ಚಾಹಲ್, ಕೆ.ಗೌತಮ್ ಗೂ ಕೊರೊನಾ ಪಾಸಿಟಿವ್..!
ನವದೆಹಲಿ : ಕೃನಾಲ್ ಪಾಂಡ್ಯ ಬಳಿಕ ಟೀಂ ಇಂಡಿಯಾದ ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್ ಮತ್ತು ಕೆ ಗೌಥಮ್ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಬಗ್ಗೆ ತಂಡದ ಮೂಲಗಳು ಮಾಹಿತಿ ನೀಡಿದ್ದು, ಯಜುವೇಂದ್ರ ಚಹಾಲ್ ಮತ್ತು ಕೆ ಗೌತಮ್ ಇಬ್ಬರಿಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಇವರು ಕೃನಾಲ್ ಅವರ ನಿಕಟ ಸಂಪರ್ಕಹೊಂದಿದ್ದರು.
ಸದ್ಯ ಇವರು ಹೋಟೆಲ್ ನಲ್ಲಿ ಪ್ರತ್ಯೇಕವಾಗಿದ್ದಾರೆ ಎಂದು ತಿಳಿಸಿದೆ.
ಇನ್ನು ಕೃನಾಲ್ ಪಾಂಡ್ಯ ಅವರಿಗೆ ಸೋಂಕು ದೃಡಪಟ್ಟ ಹಿನ್ನೆಲೆಯಲ್ಲಿ ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಯುಜ್ವೇಂದ್ರ ಚಹಲ್, ದೀಪಕ್ ಚಹರ್, ಮನೀಶ್ ಪಾಂಡೆ, ಇಶಾನ್ ಕಿಶನ್ ಮತ್ತು ಕೆ ಗೌಥಮ್ ಸೇರಿ ಎಂಟು ಮಂದಿಯನ್ನು ಐಸೋಲೇಷನ್ ಮಾಡಲಾಗಿತ್ತು. ಈ ಪೈಕಿ ಯಜುವೇಂದ್ರ ಚಾಹಲ್ ಮತ್ತು ಕೆ ಗೌತಮ್ ಗೆ ಸೋಂಕು ದೃಢಪಟ್ಟಿದೆ.