ಚೀನಾದಿಂದ ನಾರ್ವೆಯ ಸೋಲಾರ್ ಕಂಪನಿ ಖರೀದಿಸಿದ ರಿಲಯನ್ಸ್..!
ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಕಂಪನಿಯು ಚೀನಾದಿಂದ ನಾರ್ವೆಯ ಸೋಲಾರ್ ಕಂಪನಿಯನ್ನ ಖರೀದಿ ಮಾಡಿದೆ. ಸುಮಾರು 5,792 ಕೋಟಿ ರೂಪಾಯಿಗೆ ಕಂಪನಿಯನ್ನ ಖರೀದಿಸಿದೆ ಎನ್ನಲಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಂಗಸಂಸ್ಥೆಯಾದ ರಿಲಯನ್ ನ್ಯೂ ಎನರ್ಜಿ ಲಿಮಿಟೆಡ್ ಚೀನಾ ನ್ಯಾಷನಲ್ ಬ್ಲೂಸ್ಟಾರ್ ಕಂಪನಿಯಲ್ಲಿದ್ದ ಆರ್‌ಇಸಿ ಕಂಪನಿಯ ಶೇ.100 ರಷ್ಟು ಷೇರುಗಳನ್ನು ಖರೀದಿಸಿರುವುದಾಗಿ ಬಿಎಸ್‌ಇಗೆ ಮಾಹಿತಿ ನೀಡಿದೆ.
1996 ರಲ್ಲಿ ಆರ್‌ಇಸಿ ಕಂಪನಿ ಸ್ಥಾಪನೆಯಾಗಿದ್ದು ಸಿಂಗಾಪುರದಲ್ಲಿ ತನ್ನ ಕಾರ್ಯಕಾರಿ ಕೇಂದ್ರವನ್ನು ಹೊಂದಿದೆ. ಉತ್ತರ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಮತ್ತು ಏಷ್ಯಾ ಪೆಸಿಫಿಕ್ ನಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದೆ. 2015 ರಲ್ಲಿ ಚೀನಾ 419 ದಶಲಕ್ಷ ಯುರೋಗೆ ಆರ್ ಇಸಿ ಕಂಪನಿಯನ್ನು ಖರೀದಿಸಿತ್ತು. ಕಂಪನಿ ಬಳಿ 600 ಕ್ಕೂ ಹೆಚ್ಚು ಯುಟಿಲಿಟಿ ಮತ್ತು ವಿನ್ಯಾಸದ ಪೇಟೆಂಟ್‌ಗಳನ್ನು ಹೊಂದಿದ್ದು, ಅದರಲ್ಲಿ 446 ಮಂಜೂರು ಮಾಡಲಾಗಿದೆ. ಹೆಚ್ಚಾಗಿ ಈ ಕಂಪನಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ.