ಆಡಿಯೋ ನನ್ನದೇ, ಡಿಕೆಶಿ ಬಳಿ ಹೋಗಿದ್ದು ನಿಜ : ಸಿಡಿ ಯುವತಿ

1 min read
CD case

ಆಡಿಯೋ ನನ್ನದೇ, ಡಿಕೆಶಿ ಬಳಿ ಹೋಗಿದ್ದು ನಿಜ : ಸಿಡಿ ಯುವತಿ

ಬೆಂಗಳೂರು : ಶುಕ್ರವಾರ ಸಂಜೆ ಲೀಜ್ ಆಗಿರುವ ಆಡಿಯೋ ಕ್ಲಿಪ್ ಬಗ್ಗೆ ಮಾಜಿ ಸಚಿವರ ರಾಸಲೀಲೆ ವಿಡಿಯೋದಲ್ಲಿರುವ ಎನ್ನಲಾಗಿರುವ ಯುವತಿ ಸ್ಪಷ್ಟೀಕರಣ ನೀಡಿದ್ದಾರೆ.

ಇಂದು ಬೆಳಿಗ್ಗೆ ಯುವತಿಯ ಮತ್ತೊಂದು ವಿಡಿಯೋ ರಿಲೀಸ್ ಆಗಿದ್ದು, ನಿನ್ನೆ ಸಂಜೆ ಲೀಕ್ ಆದ ಆಡಿಯೋ ಕ್ಲಿಪ್ ತಮ್ಮದೇ ಎಂದು ವಿಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ.

ಹಾಗೆ ಸಹಾಯ ಕೇಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಿ ಹೋಗಿದ್ದು ನಿಜ ಎಂದು ತಿಳಿಸಿದ್ದಾರೆ.

ಮಾರ್ಚ್ ಎರಡರಂದು ಸಿಡಿ ರಿಲೀಸ್ ಆದಾಗ ನನಗೆ ಭಯ ಆಗಿತ್ತು. ಹೀಗಾಗಿ ಮಾಧ್ಯಮಗಳಲ್ಲಿ ನನಗೆ ಪರಿಚಯವಿದ್ದ ನರೇಶಣ್ಣನಿಗೆ ಫೋನ್ ಮಾಡಿ ಸಹಾಯ ಕೇಳಿದ್ದೆ.

ಆಗ ಅವರು ಇದು ದೊಡ್ಡ ಪ್ರಕರಣ, ಇದಕ್ಕೆ ರಾಜಕೀಯ ಮುಖಂಡರ ಸಹಾಯ ಬೇಕಿದೆ. ಡಿಕೆಶಿವಕುಮಾರ್ ಅಥವಾ ಸಿದ್ದರಾಮಯ್ಯ ಅವರನ್ನ ಸಹಾಯ ಕೇಳೋಣ ಎಂದು ನರೇಶ್ ಹೇಳಿದ್ರು.

d-k-shivakumar

ನರೇಶ್ ಅವರ ಸಲಹೆಯಂತೆ ನಾನು ಡಿಕೆಶಿವಕುಮಾರ್ ಅವರ ಮನೆ ಬಳಿ ಹೋಗಿದ್ದೆ ಆದ್ರೆ ಅವರು ಸಿಗಲಿಲ್ಲ. ಈ ಕಾರಣ ವಾಪಸ್ ಅಲ್ಲಿಂದ ಹೊರಡಬೇಕಾಯ್ತು.

ಇದೇ ವೇಳೆ ನನ್ನನ್ನು ಯಾರು ಅಪಹರಿಸಿಲ್ಲ ಎಂದು ಹೇಳಿರುವ ಯುವತಿ, ತಮ್ಮ ತಂದೆ ತಾಯಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಹಾಗೇ ಎಸ್‍ಐಟಿ ತನಿಖೆಯಿಂದ ನ್ಯಾಯ ಸಿಗುತ್ತೆ ಅನ್ನೋ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಂದು ದಿನದಲ್ಲಿ ಸರ್ಕಾರ ಬೀಳಿಸಿಬಲ್ಲೆ. ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ. ಅವರನ್ನ ಜೈಲಿಗೆ ಹಾಕಿಸುತ್ತೇನೆ ಎಂದು ಬಹಿರಂಗವಾಗಿಯೇ ಬೆದರಿಕೆ ಹಾಕುತ್ತಾರೆ.

ಎಷ್ಟೇ ಹಣ ಖರ್ಚಾಗಲಿ ಅಂದ್ರೆ ಏನರ್ಥ ಅನ್ನೋದನ ಜನರು ಅರ್ಥ ಮಾಡಿಕೊಳ್ಳಬೇಕು. ನಾಳೆ ನನ್ನನ್ನೇ ಕೊಲ್ಲಬಹುದು ಅಥವಾ ಅಪ್ಪ-ಅಮ್ಮನ ಜೀವಕ್ಕೆ ಅಪಾಯ ಉಂಟು ಮಾಡಬಹುದು.

ದಯವಿಟ್ಟು ಅಪ್ಪ-ಅಮ್ಮನ ಬೆಂಗಳೂರಿಗೆ ಕರೆ ತಂದು ರಕ್ಷಣೆ ಕೊಡಿ ಎಂದು ವಿಡಿಯೋದಲ್ಲಿ ಯುವತಿ ಮನವಿ ಮಾಡಿಕೊಂಡಿದ್ದಾರೆ.

chinthamani
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd