ಮಹಾನ್ ನಾಯಕ ಯಾರು ಎಂಬ ಮಾಹಿತಿ ನನಗಿದೆ : ಕುಮಾರಸ್ವಾಮಿ

1 min read
H.D.KUMARASWAMY

ಮಹಾನ್ ನಾಯಕ ಯಾರು ಎಂಬ ಮಾಹಿತಿ ನನಗಿದೆ : ಕುಮಾರಸ್ವಾಮಿ

ಬೀದರ್ : ಮಹಾನ್ ನಾಯಕ ಯಾರು ಎಂಬ ಬಗ್ಗೆ ನನಗೆ ಮಾಹಿತಿ ಇದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿನ್ನೆಲೆ ಮಹಾನ್ ನಾಯಕ ಹೆಸರು ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಈ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ ಮಹಾನ್ ನಾಯಕ ಯಾರು ಎಂಬ ಬಗ್ಗೆ ನನಗೆ ಮಾಹಿತಿ ಇದೆ ಎಂದಿದ್ದಾರೆ.

ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣದ ಬಗ್ಗೆ ಮೊದಲು ಮಾಹಿತಿ ಕೊಟ್ಟಿದ್ದೇ ನಾನು. ಈ ಪ್ರಕರಣ ಐದುಕೋಟಿ ಗೆ ಡೀಲ್ ಆಗಿದೆ. ನರೇಶ್ ಗೌಡ ಭಾಗಿಯಾಗಿದ್ದಾನೆ ಎಂದು ಹೆಸರು ಹೇಳಿದ್ದೇ ನಾನು. ಮಹಾನ್ ನಾಯಕ ಯಾರು ಎಂಬ ಬಗ್ಗೆ ನನಗೆ ಮಾಹಿತಿ ಇದೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ನವರು ಟ್ವಿಟ್ ವಾರ್ ನಡೆಸುತ್ತಿದ್ದಾರಲ್ಲ. ಫೋಟೋ ಗಳನ್ನು ಹಾಕಿಕೊಂಡು ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.

 h d kumaraswamy

ಇನ್ನು ಪ್ರತಿದಿನ ನನ್ನೊಂದಿಗೂ ಕನಿಷ್ಟ ಒಂದೂವರೆ ಸಾವಿರ ಜನ ಫೋಟೋ ತೆಗೆಸಿಕೊಳ್ಳುತ್ತಾರೆ. ಅವರಲ್ಲಿ ಯಾರು ಏನು ಎಂದು ನಮಗೇನು ಗೊತ್ತಾಗುತ್ತದೆ. ಐಎಂಎ ಕೇಸ್ ನಲ್ಲಿ ಆ ವ್ಯಕ್ತಿ ಯಾರು ಅಂತಲೇ ಗೊತ್ತಿರಲಿಲ್ಲ. ರೋಷನ್ ಬೇಗ್ ಒತ್ತಾಯದಿಂದ ಇಪ್ತಾರ್ ಕೂಟಕ್ಕೆ ಹೋಗಿ ಐದು ನಿಮಿಷ ಇದ್ದು ಒಂದು ಬಾದಾಮಿ ತಿಂದು ಬಂದಿದ್ದೆ. ಅಷ್ಟಕ್ಕೆ ಬಿಜೆಪಿಯವರು ಬಿರಿಯಾನಿ ತಿಂದು ಬಂದಿದ್ದೆ ಎಂದು ಗುಲ್ಲೆಬ್ಬಿಸಿದ್ರು. ಅದೇ ವ್ಯಕ್ತಿ ಬೆಸ್ಟ್ ಟ್ಯಾಕ್ಸ್ ಪೇಯರ್ ಅಂತಾ ಮೋದಿಯಿಂದ ಸನ್ಮಾನಿಸಿಕೊಂಡಿರುವ ಫೋಟೋ ಹಾಕಿಕೊಂಡಿದ್ದ. ಅದರ ಬಗ್ಗೆ ಯಾರು ಪ್ರಸ್ತಾಪಿಸಲೇ ಇಲ್ಲ. ಈಗ ಸಿಡಿ ಪ್ರಕರಣದಲ್ಲಿ ಎಸ್ ಐಟಿಯವರು ಸರಿಯಾದ ದಿಕ್ಕಿನಲ್ಲಿ ನಿಸ್ಪಕ್ಷ ಪಾತ ತನಿಖೆ ನಡೆಸಿ ವರದಿ ಕೊಡಬೇಕು. ಯಾರಿಗು ಹೆದರದೆ ಸತ್ಯ ಏನು ಎಂದು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd