ಗಲ್ವಾನ್ ಘರ್ಷಣೆಯಲ್ಲಿ ಚೀನಾ ಸೈನಿಕರು ಸಾವು: ಮೊದಲ ಬಾರಿಗೆ ಅಧಿಕೃತವಾಗಿ ಅಂಗೀಕರಿಸಿದ ಚೀನಾ
ಕಳೆದ ವರ್ಷ ಪೂರ್ವ ಲಡಾಕ್ ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ಸೇನೆಯೊಂದಿಗೆ ನಡೆದ ಘರ್ಷಣೆಯಲ್ಲಿ ಐವರು ಸೇನಾಧಿಕಾರಿಗಳು ಹಾಗೂ ಸೈನಿಕರು ಸಾವನ್ನಪ್ಪಿದ್ದ ವಿಚಾರವನ್ನ ಚೈನಾ ಮೊದಲ ಬಾರಿಗೆ ಅಧಿಕೃತವಾಗಿ ಅಂಗೀಕರಿಸಿದೆ. ಈ ಮೂಲಕ ರಷ್ಯಾ ದೇಶ ಸೇರಿದಂತೆ ಇತರ ರಾಷ್ಟ್ರಗಳು ಗಲ್ವಾನ್‍ನಲ್ಲಿ ಭಾರತ ಮತ್ತು ಚೀನಾದ ದೇಶದ ಸೈನಿಕರ ನಡುವೆ ತಿಕ್ಕಾಟದಲ್ಲಿ ಚೀನಾದ ಸುಮಾರು 40ಕ್ಕೂ ಹೆಚ್ಚು ಸೈನಿಕರು ಮರಣಿಸಿದ್ದರು ಎಂದು ತನಿಖಾ ವರದಿ ನೀಡಿದ್ದನ್ನು, ಅಲ್ಲಗೆಳೆದಿದ್ದ ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ ಅಧಿಕೃತವಾಗಿ ಅಂಗೀಕರಿಸಿದೆ.
ಉತ್ತರಖಂಡದಲ್ಲಿ ಹಿಮಕುಸಿತ : 62 ಮೃತದೇಹಗಳು, 28 ಅವಶೇಷಗಳು ಪತ್ತೆ..!
ಕಾರಕೋರಂ ಪರ್ವತಗಳಲ್ಲಿ ಬೀಡುಬಿಟ್ಟಿದ್ದ ಚೀನಾದ ಐದು ಗಡಿನಾಡಿನ ಅಧಿಕಾರಿಗಳು ಹಾಗೂ ಸೈನಿಕರನ್ನು ಚೀನಾ ಕೇಂದ್ರ ಮಿಲಿಟರಿ ಆಯೋಗ ಗುರುತಿಸಿದೆ. ಇವರು ಭಾರತದ ಗಡಿ ರಕ್ಷಣೆಯಲ್ಲಿ ನಿರತರಾಗಿದ್ದ ಸೇನೆಯ ನಡುವೆ ತಿಕ್ಕಾಟ ನಡೆಸಿ, ಮುಖಾಮುಖಿ ಎದುರಿಸಲು ಯತ್ನಿಸುವ ಸಂದರ್ಭದಲ್ಲಿ ಜೀವ ತೆತ್ತಿದ್ದಾರೆ ಎಂದು ಚೀನಾದ ಮಿಲಿಟರಿ ಪತ್ರಿಕೆ ವರದಿ ಮಾಡಿದೆ. ಘರ್ಷಣೆಯಲ್ಲಿ ಮಡಿದವರಲ್ಲಿ ಪಿಎಲ್‍ಎ ರೆಜಿಮೆಂಟಲ್ ಕಮಾಂಡರ್ ಕ್ಯೂಇ ಫ್ಯಾಬೌ ಇತರರು ಸೇರಿದ್ದಾರೆ ಎಂದು ಯುಎನ್ ಗ್ಲೋಬಲ್ ಟೈಮ್ಸ್ ಗುರುತಿಸಿದೆ. ಈ ಘಟನೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.