಿದೆ.
ಈ ಕುರಿತು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದು, “ಸಮಿತಿ ಬಹುಮಾನ್ಯವಾದ ರೀತಿಯಲ್ಲಿ ವರದಿಯನ್ನು ಸಿದ್ಧಪಡಿಸಿದೆ. 1 ಕೋಟಿ 37 ಲಕ್ಷ ಕುಟುಂಬಗಳ ಮನೆ ಮನೆಗೂ ತೆರಳಿ ಸಹಿಯನ್ನು ಪಡೆದು ಡೇಟಾ ಸಂಗ್ರಹಿಸಲಾಗಿದೆ. ಎಲ್ಲವೂ ದಾಖಲಾಗಿದ್ದು, ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ದಾಖಲೆ ಇದೆ. ಇಚ್ಛೆಯಿದ್ದರೆ ಪರಿಶೀಲಿಸಬಹುದು,” ಎಂದು ಹೇಳಿದರು.
ಅಲ್ಲದೆ, ಏಪ್ರಿಲ್ 17 ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಈ ವರದಿ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು, ತಪ್ಪುಗಳು ಕಂಡುಬಂದಲ್ಲಿ ತಕ್ಕ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತೀರ್ಮಾನ ಮಾಡಲಾಗುತ್ತದೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.
ಈ ಮಧ್ಯೆ, ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ಜಾತಿಗಳ ಜನಸಂಖ್ಯೆಯ ಪಟ್ಟಿಗಳು ವೈರಲ್ ಆಗುತ್ತಿರುವುದು ಜನಮನದಲ್ಲಿ ಮತ್ತಷ್ಟು ಕುತೂಹಲವನ್ನು ಹಾಗೂ ಆತಂಕವನ್ನೂ ಮೂಡಿಸಿದೆ. ರಾಜ್ಯದ ಜನಸಂಖ್ಯಾ ಸ್ವರೂಪದ ಈ ಮಹತ್ವದ ಮಾಹಿತಿ ಮುಂದಿನ ರಾಜಕೀಯ ತೀರ್ಮಾನಗಳಿಗೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದು ಕಾತುರದಿಂದ ಎದುರುನೋಡಲಾಗುತ್ತಿದೆ.
![{"remix_data":[],"source_tags":[],"total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false,"used_sources":{"version":1,"sources":[{"id":"435250766003211","type":"ugc"},{"id":"441845485021211","type":"ugc"},{"id":"289170894054211","type":"ugc"}]}}](https://saakshatv.com/wp-content/uploads/2025/04/Picsart_25-04-14_06-55-47-317-750x500.jpg)







