C.C.Patil | ಅವಂದು ಏನು ನಾಲಿಗೆಯೋ..? ಇನ್ನೇನೋ..? : ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿ
ಗದಗ : ಏನು ಅವಂದು ನಾಲಿಗೆಯೋ..? ಏನೋ ಅವಂದು ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಸಚಿವ ಸಿ.ಸಿ.ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರಿ ಕೆಲಸಕ್ಕೆ ಹೋಗಬೇಕಂದ್ರೆ ಹುಡಗೀರು ಮಂಚ ಹತ್ತಬೇಕು, ಹುಡುಗರು ಲಂಚ ಕೊಡಬೇಕು ಅನ್ನೋ ಪ್ರಿಯಾಂಕ ಖರ್ಗೆ ಹೇಳಿಕೆಗೆ ಸಚಿವ ಸಿ ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಸಿ ಪಾಟೀಲ್, ಹೈಹರಾಬಾದ ಕರ್ನಾಟಕಕ್ಕೆ ಹಿಂದುಳಿದ ಪ್ರದೇಶ ಅಂತಾ ಹಣೆ ಪಟ್ಟಿ ಕಟ್ಟಿದ್ರು. ಯಡಿಯರಪ್ಪ ಅವರು ಹಿಂದುಳಿದ ಪ್ರದೇಶ ಅಂದ್ರೆ ಆ ಭಾಗದ ಜನಕ್ಕೆ ನೋವಾಗತ್ತೆ ಅಂತಾ ಕಲ್ಯಾಣ ಕರ್ನಾಟಕ ಮಾಡಿದ್ರು. ಆ ಹಿಂದಳಿದ ಪ್ರದೇಶವನ್ನ ಇಷ್ಟು ದಿನ ಪ್ರತಿನಿಧಿಸಿದವರು ಅವರ ತಂದೆ ಮಲ್ಲಿಕಾರ್ಜುನ ಖರ್ಗೆ, ದಿ. ಧರ್ಮಸಿಂಗ್ ಅವರು. ಆ ಭಾಗದ ರಸ್ತೆಗಳನ್ನ ನೋಡಿ, ಅವಕ್ಕೆ ಎಷ್ಟು ಖರ್ಚು ಮಾಡಿದ್ದಾರೆ ನೋಡಿ, ಅದು ಎಲ್ಲಿಗೆ ಹೋಯಿತು, ಅದರ ಬಗ್ಗೆ ಮಾತಾಡಲಿ ಎಂದು ಹೇಳಿದರು.

ಮಾತಾಡೋ ಭರದಲ್ಲಿ ಮಾತಾಡೋವಾಗ ಅದಕ್ಕೊಂದು ಇತಿ ಮಿತಿ ಇರಬೇಕು. ಹೆಣ್ಣುಮಕ್ಕಳು ಸರ್ಕಾರಿ ನೌಕರಿಯೊಳಗೆ ಇದ್ದಾರೆ ಅಂದ್ರೆ ಅವರಿಗೆ ಅಸಹ್ಯವಾಗಿ ಮಾತಾಡೋದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಆಜಾದಿ ಕಾ ಅಮೃತ್ ಮಹೋತ್ಸವ ಸಮಯದಲ್ಲಿ ಎಲ್ಲರೂ ನಗುನಗುತಾ ಇರಬೇಕು. ಮಾತಿಗೆ ಒಂದು ಇತಿ ಮಿತಿ ಇರಬೇಕು. ಸ್ವಾತಂತ್ರ್ಯ ಭಾರತಕ್ಕೆ ನಾರಿಯರ ಹೋರಾಟ ಇಲ್ಲವಾ? ರಾಣಿ ಚನ್ನಮ್ಮ ಇದ್ದಾರೆ, ಅಬ್ಬಕ್ಕ ಇದ್ದಾರೆ ಅಂತಹ ನಾರಿ ಕುಲಕ್ಕೆ ಅವಮಾನ ಮಾಡೋದಾ? ಪ್ರಿಯಾಂಕ್ ಖರ್ಗೆ ಬೇಶರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.