ಪಶ್ಚಿಮ ಬಂಗಾಳ : 77 ಬಿಜೆಪಿ ಶಾಸಕರಿಗೆ X,Y ಶ್ರೇಣಿಯ ಭದ್ರತೆ ಒದಗಿಸಿದ ಕೇಂದ್ರ
ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದಲ್ಲಿ ಈ ಹಿಂದೆನಿಂದಲೂ ಬಿಜೆಪಿ ನಾಯಕಕರಿಗೆ ಕಾರ್ಯಕರ್ತರಿಗೆ ಅಪಾಯವಿದೆ ಎಂಬ ಮಾತುಗಳು ಆಗಾಗ ಕಮಲ ಪಾಳಯದಿಂದ ಕೇಳಿ ಬರುತ್ತಿರುತ್ತೆ.. ಇದೀಗ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಾಸನ ಸಭೆಗೆ ಬಿಜೆಪಿಯ 77 ಶಾಸಕರು ಆಯ್ಕೆಯಾಗಿದ್ದು, ಈ ಎಲ್ಲಾ ಶಾಶಕರಿಕೆಗೆ ಬೆದರಿಕೆ, ಅಪಾಯವಿರುವ ಹಿನ್ನೆಲೆ ಕೇಂದ್ರದಿಂದ ಭದ್ರತೆಯನ್ನು ಒದಗಿಸಲಾಗಿದೆ.
ಶಸ್ತ್ರಸಜ್ಜಿತ ಕಮಾಂಡೋಗಳು ಬಿಜೆಪಿ ಶಾಸಕರಿಗೆ ಭದ್ರತೆಯನ್ನು ಒದಗಿಸಲಿದ್ದು, ಕೇಂದ್ರೀಯ ಸಂಸ್ಥೆಗಳಿಂದ ಬಂದ ವರದಿಯ ಆಧಾರದಲ್ಲಿ ಕೇಂದ್ರ ಗೃಹ ಸಚಿವಾಲಯ ಭದ್ರತೆ ನೀಡುವುದಕ್ಕೆ ಅನುಮೋದನೆ ನೀಡಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ನಂತರ ರಾಜಕೀಯ ಹಿಂಸಾಚಾರ ನಡೆದಿದ್ದರ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಉನ್ನತ ಮಟ್ಟದ ತಂಡವನ್ನು ಕಳಿಸಿತ್ತು. 61 ಶಾಸಕರಿಗೆ X ಶ್ರೇಣಿಯ ಭದ್ರತೆ ನೀಡಲಾಗಿದ್ದು, ಉಳಿದವರಿಗೆ Y ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ. ವಿಪಕ್ಷ ನಾಯಕ ಸುವೇಂದು ಅಧಿಕಾರಿಗೆ ಝೆಡ್ ಶ್ರೇಣಿಯ ಭದ್ರತೆಯನ್ನು ನೀಡಲಾಗಿದೆ.