ವಿದೇಶದಲ್ಲಿ ಜನಿಸಿದ ಬಾಲಿವುಡ್ ನಟ ನಟಿಯರು… ಆಲಿಯಾ ಭಟ್ ನಿಂದ ಸನ್ನಿ ಲಿಯೋನ್ ವರೆಗೆ ಫುಲ್ ಲೀಸ್ಟ್..
ಬಾಲಿವುಡ್ ಸಮುದ್ರದಂತೆ ಯಾವುದೇ ದಿಕ್ಕಿನಿಂದ ಬಂದ ಕಲಾವಿದರನ್ನೂ ತಮ್ಮ ಜಗತ್ತಿನ ಒಳಗಡೆಗೆ ಬರಸೆಳೆದುಕೊಳ್ಳುತ್ತದೆ. ಬಾಲಿವುಡ್ ನಲ್ಲಿ ಹಲವು ನಟ ನಟಿಯರು ವಿದೇಶಗಳಲ್ಲಿ ಜನಿಸಿ ನಂತರ ಭಾರತದಲ್ಲಿ ನೆಲೆಸಿ ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಅಂತಹ ಹಲವು ನಟ ನಟಿಯರ ಪರಿಚಯವನ್ನ ನಾವು ಮಾಡಿಕೊಡ್ತೀವಿ.
‘ಗಂಗೂಬಾಯಿ ಕಥಿಯಾವಾಡಿ’ ಖ್ಯಾತಿಯ ಆಲಿಯಾ ಭಟ್ ಹುಟ್ಟಿದ್ದು ಭಾರತದಲ್ಲಿ ಅಲ್ಲ ಬದಲಾಗಿ ಬ್ರಿಟನ್ ದೇಶದಲ್ಲಿ. ಲಂಡನ್‌ನಲ್ಲಿ ಜನಿಸಿದ ಆಲಿಯಾ ತನ್ನ ತಾಯಿಯಂತೆ ಬ್ರಿಟಿಷ್ ಪೌರತ್ವವನ್ನು ಹೊಂದಿದ್ದಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಡ್ಯಾನಿಶ್ ರಾಜಧಾನಿ ಕೋಪನ್ ಹ್ಯಾಗನ್ ನಲ್ಲಿ ಜನಿಸಿದರು. ದೀಪಿಕ ಪಡುಕೋಣೆ ತಂದೆ ಖ್ಯಾತ ಬ್ಯಾಂಡ್ಮಿಟನ್ ಆಟಗಾರರಾಗಿದ್ದರು. ಆ ಸಮಯದಲ್ಲಿ ತರಬೇತಿ ಪಡೆದುಕೊಳ್ಳಲೆಂದು ಡ್ಯಾನಿಶ್ ದೇಶದಲ್ಲಿ ತಂಗಿದ್ದರು.
ಸಾರಾ ಜೇನ್ ಓಮನ್ ದೇಶದ ಮಸ್ಕತ್‌ನಲ್ಲಿ ಜನಿಸಿದರು. ಸಾರಾ 2007 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಪಟ್ಟಕ್ಕೇರಿದ್ದರು. ‘ಗೇಮ್’ ಮತ್ತು ‘ಕ್ಯಾ ಸೂಪರ್ ಕೂಲ್ ಹೇ ಹಮ್’ ಚಿತ್ರಗಳಲ್ಲಿ ಸಾರ ಕಾಣಿಸಿಕೊಂಡಿದ್ದಾರೆ.
ನಟ ಇಮ್ರಾನ್ ಖಾನ್ ಅವರು ಅಮೇರಿಕಾದ ವಿಸ್ಕಾನ್ಸಿನ್ ರಾಜ್ಯದ ರಾಜಧಾನಿ ಮ್ಯಾಡಿಸನ್‌ನಲ್ಲಿ ಜನಿಸಿದವರು. ಇಮ್ರಾನ್ ಖಾನ್ ತನ್ನ ಹೆತ್ತವರ ವಿಚ್ಛೇದನದ ನಂತರ ಮುಂಬೈಗೆ ಮರಳಿ ನೆಲೆ ಕಂಡುಕೊಂಡರು. ಇಮ್ರಾನ್ ಬಾಲಿವುಡ್ ನಟ ಅಮೀರ್ ಖಾನ್ ಅವರ ಸೋದರಳಿಯ. ‘ಜಾನೇ ತೂ ಯಾ ಜಾನೇ ನಾ’ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ ನಟ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಕತ್ರಿನಾ ಕೈಫ್ 1983 ರಲ್ಲಿ ಬ್ರಿಟಿಷ್ ಹಾಂಗ್ ಕಾಂಗ್‌ನಲ್ಲಿ ಜನಿಸಿದರು, ಆ ಸಮಯದಲ್ಲಿ ಹಾಂಗ್ ಕಾಂಗ್ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಅದಕ್ಕಾಗಿಯೇ ನಟಿ ಬ್ರಿಟಿಷ್ ಪೌರತ್ವವನ್ನು ಹೊಂದಿದ್ದಾರೆ. ಕತ್ರಿನಾ ಅವರ ತಂದೆ-ತಾಯಿ ಕೂಡ ಬ್ರಿಟಿಷ್ ಪ್ರಜೆಗಳು, ಆಕೆಯ ತಂದೆ ಮೂಲತಃ ಕಾಶ್ಮೀರದವರು.
ಬಾಲಿವುಡ್‌ಗೆ ಸೇರಿದಂತೆ ದಕ್ಷಿಣ ಭಾರತದ ಹಲವು ದೊಡ್ಡ ದೊಡ್ಡ ಸಿನಿಮಾ ಪ್ರಾಜೆಕಕ್ಟ್ ಗಳಲ್ಲಿ ಕಾಣಿಸಿಕೊಂಡಿರು ನಟಿ ಆಮಿ ಜಾಕ್ಸನ್ ಮೂಲತಃ ಬ್ರಿಟೀಷ್ ಮೂಲದವರು. ಬ್ರಿಟನ್ ನಲ್ಲಿ ಜನಿಸಿ ಮೊದಮೊದಲು ಮಾಡೆಲ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಸಂಗೀತಗಾರ್ತಿ ಮತ್ತು ನಟಿ ಮೋನಿಕಾ ಡೋಗ್ರಾ ಅಮೇರಿಕಾದಲ್ಲಿ ಜನಿಸಿದವರು. ಅಮೀರ್ ಖಾನ್ ಅಭಿನಯದ ‘ಧೋಬಿ ಘಾಟ್’ ಚಿತ್ರದ ಮೂಲಕ ಬಿಗ್ ಹಿಟ್ ಪಡೆದುಕೊಂಡರು. 34 ವರ್ಷದ ನಟಿ ಮೋನಿಕಾ ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿ ಜನಿಸಿದರು.
ಬಾಲಿವುಡ್ ನಟಿ ಸನ್ನಿ ಲಿಯೋನ್ ಹುಟ್ಟಿದ್ದು ಕೆನಡಾದಲ್ಲಿ. ಬಾಲಿವುಡ್ ನಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು, ಸನ್ನಿ ಕೆನಡಾದಲ್ಲಿ ಪ್ರಸಿದ್ಧ ಮಾಡೆಲ್ ಆಗಿದ್ದರು.