ಕೊರೊನಾ ತವರು ಚೀನಾ ಮಲೇರಿಯಾದಿಂದ ಮುಕ್ತ..!
ಇಡೀ ವಿಶ್ವಕ್ಕೆ ಮಹಾಮಾರಿ ಕೊರೋನಾವನ್ನು ಹಂಚಿ ಕೋಟ್ಯಾಂತರ ಜನರ ಜೀವನ ನಾಶ ಮಾಡಿರುವ ಪಾಪಿ ದೇಶವೆಂಬ ಕುಖ್ಯಾತಿಗೆ ಪಾತ್ರವಾಗಿರುವ ಚೀನಾ ಇದೀಗ ಮಹಾನ್ ಸಾಧನೆಯೊಂದನ್ನ ಮಾಡಿಬಿಟ್ಟಿದೆ.. ಹೌದು ಚೀನಾ ಈಗ ಮಲೇರಿಯಾ ಮುಕ್ತ ದೇಶವಾಗಿದೆ. ಈ ಕಾಯಿಲೆ ಶುರುವಾದ 70 ವರ್ಷಗಳ ಬಳಿಕ ಚೀನಾ ಮಲೇರಿಯಾ ಮುಕ್ತ ದೇಶ ಅಂತ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಈ ಕಾಯಿಲೆ ಶುರುವಾದಾಗ ಅಂದ್ರೆ 1940ರ ದಶಕದಲ್ಲಿ ಚೀನಾದಲ್ಲಿ ವರ್ಷಕ್ಕೆ 3 ಕೋಟಿಗೂ ಹೆಚ್ಚು ಪ್ರಕರಣಗಳು ದಾಖಲಾಗ್ತಿದ್ವು. ಆದ್ರೆ ನಿರಂತರವಾಗಿ ಕಳೆದ 4 ವರ್ಷಗಳಿಂದ ಒಂದೇ ಒಂದು ಕೊರೋನಾ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಮಲೇರಿಯಾ ಮುಕ್ತ ಅಂತ ಘೋಷಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನೋಮ್, ಮಲೇರಿಯಾದಿಂದ ದೇಶವನ್ನು ಹೊರತಂದ ಚೀನೀಯರಿಗೆ ಶುಭಾಶಯ ಹೇಳಿದ್ದಾರೆ. ಯಾವುದೇ ಒಂದು ದೇಶದಲ್ಲಿ ಮೂರು ವರ್ಷಗಳಿಂದ ಒಬ್ಬೇ ಒಬ್ಬರಿಗೂ ಮಲೇರಿಯಾ ಬಾರದೇ ಇದ್ರೆ ಮಲೇರಿಯಾ ಮುಕ್ತ ದೇಶದ ಸ್ಥಾನಮಾನಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಅರ್ಜಿ ಸಲ್ಲಿಸಬಹುದು. ಇನ್ನೂ ಮಲೇರಿಯಾ ವಿರುದ್ಧ ಜಯ ಸಾಧಿಸಿದ 39 ದೇಶಗಳ ನಂತರ ಚೀನಾ ಮಲೇರಿಯಾ ವಿರುದ್ಧ ಜಯಗಳಿಸಿದ 40ನೇ ದೇಶವಾಗಿದೆ..