urmila mathondkar
ರಂಗೀಲಾ ಬೆಡಗಿ ಈಗ ಮಹಾರಾಷ್ಟ್ರದ MLC..?
ನಟಿ ಹಾಗೂ ಮಾಜಿ ಕಾಂಗ್ರೆಸ್ ನಾಯಕಿ ಊರ್ಮಿಳಾ ಮತೋಡ್ಕರ್ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸಮ್ಮುಖದಲ್ಲಿ ಶಿವಸೇನಾ ಪಕ್ಷ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಿಷ್ಟುದಿನಗಳ ಕಾಲ ಹರಿದಾಡ್ತಿದ್ದ ಎಲ್ಲಾ ಊಹಾಪೋಹಳಿಗೆ ತೆರೆಬಿದ್ದಿದೆ.
ಆದ್ರೆ ಊರ್ಮಿಳಾ ಮತೋಡ್ಕರ್ ಅವರ ನಡೆ ಟೀಕೆಗೂ ಹಾಗೂ ಆಶ್ಚರ್ಯಕ್ಕೂ ಕಾರಣವಾಗಿದೆ. ಯಾಕಂದ್ರೆ ಕೆಲವು ದಿನಗಳಿಂದಲೂ ಅವರು ಶಿವಸೇನೆ ಸೇರಲಿದ್ದಾರೆ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗುರಿಯಾಗಿತ್ತು. ಆದರೆ ಇದನ್ನ ತಳ್ಳಿ ಹಾಕಿದ್ದ ಊರ್ಮಿಳಾ ನಾನು ಶಿವಸೇನೆ ಸೇರ್ಪಡೆಯಾಗೋದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಹೇಳಿಕೆ ನೀಡಿ ಕೆಲವೇ ದಿನಗಳಲ್ಲಿ ಶಿವಸೇನೆ ಸೇರಿದ್ದಾರೆ.
ಅಂದ್ಹಾಗೆ ಊರ್ಮಿಳಾ ಮತೋಡ್ಕರ್ ಅವರು ಈ ಹಿಂದೆ ಕಾಂಗ್ರೆಸ್ ನಲ್ಲಿದ್ದರು. ಆದ್ರೆ 2019 ರ ಲೋಕಸಭೆ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಸೋತ ನಂತರ ಕಾಂಗ್ರೆಸ್ ಗೆ ಬೈ ಬೈ ಹೇಳಿದ್ರು. ಅಷ್ಟೇ ಅಲ್ಲ ಮತ್ತೆ ಕೆಲ ಊಹಾಪೋಹಗಳ ಪ್ರಕಾರ ಊರ್ಮಿಳಾ ಎಂಎಲ್ ಸಿ ಆಗಲಿದ್ದಾರೆ ಎನ್ನಲಾಗ್ತಿದೆ. ಅದ್ರಲ್ಲೂ ಪಕ್ಷ ಅಧಿಕೃತವಾಗಿ ಸೇರ್ಪಡೆಗೊಂಡ ಬಳಿಕ ಊರ್ಮಿಳಾ ಎಂಎಲ್ ಸಿ ಆಗೋದು ಪಕ್ಕಾ ಅಂತಲೇ ಹೇಳಲಾಗಿದೆ.
urmila mathondkar
26/ 11 ಮುಂಬೈ ದಾಳಿ: 12 ವರ್ಷಗಳ ಬಳಿಕ ಮೀನುಗಾರರ ಕುಟುಂಬಗಳಿಗೆ ಪರಿಹಾರ ಧನ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








