ಕೊರೋನಾ ಭೀತಿ ಹಿನ್ನೆಲೆಯಲ್ಲಿ ಹಳೆ ಮೈಸೂರು ಭಾಗದ ಸಿಬಿಎಸ್’ಸಿ ಶಾಲೆಗಳ ಎಲ್.ಕೆ.ಜಿ, ಯು.ಕೆ.ಜಿ, 1 ರಿಂದ 4ನೇ ತರಗತಿ ಮಕ್ಕಳಿಗೆ ಪರೀಕ್ಷೆ ರದ್ದುಗೊಳಿಸಿ ಮುಂದಿನ ತರಗತಿಗೆ ತೇರ್ಗಡೆ ಮಾಡಲು ನಿರ್ಧರಿಸಲಾಗಿದೆ. 5 ರಿಂದ 9ನೇ ತರಗತಿಯ ವರೆಗಿನ ಮಕ್ಕಳಿಗೆ ಪ್ರಿಪರೇಟರಿ ಪರೀಕ್ಷೆಯನ್ನೇ ಅಂತಿಮ ಪರೀಕ್ಷೆಯನ್ನಾಗಿ ಪರಿಗಣಿಸುವ ನಿರ್ಧಾರ ಮಾಡಲಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳ ಖಾಸಗಿ ಸಿಬಿಎಸ್ಸಿ ಶಾಲೆಗಳ ಒಕ್ಕೂಟ ಈ ನಿರ್ಧಾರ ಕೈಗೊಂಡಿದ್ದು, 5 ಜಿಲ್ಲೆಗಳ 240 ಸಿಬಿಎಸ್ಸಿ ಶಾಲೆಗಳಿಂದ ಒಪ್ಪಿಗೆ ಸಿಕ್ಕಿದೆ.
ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾರ್ಚ್ 20ರ ಒಳಗೆ ಕಡ್ಡಾಯವಾಗಿ ರಜೆ ಘೋಷಣೆ ಮಾಡುವಂತೆ ಹಾಗೂ ಯಾವುದೇ ಬೇಸಿಗೆ ಶಿಬಿರಕ್ಕೆ ಮಕ್ಕಳನ್ನು ಸೇರಿಸದಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಬಿಎಸ್ಸಿ ಖಾಸಗಿ ಶಾಲೆಗಳ ಒಕ್ಕೂಟ ಅಧ್ಯಕ್ಷ ಸುಧಾಕರ್ ಶೆಟ್ಟಿ ತಿಳಿಸಿದ್ದಾರೆ.
ಬಿಜೆಪಿಯ ಭದ್ರಕೋಟೆ ಧೂಳೀಪಟ ಮಾಡಿದ ಪ್ರಶಾಂತ್ ಕಿಶೋರ್: ಮಣ್ಣು ಮುಕ್ಕಿದ ಬಿಜೆಪಿ ಮತ್ತು ಆರ್ಜೆಡಿ- ಬಂಕಿಪುರ ಉಪಚುನಾವಣೆಯಲ್ಲಿ ಜನ ಸುರಾಜ್ ಪಕ್ಷಕ್ಕೆ ಭರ್ಜರಿ ವಿಜಯ
ಪಾಟ್ನಾ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷ ಬಿಹಾರ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದಿದೆ. ಬಿಜೆಪಿಯ ಅಭೇದ್ಯ ಕೋಟೆ ಎಂದೇ ಪರಿಗಣಿಸಲ್ಪಟ್ಟಿದ್ದ ಬಂಕಿಪುರ...






