ನವದೆಹಲಿ : ಪೂರ್ವ ಲಡಾಖ್ ಗಡಿ ಭಾಗದಲ್ಲಿ ಭಾರತ – ಚೀನಾ ನಡುವೆ ನಡೆದ ಸಂಘರ್ಷದಿಂದ ಎರಡು ದೇಶಗಳ ಮದ್ಯೆ ಶೀತಲ ಸಮರ ನಡೆದಿದೆ. ಹಾಗಾಗಿ ಭಾರತ ತನ್ನ ಯುದ್ದತಂತ್ರವನ್ನು ವಿಭಿನ್ನವಾಗಿ ಅಳವಡಿಸಿಕೊಳ್ಳುತ್ತಿದೆ. ಚೀನಾ ನಡೆಸುವ ಯಾವುದೇ ದುಷ್ಕೃತ್ಯಗಳಿಗೆ ತಕ್ಕ ಉತ್ತರ ನೀಡಲು ಸಿದ್ಧವಾಗಿರುವಂತೆ ಸೇನೆಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ವಾಸ್ತವ ಗಡಿ ರೇಖೆ ಬಳಿ ಚೀನಾ ಸೇನೆ ನಡೆಸುವ ಆಕ್ರಮಣಕಾರಿ ದಾಳಿಯನ್ನು ಎದುರಿಸಲು ಸಶಸ್ತ್ರ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಹೇಳಾಗುತ್ತಿದೆ. ರಕ್ಷಣಾ ರಾಜನಾಥ್ ಸಿಂಗ್ ನಡೆಸಿದ ಸಭೆ ಬಳಿಕ ಇಂತದೊಂದು ಮಾಹಿತಿ ಸೂಳಿವು ಸಿಕ್ಕಿದೆ.
ಗಡಿಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಭಾರತ ತನ್ನ ಯುದ್ಧತಂತ್ರವನ್ನು ವಿಭಿನ್ನವಾಗಿ ಅಳವಡಿಕೊಳ್ಳುವ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ಹೇಳಾಗುತ್ತಿದೆ. ಆದ್ದರಿಂದ ಭೂ ಸೇನೆ, ವಾಯು ಸೇನೆ, ಸಾಗರದ ಗಡಿ ಪ್ರದೇಶದಲ್ಲಿ ಚೀನಾ ಸೇನೆಯ ಚಟುವಟಿಕೆ ಮೇಲೆ ನಿಗಾ ಇಡಲಾಗಿದೆ.