casting couch
ಮದುವೆಯಾಗುವುದಾಗಿ ನಂಬಿಸಿ ನಿರ್ದೇಶಕ ಮಾಡಿದ್ದೇನು..? ನಟಿ ಹೇಳಿದ್ದೇನು..!
ಮುಂಬೈ: ಸಿನಿಮಾರಂಗದಲ್ಲಿ ನಟಿಯರು ಲೈಂಗಿಕ ಕಿರುಕುಳಗಳಿಗೆ ಒಳಗಾಗುವುದು, ಅವಕಾಶ ಕೊಡಿಸುವುದಾಗಿ ಹೇಳಿ ಅತ್ಯಾಚಾರ ಮಾಡುವ ಪ್ರಕರಣಗಳು ಈಗಾಗಲೇ ಅನೇಕ ಬಾರಿ ಕೇಳಿ ಬಂದಿವೆ. ಕಾಸ್ಟಿಂಗ್ ಕೌಚ್ ಬಗ್ಗೆ ಅನೇಕ ನಟಿಯರು ಈಗಾಗಲೇ ಆರೋಪಗಳನ್ನ ಮಾಡಿದ್ದಾರೆ. ಇದೀಗ ಇದಕ್ಕೆ ಪೂರಕವೆಂಬ ಘಟನೆ ಮತ್ತೊಮ್ಮೆ ಬಾಲಿವುಡ್ ಅಂಗಳದಲ್ಲಿ ಬಾರೀ ಸದ್ದು ಮಾಡ್ತಿದೆ.
ಅಂದ್ಹಾಗೆ ಇದೀಗ ಇಂತಹ ಆರೋಪ ಕೇಳಿ ಬಂದಿರೋದು ನಿರ್ದೇಶಕ ಆಯುಷ್ ತಿವಾರಿ ವಿರುದ್ಧ. ನಟಿಯೊಬ್ಬರು ನಿರ್ದೇಶಕನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾರೆ. ಹೌದು ಆಯುಷ್ ತಿವಾರಿ ಬಾಲಿವುಡ್ ಸಿನಿಮಾ ಮತ್ತು ಧಾರವಾಹಿಗಳಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಮೋಸಮಾಡಿದ್ದಾರೆ. ಇದೇ ನೆಪ ಹೇಳುತ್ತಾ, ಮಸದುವೆಯಾಗುವುದಾಗಿ ನಂಬಿಸಿ ಸತತ 2ಗಳಿಂದಲೂ ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ. ಆದ್ರೆ ಕಳೆದ ಜುಲೈನಲ್ಲಿ ನಾನು ಗರ್ಭವತಿಯಾದೆ. ಆದರೆ ಮದುವೆಯಾಗಲು ನಿರಾಕರಿಸಿ, ಅವರ ಸ್ನೇಹಿತರ ಎದುರು ನನ್ನನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ರಂಗೀಲಾ ಬೆಡಗಿ ಊರ್ಮಿಳಾ ಮಾತೋಂಡ್ಕರ್ ಈಗ ಮಹಾರಾಷ್ಟ್ರದ MLC..?
ಅಲ್ಲದೇ ಈ ವಿಚಾರವಾಗಿ ನ.16ರಂದು ನಟಿ ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ತನ್ನ ವಿರುದ್ಧ ದೂರು ದಾಖಲಾಗ್ತಿದ್ದಂತೆ ನಿರ್ದೇಶಕ ಆಯುಷ್ ಕೇಸ್ ವಾಪಸ್ ಪಡೆಯುವಂತೆ ಬೆದರಿಸಿದ್ದಾರೆ. ಅಲ್ಲದೇ ಕೇಸ್ ಹಿಂಪಡೆಯದಿದ್ದರೆ ಖಾಸಗಿ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುವುದಾಗಿಯೂ ಧಮ್ಕಿ ಹಾಕಿದ್ದಾರೆ ಎಂದು ನಟಿ ಆರೋಪದಲ್ಲಿ ಉಲ್ಲೇಖಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
casting couch