ಚೀನಾ ಮೇಲೆ ದಬ್ಬಾಳಿಕೆ ನಡೆಸಲು ಪ್ರಯತ್ನಿಸಿದ್ರೆ ನುಜ್ಜುಗುಜ್ಜಾಗಲಿದ್ದಾರೆ – ಷಿ ಜಿನ್ ಪಿಂಗ್
ವಿದೇಶಿ ಶಕ್ತಿಗಳ ಬೆದರಿಕೆಗೆ ಮಣಿಯುವುದಿಲ್ಲ ಎಂದು ಕೊರೊನಾ ತವರಾದ ಚೀನಾದ ಅಧ್ಯಕ್ಷ ಕ್ಷೀ ಜಿಂಗ್ ಪಿಂಗ್ ಹೇಳಿಕೊಂಡಿದ್ದಾರೆ. ದೇಶವನ್ನು ಪೀಡಿಸಲು ಅಥವಾ ದಬ್ಬಾಳಿಕೆ ನಡೆಸಲು ಯಾವುದೇ ವಿದೇಶಿ ಶಕ್ತಿಗಳಿಗೆ ಚೀನಾ ಜನತೆ ಅವಕಾಶ ನೀಡುವುದಿಲ್ಲ. ದೇಶದ ಸಾರ್ವಭೌಮತೆಯನ್ನು ಸೇನೆ ಕಾಪಾಡಲಿದೆ ಎಂದು ಅಧ್ಯಕ್ಷ ಷಿ ಜಿಂಗ್ಪಿನ್ ಗುಡುಗಿದ್ದಾರೆ.
ಹೌದು ಯಾನನ್ಮೆನ್ ಸ್ಕ್ವೇರ್ನಲ್ಲಿ ಗುರುವಾರ ನಡೆದ ಚೀನಾದ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿರುವ ಜಿಂಗ್ ಪಿಂಗ್ ದಬ್ಬಾಳಿಕೆ ನಡೆಸಲು ಯಾರಾದರೂ ಪ್ರಯತ್ನಿಸಿದರೆ 140 ಕೋಟಿಗಿಂತಲೂ ಹೆಚ್ಚಿರುವ, ದೊಡ್ಡ ಉಕ್ಕಿನ ಗೋಡೆಯಂತಿರುವ ಚೀನಾದ ಜನರ ನಡುವೆ ಸಿಕ್ಕಿ ಅವರು ನುಜ್ಜುಗುಜ್ಜಾಗಲಿದ್ದಾರೆ ಎಂದು ಷಿ ಹೇಳಿದರು.
ಯಾವುದೇ ವಿದೇಶಿ ಪಡೆಗೆ ಚೀನಾವನ್ನು ಪೀಡಿಸಲು ಅನುಮತಿ ನೀಡುವುದಿಲ್ಲ ಎಂದು ಷಿ ಎಚ್ಚರಿಕೆ ನೀಡಿರುವುದು ಅಮೆರಿಕವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಲಾಗಿದೆ ಎಂದು ವಿಶ್ಲೇಷಿಸಲಾಗಿದೆ..
ಚೀನಾದ ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೋವಿಡ್ 19 ಸಾಂಕ್ರಾಮಿಕದ ಮೂಲ, ವ್ಯಾಪಾರ, ಮಾನವ ಹಕ್ಕುಗಳು ಮತ್ತು ಸೇರಿದಂತೆ ಹಲವು ವಿಷಯಗಳಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಈಗಿನ ಅಧ್ಯಕ್ಷ ಜೋ ಬಿಡನ್ ಇಬ್ಬರೂ ಚೀನಾ ಕಡೆಗೆ ಕಠಿಣ ನೀತಿ ಅನುಸರಿಸಿದ್ದಾರೆ.