ದೇಶದಲ್ಲಿ ಇನ್ನೂವರೆಗೂ ಕೊರೊನಾ ಹಾವಳಿ ನಿಯಂತ್ರಣಕ್ಕೆ ಬಂದಿಲ್ಲ. ಹೀಗಿರುವಾಗಲೇ ಕೊರೊನಾ ನಿಯಂತ್ರಣಕ್ಕಾಗಿ ದೇಶಾದ್ಯಂತ ವಿಧಿಸಲಾಗಿರುವ ಲಾಕ್ ಡೌನ್ ಗಣನೀಯವಾಗಿ ಸಡಿಲಿಕೆ ಮಾಡುತ್ತಿರುವ ಕೇಂದ್ರ ಇದೀಗ ಜಿಮ್ ಗಳ ತೆರೆಯುವಿಕೆ ಸೇರಿದಂತೆ ಇನ್ನಿತರೇ ಚಟುವಟಿಕೆಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ. ದೇಶಾದ್ಯಂತ ವಿಧಿಸಲಾಗಿರುವ ಲಾಕ್ ಡೌನ್ ಸಡಿಲಿಕೆಯ ಮೂರನೇ ಹಂತದ ಮಾರ್ಗಸೂಚಿಗಳನ್ನು ಗೃಹ ಸಚಿವಾಲಯ ಬಿಡುಗಡೆ ಮಾಡಿದೆ. ದೇಶದಲ್ಲಿ ನೈಟ್ ಕರ್ಫ್ಯೂ ತೆರವುಗೊಳಿಸಲಾಗಿದ್ದು, ಆಗಸ್ಟ್ 5 ರಿಂದ ಜಿಮ್ ಓಪನ್ ಮಾಡಬಹುದಾಗಿದೆ. ಆದ್ರೆ ಜಿಮ್ ಗಳು ಓಪನ್ ಮಾಡಲು ಕಟ್ಟುನಿಟ್ಟಿನ ಕೊರೊನಾ ನಿಯಮವನ್ನೂ ಫಾಲೋಮಾಡಬೇಕಾಗಿದೆ. ಮತ್ತೊಂದೆಡೆ ವಿಮಾನ ಸೇವೆ ಎಂದಿನಂತೆ ಪುನರಾರಂಭಕ್ಕೆ ನಡೆಸಿರುವ ಕೇಂದ್ರ ಕೈಗೊಂಡಿದ್ದು, ಸ್ವಾತಂತ್ರ್ಯ ದಿನಾಚರಣೆಗೆ ಮಾರ್ಗಸೂಚಿ ನೀಡಿದೆ. ಇನ್ನುಳಿದಂತೆ ಆಗಸ್ಟ್ 31 ರವರೆಗೂ ಶಾಲಾ ಕಾಲೇಜು ತೆರೆಯುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಅನ್ಲಾಕ್ 3.0 ಕುರಿತಾದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ರಾಜೀನಾಮೆ ನೀಡಲು ಸಿಎಂ ಸೂಚನೆ: ಸಭಾಪತಿ ಸ್ಥಾನಕ್ಕೆ ಅವಮಾನ ಎಂದು ಗುಡುಗಿದ ಬಸವರಾಜ್ ಹೊರಟ್ಟಿ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಂಘರ್ಷಕ್ಕೆ ವೇದಿಕೆ ಸಿದ್ಧವಾಗಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಮುಖ್ಯಮಂತ್ರಿಗಳು ದೂರವಾಣಿ ಕರೆ ಮಾಡಿ ರಾಜೀನಾಮೆ ನೀಡುವಂತೆ ಸೂಚಿಸಿರುವುದು...








