ಕೊರೊನಾ ತವರು ಚೀನಾದಲ್ಲಿ 8 ತಿಂಗಳ ಬಳಿಕ ಕೊರೋನಾ ಸೋಂಕಿಗೆ ಓರ್ವ ಬಲಿ..!
ಚೀನಾ: ಇಡೀ ವಿಶ್ವಕ್ಕೆ ಕೊರೊನಾ ವೈರಸ್ ಹರಡಿರುವ ಚೀನಾದಲ್ಲಿ ಚೀನಾ ವರದಿ ಪ್ರಕಾರ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿತ್ತು. 8 ತಿಂಗಳುಗಳಿಂದ ಒಂದೇ ಒಂದೂ ಸಾವಿನ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿಕೊಂಡಿತ್ತು. ಆದ್ರೆ ಆಂತರಿಕವಾಗಿ ಚೀನಾ ದೇಶದ ಒಳಗಡೆ ಏನಾಗ್ತಿದೆ ಎನ್ನುವುದು ಜನರಿಗೆ ಗೊತ್ತಿಲ್ಲ. ಅನೇಕ ಮೂಲಗಳ ಪ್ರಕಾರ ಸೋಂಕಿತರಿಗೆರ ಚೀನಾ ಚಿತ್ರಹಿಂಸೆ ನೀಡ್ತಿದೆ. ಅಲ್ಲದೇ ಲಕ್ಷಾಂತರ ಜನರೇ ನಾಪತ್ತೆಯಾಗಿದ್ದಾರೆ ಎಂಬ ವಿಚಾರಗಳು ವರದಿಯಾಗ್ತಿವೆ. ಇದು ಚೀನಾದ ವಿರುದ್ಧ ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ.
ಕೇಂದ್ರ ವಿಫಲವಾದ್ರೆ ದೆಹಲಿ ಜನತೆಗೆ ರಾಜ್ಯ ಸರ್ಕಾರದಿಂದ ಉಚಿತ ಲಸಿಕೆ : ಕೇಜ್ರಿವಾಲ್
ಇದರ ನಡುವೆಯೇ ಕೊರೋನಾ ಮೂಲದ ಬಗ್ಗೆ ತಿಳಿಯಲು ವಿಶ್ವಆರೋಗ್ಯ ಸಂಸ್ಥೆಯ ತಜ್ಞರು ಚೀನಾಕ್ಕೆ ತೆರಳಿದ್ದಾರೆ. ಇಲ್ಲೂ ಸಹ ಚೀನಾ ತನ್ನ ವರಸೆ ತೋರರಿದ್ದು, ಆರೋಗ್ಯಾಧಿಕಾರಿಗಳ ಕಾರ್ಯಕ್ಕೆ ಅಡಚಣೆ ಉಂಟು ಮಾಡ್ತಿದೆ. ಆದ್ರೆ ಇದನ್ನೂ ಮೀರಿ ತಂಡ ಪರಿಶೀಲನೆ ನಡೆಸಿದ್ದು 8 ತಿಂಗಳ ನಂತರ ಕೊರೋನಾ ಸೋಂಕಿಗೆ ಚೀನಾದಲ್ಲಿ ಮೊದಲ ಬಲಿಯಾಗಿದೆ ಎಂದು ದೃಢಪಡಿಸಿದ್ದಾರೆ.
ಚೀನಾದ ಹುಬೈ ಪ್ರಾಂತ್ಯದಲ್ಲಿ ಕೊರೊನಾ ಮಹಾಮಾರಿಗೆ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಕಳೆದ 24 ಗಂಟೆಗಳಲ್ಲಿ, ಚೀನಾದಲ್ಲಿ 138 ಹೊಸ ಕೊರೋನ -19 ಪ್ರಕರಣಗಳು ದಾಖಲಾಗಿದೆ. ಇದೀಗ 10 ತಿಂಗಳುಗಳ ಬಳಿಕ ಮತ್ತೊಮ್ಮೆ ಕೊರೊನಾ ತವರಲ್ಲಿ ಸೋಂಕಿನ ಹಾವಳಿ ಹೆಚ್ಚಾಗುವ ಮುನ್ಸೂಚನೆಯೂ ಸಿಕ್ಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








