ಹೀಗಾಗಿಯೇ ಇದನ್ನ ನಂಬಿ ಸೆಲೆಬ್ರಿಟಿಗಳು ಕೋಟಿಗಟ್ಟಲೆ ಹಣ ಸುರಿದು ಬೃಹತ್ ಅಪಾರ್ಟ್ಮೆಂಟ್ಗಳನ್ನು ನಿರ್ಮಾಣ ಮಾಡುವ ಯೋಜನೆ ಹೊಂದಿದ್ರು.
ಸಾಮಾನ್ಯ ಜನರಷ್ಟೇ ಅಲ್ಲದೇ ಅನೇಕ ಸೆಲೆಬ್ರಿಟಿಗಳು ಸಹ ಕೆಲವೊಮ್ಮೆ ಮೋಸಕ್ಕೆ ಒಳಗಾಗುತ್ತಾರೆ. ಅದೆಕ್ಕೆ ಪೂರಕವೆಂಬುವಂತೆ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪೆನಿಯೊಂದನ್ನು ನಂಬಿ ಹಲವು ಸೆಲೆಬ್ರಿಟಿಗಳು ಕೋಟ್ಯಾಂತರ ರೂಪಿ ಹಣ ಹೂಡಿ ಮೋಸಹೋಗಿದ್ದಾರೆ. ಈ ಪಟ್ಟಿಯಲ್ಲಿ ಖ್ಯಾತ ಬಹುಭಾಷಾ ನಟಿಯರಾದ ರಮ್ಯಾಕೃಷ್ಣನ್ ಹಾಗೂ ನಯಂತಾರಾ ಕೂಡ ಸೇರ್ಪಡೆಗೊಂಡಿದ್ದಾರೆ.
ಹೌದು ರಿಯಲ್ ಎಸ್ಟೇಟ್ ಹಗರಣದಲ್ಲಿ ಸಿನಿಮಾ ಮತ್ತು ಕ್ರಿಕೆಟ್ ಜಗತ್ತಿನ ಅನೇಕರು ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಈ ಲಿಸ್ಟ್ ನಲ್ಲಿ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪತ್ನಿ ಅಂಜಲಿ ಕೂಡ ಇದ್ದಾರೆ. ದೇಶದಾದ್ಯಂತ ವಿವಿಧ ವಿವಿಐಪಿಗಳಿಗೆ ಅತ್ಯುತ್ತಮ ನೀರಿನ ಸೌಲಭ್ಯವಿರುವ ಹಲವಾರು ಎಕರೆ ಭೂಮಿಯನ್ನು ಈ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪೆನಿ ಮಾರಾಟ ಮಾಡಿದೆ. ಗೋಡೆ ಮತ್ತು ಬೇಲಿಗಳ ನಡುವೆ ವಸತಿ ಸಮುಚ್ಚಯ ನಿರ್ಮಿಸಲಾಗುತ್ತದೆ. ಆದ್ರೀಗ ವಿವಿಐಪಿಗಳಿಗೆ ಮಾರಾಟ ಮಾಡಿರುವ ಈ ಭೂಮಿ ಕೃಷಿ ಜಮೀನುಗಳಾಗಿದ್ದು, ಇಲ್ಲಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿಲ್ಲ ಎನ್ನುವ ಅಸಲಿ ಸತ್ಯ ಬಟಾಬಯಲಾಗಿದೆ. ರಿಯಲ್ ಎಸ್ಟೇಟ್ ಸಂಸ್ಥೆಯ ಪಾಲುದಾರರ ಜಗಳ, ಈ ಭೂಮಿಗಳ ಹಿಂದಿನ ಸತ್ಯ ಬಹಿರಂಗಪಡಿಸಿದೆ.