ADVERTISEMENT
Friday, July 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪಟಾಕಿ ಬ್ಯಾನ್ – ಹಸಿರು ಪಟಾಕಿಗೆ ಗ್ರೀನ್ ಸಿಗ್ನಲ್; ಅಸಲಿಗೆ ಯಾವುದಿದು ಹಸಿರು ಪಟಾಕಿ?

Shwetha by Shwetha
November 7, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Bursting green crackers
Share on FacebookShare on TwitterShare on WhatsappShare on Telegram

ಪಟಾಕಿ ಬ್ಯಾನ್ – ಹಸಿರು ಪಟಾಕಿಗೆ ಗ್ರೀನ್ ಸಿಗ್ನಲ್; ಅಸಲಿಗೆ ಯಾವುದಿದು ಹಸಿರು ಪಟಾಕಿ? Bursting green crackers

ದೀಪಾವಳಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ದೀಪಗಳ ಹಬ್ಬ ದೀಪಾವಳಿ ಎಂದರೆ ಕಣ್ಣ ಮುಂದೆ ಬರುವುದು ಹಣತೆಯ ದೀಪಗಳ ಬೆಳಕಿನ ಜೊತೆಗೆ ಬಣ್ಣ ಬಣ್ಣದ ಪಟಾಕಿಗಳ ಚಿತ್ತಾರ. ಆದರೆ ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಹಸಿರು ಪಟಾಕಿ ಬಳಸಿ, ಸರಳ ದೀಪಾವಳಿ ಆಚರಿಸಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಕರೆ ನೀಡಿದ್ದಾರೆ.

Related posts

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀವಾ? ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು!: ಅಧಿಕಾರಿಗಳ ಬೆವರಿಳಿಸಿದ ಸಚಿವ ಕೃಷ್ಣಭೈರೇಗೌಡ- ಅಂಕಿಅಂಶಗಳ ಗೋಲ್ಮಾಲ್ ಕಂಡು ಸಚಿವರು ಗರಂ!

ಬೀದಿಬದಿ ವ್ಯಾಪಾರಿಗಳ ತೆರವು ಇಲ್ಲ, ಕೇವಲ ಸ್ಥಳಾಂತರ: ಸಚಿವ ಕೃಷ್ಣ ಬೈರೇಗೌಡ ಯೂಟರ್ನ್, ಜುಲೈ 10ರಿಂದ ಅನಾಥ ವಾಹನಗಳ ಸಫಾಯಿ ಶುರು

July 3, 2026
ವಿಧಿ-ವಿಧಾನವಿಲ್ಲದ ಹಿಂದೂ ವಿವಾಹ ಮಾನ್ಯವಲ್ಲ: ಗುಜರಾತ್ ಹೈಕೋರ್ಟ್

ವಿಧಿ-ವಿಧಾನವಿಲ್ಲದ ಹಿಂದೂ ವಿವಾಹ ಮಾನ್ಯವಲ್ಲ: ಗುಜರಾತ್ ಹೈಕೋರ್ಟ್

July 3, 2026

Bursting green crackers

Bursting green crackers

ಈ ಮೊದಲು ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದ್ದರೂ, ಬಳಿಕ ನಿರ್ಧಾರದಲ್ಲಿ ಸಣ್ಣ ಮಾರ್ಪಾಡು ಮಾಡಿ ಹಸಿರು ಪಟಾಕಿ ಬಳಕೆಗೆ ಅನುಮತಿ ನೀಡಲಾಗಿದೆ. ಹಾಗಾಗಿ ಈ ಬಾರಿ ಹಸಿರು ಪಟಾಕಿ ಮಹತ್ವವನ್ನು ಪಡೆದುಕೊಂಡಿದ್ದು, ಎಲ್ಲೆಡೆಯೂ ಭಾರೀ ಸುದ್ದಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹಸಿರು ಪಟಾಕಿ ಕುರಿತ ಒಂದಿಷ್ಟು ಮಾಹಿತಿ .

ಏನಿದು ಹಸಿರು ಪಟಾಕಿ ?

ಕಡಿಮೆ ಹೊಗೆ ಉಗುಳುವ ಪಟಾಕಿಗಳನ್ನು ಹಸಿರು ಪಟಾಕಿ ಎಂದು ಕರೆಯಲಾಗುತ್ತದೆ. ಹಸಿರು ಪಟಾಕಿ ಕಡಿಮೆ ಹೊಗೆ ಉಗುಳುವುದರಿಂದ ಪರಿಸರ ಮತ್ತು ಆರೋಗ್ಯದ ಮೇಲೆ ಕಡಿಮೆ ದುಷ್ಪರಿಣಾಮ ಬೀರುತ್ತವೆ ಎಂದು ಹೇಳಲಾಗಿದೆ. ವಿಜ್ಞಾನ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿಯ ಪ್ರಕಾರ ಶೇ.30 ರಿಂದ 35 ರಷ್ಟು ಕಡಿಮೆ ಪಾರ್ಟಿಕ್ಯುಲೇಟ್‌ ಮ್ಯಾಟರ್‌ (ಪಿಎಂ10 ಮತ್ತು ಪಿಎಂ2.5) ವಿಸರ್ಜನೆ ಮಾಡುವ ಹಾಗೂ ಶೇ.35ನಿಂದ 40ರಷ್ಟು ಕಡಿಮೆ ಎಸ್‌ಒ2 ಹಾಗೂ ನೈಟ್ರೋಜನ್‌ ಆಕ್ಸೈಡ್‌ ಉಗುಳುವ ಪಟಾಕಿಗಳನ್ನು ಹಸಿರು ಪಟಾಕಿ ಎಂದು ಕರೆಯಲಾಗುತ್ತದೆ.

ಸುಪ್ರೀಂ ಕೋರ್ಟ್ 2018 ಅಕ್ಟೋಬರ್‌ನಲ್ಲೇ ಹಸಿರು ಪಟಾಕಿ ಹೊರತುಪಡಿಸಿ ಬೇರಾವುದೇ ಪಟಾಕಿ ಸಿಡಿಸುವಂತಿಲ್ಲ ಎಂದು ಆದೇಶ ನೀಡಿತ್ತು. ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿತ್ತು ಮತ್ತು ಕಡಿಮೆ ಮಾಲಿನ್ಯಕಾರಕ ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ ನೀಡಿತ್ತು. ಹಲವಾರು ನಿಬಂಧನೆ ವಿಧಿಸಿ 2019 ಮೇನಿಂದ ಹಸಿರು ಪಟಾಕಿ ಉತ್ಪಾದನೆಗೆ ಸುಪ್ರೀಂಕೋರ್ಟ್‌ ಅವಕಾಶ ನೀಡಿತ್ತು.

ಯಕ್ಷಗಾನದ ಸವ್ಯಸಾಚಿ ನಮ್ಮೆಲ್ಲರ ಪ್ರೀತಿಯ ತಾಳಮದ್ದಲೆಯ ಅರ್ಥದಾರಿ ಗತ್ತು ಗಾಂಭೀರ್ಯದ ಯಕ್ಷಲೋಕದ ಆಸ್ತಿ ವಾಸುದೇವ ಸಾಮಗರು ಇನ್ನಿಲ್ಲ:

ಎನ್‌ಇಇಆರ್‌ (ವಿಜ್ಞಾನ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿ, ಎನ್ವಿರಾನ್ಮೆಂಟ್‌ ಇಂಜಿನಿಯರಿಂಗ್‌ ರೀಸರ್ಚ್ ಇನ್‌ಸ್ಟಿಟ್ಯೂಷನ್‌)ನ 24 ವಿಜ್ಞಾನಿಗಳು, ಸಂಶೋಧಕರು ಸುಪ್ರೀಂಕೋರ್ಟ್‌ನ ಸಲಹೆ ಮೇರೆಗೆ ಸತತ 9 ತಿಂಗಳ ಕಾಲ ಸಂಶೋಧನೆ ನಡೆಸಿ ಭಾರತದ ಮೊಟ್ಟಮೊದಲ ‘ಹಸಿರು ಪಟಾಕಿ’ ಅಭಿವೃದ್ಧಿಪಡಿಸಿದರು.

ಹಲವು ಸಂಶೋಧನೆ ಬಳಿಕ ಅಭಿವೃದ್ಧಿಪಡಿಸಲಾದ ಹಸಿರು ಪಟಾಕಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಹಸಿರು ಪಟಾಕಿಗಳಲ್ಲಿ ಅಲ್ಯುಮಿನಿಯಂ ಅಂಶ ಕಡಿಮೆ ಇದ್ದು, ಬೇರಿಯಂ ಸಾಲ್ಟ್‌ ಮತ್ತು ಆ್ಯಶ್‌ ಇರುವುದಿಲ್ಲ. ಪಟಾಕಿಗಳ ಶಬ್ದವನ್ನೂ 160 ಡೆಸಿಬಲ್‌ನಿಂದ 125 ಡೆಸಿಬಲ್‌ಗೆ ಇಳಿಸಬೇಕಿದ್ದು, ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷಾ ಸಂಸ್ಥೆಯು ಪಟಾಕಿಗಳನ್ನು ಪರೀಕ್ಷಿಸಿ ವರದಿ ನೀಡುತ್ತದೆ. ಅಲ್ಲಿ ಅಂಗೀಕೃತಗೊಂಡ ಪಟಾಕಿ ಮಾತ್ರ ಮಾರುಕಟ್ಟೆಯಲ್ಲಿ ‌ದೊರಕಲಿದೆ.

ಹಸಿರು ಪಟಾಕಿಗಳ ಮೇಲೆ ಹಸಿರು ಲೋಗೋ ಮತ್ತು ಕ್ವಿಕ್‌ ರೆಸ್ಪಾನ್ಸ್‌ (ಕ್ಯುಆರ್‌) ಕೋಡ್‌ ಇರಲಿದ್ದು, ಇದನ್ನು ಗುರುತಿಸಿ ಹಸಿರು ಪಟಾಕಿಗಳನ್ನು ಖರೀದಿ ಮಾಡಬಹುದಾಗಿದೆ.
ಮಾರ್ಚ್ ನಿಂದ ಹಸಿರು ಪಟಾಕಿ ಉತ್ಪಾದನೆ ಆರಂಭಗೊಂಡಿದ್ದು, ಕೆಲವೇ ಕೆಲ ಕಂಪನಿಗಳು ಮಾತ್ರ ಹಸಿರು ಪಟಾಕಿ ಉತ್ಪಾದಿಸುವ ಪರವಾನಗಿ ಪಡೆದಿವೆ.

Bursting green crackers

ಭಾರತದಲ್ಲಿ ಪಟಾಕಿ ತಯಾರಿಕೆಗೆ ಹೆಸರಾಗಿರುವ ತಮಿಳುನಾಡಿನ ಶಿವಕಾಶಿ, ವಿನಾಯಕ, ಬಾಲಾಜಿ ಮತ್ತು ಕೊರೋನೇಶನ್ ಹೀಗೆ 348 ಘಟಕಗಳು ಮಾತ್ರ ಹಸಿರು ಪಟಾಕಿ ತಯಾರಿಸಲು ಅನುಮತಿ ಪಡೆದಿದೆ. ಶಿವಕಾಶಿಯ 1070 ಘಟಕಗಳಲ್ಲಿ 6 ಘಟಕಗಳಿಗೆ ಮಾತ್ರ ಹಸಿರು ಪಟಾಕಿ ಉತ್ಪಾದನೆಗೆ ಪರವಾನಗಿ ದೊರಕಿದೆ. ಹಾಗಾಗಿ ಹಸಿರು ಪಟಾಕಿ ಸಂಗ್ರಹ ಕಡಿಮೆ ಇದ್ದು, ಹೆಚ್ಚು ಪ್ರಕಾರದ ಪಟಾಕಿಗಳೂ ಇಲ್ಲ.

2018 ರ ‌ಸುಪ್ರೀಂಕೋರ್ಟ್‌ ಪಟಾಕಿ ನಿಷೇಧದ ಆದೇಶದ ನಂತರ ತೀವ್ರ ನಷ್ಟ ಅನುಭವಿಸಿದ್ದ ಪಟಾಕಿ ಮಾರಾಟಗಾರರು ನಂತರದ ವರ್ಷಗಳಲ್ಲಿ ಪಟಾಕಿಯ ಹೆಚ್ಚಿನ ಸಂಗ್ರಹಕ್ಕೆ ಹಿಂದೇಟು ಹಾಕಿದ್ದಾರೆ. ಅಷ್ಟೇ ಅಲ್ಲ ಪಟಾಕಿ ಮಾರುವವರು ಪೊಲೀಸರಿಂದ ಪರವಾನಗಿ ಪಡೆದು, ಅದನ್ನು ಅಂಗಡಿಗಳ ಮುಂದೆ ಪ್ರಕಟಿಸಬೇಕು.‌ ಆದರೆ ತಜ್ಞರ ಪ್ರಕಾರ ಪರಿಸರ ಸ್ನೇಹಿ ಪಟಾಕಿ ಎಂಬುವುದೇ ಇಲ್ಲ. ಸಾಮಾನ್ಯ ಪಟಾಕಿಗಳಿಗಿಂತ ಹಸಿರು ಪಟಾಕಿಗಳು ಕಡಿಮೆ ಹೊಗೆ ಬಿಡುಗಡೆ ಮಾಡುತ್ತವೆ ಅಷ್ಟೇ. ‌ ಆದರೆ ಅವು ಎರಡೂ ಪರಿಸರಕ್ಕೆ ಮಾರಕ ಎನ್ನುವುದು ತಜ್ಞರ ಅಭಿಪ್ರಾಯ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಯಕ್ಷಗಾನದ ಸವ್ಯಸಾಚಿ ನಮ್ಮೆಲ್ಲರ ಪ್ರೀತಿಯ ತಾಳಮದ್ದಲೆಯ ಅರ್ಥದಾರಿ ಗತ್ತು ಗಾಂಭೀರ್ಯದ ಯಕ್ಷಲೋಕದ ಆಸ್ತಿ ವಾಸುದೇವ ಸಾಮಗರು ಇನ್ನಿಲ್ಲ:#Yakshagana#latestnewshttps://t.co/Eeq7TggF7t

— Saaksha TV (@SaakshaTv) November 7, 2020

ಪ್ರೋಟೀನ್ ನಿಂದ ಸಮೃದ್ಧವಾಗಿರುವ 8 ರುಚಿಯಾದ ಹಣ್ಣುಗಳುhttps://t.co/19w0puYwTB

— Saaksha TV (@SaakshaTv) November 6, 2020

Tags: ban firecrackersbursting firecrackersDeepavaligreen crackers
ShareTweetSendShare
Join us on:

Related Posts

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀವಾ? ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು!: ಅಧಿಕಾರಿಗಳ ಬೆವರಿಳಿಸಿದ ಸಚಿವ ಕೃಷ್ಣಭೈರೇಗೌಡ- ಅಂಕಿಅಂಶಗಳ ಗೋಲ್ಮಾಲ್ ಕಂಡು ಸಚಿವರು ಗರಂ!

ಬೀದಿಬದಿ ವ್ಯಾಪಾರಿಗಳ ತೆರವು ಇಲ್ಲ, ಕೇವಲ ಸ್ಥಳಾಂತರ: ಸಚಿವ ಕೃಷ್ಣ ಬೈರೇಗೌಡ ಯೂಟರ್ನ್, ಜುಲೈ 10ರಿಂದ ಅನಾಥ ವಾಹನಗಳ ಸಫಾಯಿ ಶುರು

by Shwetha
July 3, 2026
0

ಬೆಂಗಳೂರು: ಸಿಲಿಕಾನ್ ಸಿಟಿಯ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ವಿಚಾರದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮಹತ್ವದ ಯೂಟರ್ನ್ ತೆಗೆದುಕೊಂಡಿದ್ದಾರೆ. ಗ್ರೇಟರ್ ಬೆಂಗಳೂರು...

ವಿಧಿ-ವಿಧಾನವಿಲ್ಲದ ಹಿಂದೂ ವಿವಾಹ ಮಾನ್ಯವಲ್ಲ: ಗುಜರಾತ್ ಹೈಕೋರ್ಟ್

ವಿಧಿ-ವಿಧಾನವಿಲ್ಲದ ಹಿಂದೂ ವಿವಾಹ ಮಾನ್ಯವಲ್ಲ: ಗುಜರಾತ್ ಹೈಕೋರ್ಟ್

by Shwetha
July 3, 2026
0

ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪೊಂದರಲ್ಲಿ, ಕೇವಲ ವಿವಾಹ ನೋಂದಣಿ ಮಾಡಿಕೊಂಡರೆ ಮಾತ್ರ ಹಿಂದೂ ವಿವಾಹವು ಕಾನೂನುಬದ್ಧವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಇಲೇಶ್ ವೋರಾ ಮತ್ತು ಆ‌ರ್.ಟಿ. ವಚ್ಛಾನಿ...

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

ಖಾಸಗಿ ಲೇಔಟ್ ರಸ್ತೆಗಳು ಇನ್ಮುಂದೆ ಸರ್ಕಾರಿ ಸ್ವತ್ತು: ಲೇಔಟ್ ರಸ್ತೆಗಳ ಮೇಲೆ ಖಾಸಗಿ ಹಕ್ಕಿಗೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ

by Shwetha
July 3, 2026
0

ಬೆಂಗಳೂರು: ರಾಜ್ಯದ ರಿಯಲ್ ಎಸ್ಟೇಟ್ ಮತ್ತು ನಗರ ಪ್ರದೇಶದ ಪಾದಚಾರಿ ಹಿತದೃಷ್ಟಿಯಿಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎರಡು ಅತ್ಯಂತ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಇನ್ಮುಂದೆ ಖಾಸಗಿ...

ವಿಜಯ್ ಸರ್ಕಾರ ಅಸ್ಥಿರಗೊಳಿಸುವ ಸಂಚು ಆರೋಪ; 6 ಮಂದಿ ಬಂಧನ

ವಿಜಯ್ ಸರ್ಕಾರ ಅಸ್ಥಿರಗೊಳಿಸುವ ಸಂಚು ಆರೋಪ; 6 ಮಂದಿ ಬಂಧನ

by Shwetha
July 3, 2026
0

ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಚು ರೂಪಿಸಲಾಗಿದೆ ಎಂಬ ಆರೋಪದಡಿ ಮಹತ್ವದ ಬೆಳವಣಿಗೆ ನಡೆದಿದೆ. ವರದಿಗಳ ಪ್ರಕಾರ, ವಿಧಾನಸಭೆಯ ಸ್ಪೀಕರ್ ವಿರುದ್ಧದ ಅವಿಶ್ವಾಸ...

30 ದಿನ ಜೈಲಿನಲ್ಲಿದ್ದರೆ ಅಧಿಕಾರ ಗೋವಿಂದ -ಜೈಲಿನಿಂದ ಆಡಳಿತ ನಡೆಸುವ ಆಟಕ್ಕೆ ಬೀಳಲಿದೆ ಬ್ರೇಕ್:30 ದಿನ ಜೈಲಿನಲ್ಲಿದ್ದರೆ ಸಿಎಂ ಮತ್ತು ಪ್ರಧಾನಿ ಪಟ್ಟಕ್ಕೆ ಕುತ್ತು;ವಿರೋಧ ಪಕ್ಷಗಳ ನಿದ್ದೆಗೆಡಿಸಿದ ಕೇಂದ್ರದ ಹೊಸ ಪ್ಲಾನ್

30 ದಿನ ಜೈಲಿನಲ್ಲಿದ್ದರೆ ಅಧಿಕಾರ ಗೋವಿಂದ -ಜೈಲಿನಿಂದ ಆಡಳಿತ ನಡೆಸುವ ಆಟಕ್ಕೆ ಬೀಳಲಿದೆ ಬ್ರೇಕ್:30 ದಿನ ಜೈಲಿನಲ್ಲಿದ್ದರೆ ಸಿಎಂ ಮತ್ತು ಪ್ರಧಾನಿ ಪಟ್ಟಕ್ಕೆ ಕುತ್ತು;ವಿರೋಧ ಪಕ್ಷಗಳ ನಿದ್ದೆಗೆಡಿಸಿದ ಕೇಂದ್ರದ ಹೊಸ ಪ್ಲಾನ್

by Shwetha
July 3, 2026
0

ನವದೆಹಲಿ: ಭ್ರಷ್ಟಾಚಾರ ಅಥವಾ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿ ಜೈಲು ಪಾಲಾಗುವ ಉನ್ನತ ಹುದ್ದೆಯಲ್ಲಿರುವವರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದೆ. ಯಾವುದೇ ಸಚಿವರು, ಮುಖ್ಯಮಂತ್ರಿ ಅಥವಾ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram