ಚೈನಾದ ಅತ್ಯಂತ ಹಿರಿಯ ವಯೋವೃದ್ಧೆ , 135 ಅಲಿಮಿಹಾನ್ ಸೆಯಿತಿ ಸಾವು
ಚೀನಾ : ಚೈನಾದ ಅತ್ಯಂತ ಹಿರಿಯ ವಯೋವೃದ್ಧೆ ಎಂಬ ಖ್ಯಾತಿ ಪಡೆದಿದ್ದ 135 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ.
ಅಲಿಮಿಹಾನ್ ಸೆಯಿತಿ ತಮ್ಮ 135ನೇ ವಯಸ್ಸಿನಲ್ಲಿ ಕ್ಸಿನ್‍ಜಿಯಾಂಗ್ ಉಯಿಗುರ್ ಪ್ರದೇಶದಲ್ಲಿ ನಿಧನರಾಗಿದ್ದಾರೆ.
2013 ರಲ್ಲಿ, ಚೀನಾ ಅಸೋಸಿಯೇಶನ್ ಆಫ್ ಜೆರೊಂಟಾಲಜಿ ಮತ್ತು ಜೆರಿಯಾಟ್ರಿಕ್ಸ್ ಬಿಡುಗಡೆ ಮಾಡಿದ ಚೀನಾದ ಅತ್ಯಂತ ಹಳೆಯ ವ್ಯಕ್ತಿಗಳ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿದ್ದರು. ತುಂಬಾ ಸರಳ ಜೀವನವನ್ನು ನಡೆಸುತ್ತಿದ್ದರು. ಯಾವಾಗಲೂ ಸಮಯಕ್ಕೆ ಸರಿಯಾಗಿ ತಿನ್ನುತ್ತಿದ್ದರು, ತನ್ನ ಮೊಮ್ಮಕ್ಕಳ ಜೊತೆಗೆ ಕುಳಿತು ಕಾಲ ಕಳೆಯುತ್ತಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ..
ಚೀನಾದ ದಾಖಲೆಯ ಪ್ರಕಾರ 1886 ಜೂನ್ 25ರಂದು ಜನಿಸಿದ ಸೆಯಿತಿ ಅವರು ದೀರ್ಘಾಯುಷಿಗಳ ಪಟ್ಟಣವೆಂದೇ ಪ್ರಸಿದ್ಧಿ ಪಡೆದ ಕೊಮುಕ್ಸೆರಿಕ್ ಟೌನ್ ಶಿಪ್‍ನವರು. ಅವರಿಗೆ ದೃಷ್ಟಿ, ಶ್ರವಣ ಸಮಸ್ಯೆ ಇರಲಿಲ್ಲ. ನೆನಪಿನ ಶಕ್ತಿ ಕೂಡಾ ಚೆನ್ನಾಗಿತ್ತು. ಬನ್, ಮೀನು, ಹಣ್ಣುಗಳನ್ನು ಸೇವಿಸುತ್ತಿದ್ದರು ಎನ್ನಲಾಗಿದೆ.
ಪ್ರಾರ್ಥನಾ: ದೇವರೊಂದಿಗೆ ಸಂವಹನ ನಡೆಸುವ ಹಿಂದೂ ವಿಧಾನ : ಕೆಲ ಉಪಯುಕ್ತ ಪ್ರಾರ್ಥನೆಗಳು