Catch Contraversy : ಕ್ಯಾಚ್ ಕ್ಯಾಚ್ ಹಿಡಿದಿದ್ದು ನಿಯಮಬದ್ಧವಾಗಿದೆ : ಐಸಿಸಿ ಸ್ಪಷ್ಟನೆ
ಆಸ್ಟ್ರೇಲಿಯಾದ ಟಿ20 ಲೀಗ್ ಬಿಗ್ ಬ್ಯಾಶ್ ಲೀಗ್ನಲ್ಲಿ ಕ್ಯಾಚ್ಗೆ ವಿವಾದ ಸೃಷ್ಟಿಸಿತ್ತುಘಿ.ಈ ಬಗ್ಗೆ ಐಸಿಸಿ ಸ್ಪಷ್ಟನೆ ನೀಡಿದೆ.ಐಸಿಸಿ ತನ್ನ ನಿಯಮವನ್ನು ವಿವರಿಸಿದೆ.
ಐಸಿಸಿ ನಿಯಮ 19.5.2: ಫೀಲ್ಡರ್ ನೆಲದ ಜೊತೆ ಸಂಪರ್ಕ ಇಲ್ಲದಿದ್ದರೆ ಅವರು ಬೌಂಡರಿ ಗೆರೆಯೊಳಗೆ ಇದ್ದಾರೆ ಎಂದು ಪರಿಗಣಿಸಲಾಗುತ್ತದೆ ಎಂದು ಐಸಿಸಿ ಹೇಳಿದೆ.
ಫೀಲ್ಡರ್ ಎಲ್ಲಿಯವರೆಗೆ ಬೌಂಡರಿ ಗೆರೆಯೊಳಗೆ ಚೆಂಡನ್ನು ಮುಟ್ಟುತ್ತಾನೋ ಅವರಿಗೆ ಕ್ಯಾಚ್ ಪೂರ್ಣಗೊಳಿಸಲು ಅವಕಾಶ ಇರುತ್ತದೆ.
ಕ್ಯಾಚ್ ಹಿಡಿದಾಗ ಫೀಲ್ಡರ್ ಕಾಲು ನೆಲಕ್ಕೆ ತಾಗಿರಬಾರದು. ಮೈಕಲ್ ನೆಸರ್ ಬೌಂಡರಿ ಗೆರೆಯಲ್ಲಿ ಚೆಂಡು ಹಿಡಿಯಲು ಜಿಗಿದಿದ್ದು ಹಾಗು ನಂತರ ಕ್ಯಾಚ್ ಹಿಡಿದಿದ್ದು ಎಲ್ಲವೂ ನಿಯಮ ಬದ್ಧವಾಗಿದೆ. ಬ್ಯಾಟರ್ಗೆ ಔಟೆಂದು ಕೊಟ್ಟಿರುವ ತೀರ್ಪು ಸರಿಯಾಗಿದೆ ಎಂದು ಐಸಿಸಿ ಸ್ಪಷ್ಟನೆ ನೀಡಿದೆ.
ಬಿಗ್ ಬ್ಯಾಶ್ನಲ್ಲಿ ವಿವಾದಿತ ಕ್ಯಾಚ್
ಭಾನುವಾರ ನಡೆದ ಬ್ರಿಸ್ಬೇನ್ ಹೀಟ್ ಮತ್ತು ಸಿಡ್ನಿ ಸಿಕ್ಸರ್ ನಡುವಿನ ಪಂದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಾರ್ಕ್ ಸ್ಪಿಕೆಟ್ ಎಸೆತದಲ್ಲಿ ಸಿಡ್ನಿ ತಂಡದ ಜೋರ್ಡನ್ ಸಿಲ್ಕ್ ಬಾರಿಸಿದ ಚೆಂಡನ್ನು ಬೌಂಡರಿ ಗೆರೆ ಬಳಿ ಇದ್ದ ಫೀಲ್ಡರ್ ಮೈಕಲ್ ನೆಸರ್ ನಿಯಂತ್ರಣ ತಪ್ಪಿದರು.
ಮೊದಲು ಚೆಂಡನ್ನು ಮೇಲೆಕ್ಕೆಸೆದು ಬೌಂಡರಿ ಒಳಕ್ಕೆ ಬಂದು ಕ್ಯಾಚ್ ಹಿಡಿದರು. ಸೋಶಿಯಲ್ ಮೀಡಿಯಾಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ನಿಯಮ ಬದಲಿಸುವಂತೆ ಮನವಿ ಮಾಡಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ.