Central Bank of India : 250 ಚೀಫ್ ಮತ್ತು ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗಾಗಿ ನೇಮಕಾತಿ ಆಹ್ವಾನ…
ಸಾರ್ವಜನಿಕ ವಲಯದ ಬ್ಯಾಂಕ್ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಚೀಫ್ ಮ್ಯಾನೇಜರ್ ಮತ್ತು ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 250 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ centralbankofindia.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರಗಳು:
ಮುಖ್ಯ ವ್ಯವಸ್ಥಾಪಕರು (ಚೀಫ್ ಮ್ಯಾನೇಜರ್)- 50 ಹುದ್ದೆಗಳು
ಹಿರಿಯ ವ್ಯವಸ್ಥಾಪಕರು (ಸೀನಿಯರ್ ಮ್ಯಾನೇಜರ್)- 200 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ- 250
ಅರ್ಹತಾ ಮಾನದಂಡಗಳು:
ಮುಖ್ಯ ವ್ಯವಸ್ಥಾಪಕರು– ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವೀಧರರಾಗಿರಬೇಕು (ಯಾವುದೇ ವಿಭಾಗದಲ್ಲಿ). ಹಾಗೆಯೇ ಪಿಎಸ್ಬಿ/ಖಾಸಗಿ ಬ್ಯಾಂಕ್ಗಳು/ಎನ್ಬಿಎಫ್ಸಿಗಳಲ್ಲಿ ಅಧಿಕಾರಿಯಾಗಿ ಕನಿಷ್ಠ 7 ವರ್ಷಗಳ ಅನುಭವವನ್ನು ಹೊಂದಿರಬೇಕು.
ಹಿರಿಯ ವ್ಯವಸ್ಥಾಪಕರು– ಈ ಹುದ್ದೆಗಳಿಗೆ ಪದವಿ (ಯಾವುದೇ ವಿಭಾಗದಲ್ಲಿ) ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇದರ ಜೊತೆಗೆ ಪಿಎಸ್ಬಿ/ಖಾಸಗಿ ಬ್ಯಾಂಕ್ಗಳು/ಎನ್ಬಿಎಫ್ಸಿಗಳಲ್ಲಿ ಅಧಿಕಾರಿಯಾಗಿ ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕಾಗುತ್ತದೆ.
ವಯೋಮಿತಿ:
ಮುಖ್ಯ ವ್ಯವಸ್ಥಾಪಕರು (ಚೀಫ್ ಮ್ಯಾನೇಜರ್) ಹುದ್ದೆಗಳಿಗೆ 35 ವರ್ಷ ಮೀರಿರಬಾರದು.
ಹಿರಿಯ ವ್ಯವಸ್ಥಾಪಕರು (ಸೀನಿಯರ್ ಮ್ಯಾನೇಜರ್) ಹುದ್ದೆಗಳಿಗೆ 40 ವರ್ಷ ಮೀರಿರಬಾರದು.
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಫೆಬ್ರವರಿ 11, 2023