ಆಫ್ಟರ್ ಪಾರ್ಟಿ ಮೇಲೆ ಸಿಸಿಬಿ ದಾಳಿ
ಬೆಂಗಳೂರು: ಬೆಂಗಳೂರಿನ ಮಾರತ್ತಹಳ್ಳಿಯ ಓಟರ್ ರಿಂಗ್ ರಸ್ತೆಯಲ್ಲಿರೋ ಆಫ್ಟರ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.
ಆಫ್ರಿಕಾ ಮೂಲದ ವ್ಯಕ್ತಿಯೊಬ್ಬ ಪಾರ್ಟಿ ಆರ್ಗನೈಸ್ ಮಾಡಿದ್ದ. ಈ ಪಾರ್ಟಿ ಅವಧಿಗೂ ಮೀರಿ ಬೆಳಗಿನ ಜಾವ 3.30 ತನಕ ನಡೆಯುತ್ತಿತ್ತು. ಹೀಗಾಗಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ 64 ಯುವಕರು ಮತ್ತು 24 ಯುವತಿಯರು ಪತ್ತೆಯಾಗಿದ್ದಾರೆ.
ಇನ್ನೂ ಸೌತ್ ಪಾರ್ಟಿಯಲ್ಲಿ ಉತ್ತರ ಭಾರತ ಮೂಲದ ಯುವತಿಯರೇ ಹೆಚ್ಚು ಮಂದಿ ಇದ್ದಿದ್ದು, ಯುವಕ, ಯುವತಿಯರು ಮತ್ತಿನಲ್ಲಿ ಕುಣಿದು ಕುಪ್ಪಳಿಸ್ತಿದ್ದರು. ಆರ್ಗನೈಸರ್ ಯುವಕರಿಗೆ 400, ಯುವತಿಯರಿಗೆ 300 ರೂಪಾಯಿ ಎಂಟ್ರಿ ಫೀಸ್ ಇಟ್ಟಿದ್ದ. ಪಾರ್ಟಿಯಲ್ಲಿ ಡ್ರಗ್ಸ್ ಇರುವ ಅನುಮಾನ ಇತ್ತು. ಆದರೆ ಹೋಟೆಲ್ ನಲ್ಲಿ ಡ್ರಗ್ಸ್ ದೊರೆತಿಲ್ಲ ಬದಲಾಗಿ ಪಾರ್ಟಿಯಲ್ಲಿದ್ದವರು ನಶೆಯಲ್ಲಿರೋ ಮಾಹಿತಿ ದೊರೆತಿದೆ.
ಸದ್ಯ ಪಾರ್ಟಿಯಲ್ಲಿದ್ದವರನ್ನ ಮೆಡಿಕಲ್ ಚೆಕಪ್ ಮಾಡಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಹೆಚ್ ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.