ಕೊರೊನಾ ಚೀನಾದ ಜೆನೆಟಿಕ್ ಅಸ್ತ್ರ – ಕಳಚಿ ಬಿದ್ದ ‘ಛೀ’ನಾದ ಅಸಲಿ ಮುಖವಾಡ – 3ನೇ ಮಹಾಯುದ್ಧದ ತಯಾರಿಯಲ್ಲಿ ಚೀನಾ..?
ಇಡೀ ವಿಶ್ವಕ್ಕೆ ಚೀನಾ ಕೋವಿಡ್ ಅನ್ನ ಹಂಚಿದ್ದು, ಕೋಟ್ಯಾಂತರ ಜನರ ಸಾವಿಗೆ ಕಾರಣಗವಾಗಿದೆ… ಈವರೆಗೂ ಭಾರತ ಸೇರಿದಂತೆ ಅನೇಕ ದೇಶಗಳು ಈ ಮಹಾಮಾರಿಗೆ ತತ್ತರಿಸಿಹೋಗಿವೆ. ಆದ್ರೆ ಕೊರೊನಾ ಮಹಾಮಾರಿ ಹುಟ್ಟಿಕೊಂಡಾಗಿನಿಂದಲೂ ಚೀನಾದ ಬಯೋಲಾಜಿಕಲ್ ಲ್ಯಾಬ್ ನಿಂದ ಇಡೀ ವಿಶ್ವಕ್ಕೆ ಜೆನೆಟಿಕ್ ಅಸ್ತ್ರದ ರೂಪದಲ್ಲಿ ಹಬ್ಬಿಸಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇದ್ದರು ಇದನ್ನ ಚೀನಾ ಒಪ್ಪಿಕೊಂಡಿರಲಿಲ್ಲ..
ಇದೀಗ ಚೀನಾದ ಅಸಲಿಯತ್ತು ಜಗತ್ತಿನ ಎದುರು ಬಟಾಬಯಲಾಗಿದ್ದು, ಚೀನಾದ ಮಾನ ಹರಾಜಾಗಿದೆ.. ಹೌದು.. 2015 ರಲ್ಲಿ ಚೀನಾ ವಿಜ್ಞಾನಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಬರೆದಿರುವ ಒಂದು ಪತ್ರ ಇದೀಗ ಬಹಿರಂಗವಾಗಿದೆ.
ಕರೋನಾ ವೈರಸ್ ನ್ನು ಬಳಸಿ ಅದನ್ನು ಜೆನೆಟಿಕ್ ಅಸ್ತ್ರದ ರೂಪದಲ್ಲಿ ಬಳಸುವ ಬಗ್ಗೆ ಆ ಪತ್ರದಲ್ಲಿ ಚರ್ಚಿಸಲಾಗಿದೆ. 2015ರಲ್ಲೇ ಚೀನಾದಲ್ಲಿ ಕರೋನಾ ಜೆನೆಟಿಕ್ ಅಸ್ತ್ರದ ಬಗ್ಗೆ ಚರ್ಚೆ ನಡೆಸಿರುವುದು ವಿಶ್ವಾದ್ಯಂತ ಸಂಚಲನ ಸೃಷ್ಟಿಸಿದೆ.
ಕಳೆದ 5 ವರ್ಷಗಳಿಂದ ಚೀನಾ ಕರೋನಾ ಜೆನೆಟಿಕ್ ಅಸ್ತ್ರ ತಯಾರಿಸುತ್ತಿದೆ. ಚೀನಾ ಅಧಿಕಾರಿಗಳ ಈ ಪತ್ರ ಈಗ ಅಮೆರಿಕದ ಕೈಗೂ ಸಿಕ್ಕಾಗಿದೆ. ಅಲ್ಲದೇ ಚೀನಾ ಮೂರನೇ ವಿಶ್ವ ಯುದ್ಧಕ್ಕೆ ತಯಾರಿ ನಡೆಸುತ್ತಿತ್ತು. ಅದರಲ್ಲಿ ಕರೋನಾ ವೈರಸ್ ಜೈವಿಕ ಮತ್ತು ಜೆನೆಟಿಕ್ ಅಸ್ತ್ರ ತಯಾರಿಸಿ ಪ್ರಯೋಗಿಸುವ ಸಿದ್ದತೆ ನಡೆಸುತ್ತಿತ್ತು ಎಂದು ಪತ್ರದ ಆಧಾರ ಮೇಲೆ ಅಮೆರಿಕ ಹೇಳಿದೆ. ಸಿಕ್ರೇಟ್ ಕೋವಿಡ್ ಡಾಕ್ಯುಮೆಂಟ್ ಎಂದು ಹೇಳಲಾಗಿರುವ ಈ ಪತ್ರದಲ್ಲಿ ‘ಇದು ನಮ್ಮ ಗೆಲುವಿನ ಪ್ರಮುಖ ಅಸ್ತ್ರವಾಗಿದೆ’ ಎಂದು ಹೇಳಲಾಗಿದೆ.
ಚೀನಾ 2015 ರಿಂದಲೇ ಕರೋನಾ ಜೈವಿಕಾಸ್ತ್ರ ಸೇನಾ ಮಟ್ಟದಲ್ಲಿ ಬಳಸುವ ತಯಾರಿ ನಡೆಸುತ್ತಿತ್ತು ಎಂದು ಅಸ್ಟ್ರೇಲಿಯಾದ Weekend Australian ಎಂಬ ಪತ್ರಿಕೆ ವರದಿ ಮಾಡಿದೆ. ಮೂರನೇ ವಿಶ್ವ ಯುದ್ದ ಜೈವಿಕ ಅಸ್ತ್ರದ ಮೂಲಕ ನಡೆಯಲಿದೆ ಎಂದು ಚೀನಾ ಡ್ಯಾಕುಮೆಂಟ್ ಹೇಳಿದೆ.
ಒಟ್ಟಾರೆ ಕಪಟಿ ಚೀನಾದ ಅಸಲಿ ಮುಖವಾಡ ಜಗತ್ತಿನ ಎದುರು ಕಳಚಿಬಿದ್ದಿದ್ದು, ಇಡೀ ವಿಶ್ವವೇ ಚೀನಾಗೆ ಛೀಮಾರಿ ಹಾಕುತ್ತಿದೆ. ಮತ್ತೊಂದೆಡೆ ಚೀನಾದ ಪಾಪ ಕರ್ಮದಿಂದಾಗಿ ವಿಶ್ವದ್ಯಾಂತ ಕೋಟ್ಯಾಂತರ ಜನರ ಬದುಕು ಮೂರಾಬಟ್ಟೆಯಾಗಿದೆ.. ಲೆಕ್ಕವೇ ಸಿಗದಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿ ನಿತ್ಯ ಸಾಯುತ್ತಿದ್ದಾರೆ. ದೇಶಗಳು ಆರ್ಥಿಕವಾಗಿ ಕುಸಿತ ಕಂಡಿವೆ.. ಚೀನಾ ಎಂತಹ ಕಪಟಿ ಎಂದು ಈ ಹಿಂದೆಯೇ ಎಲ್ಲರಿಗೂ ಗೊತ್ತಿತ್ತು.. ಇದೀಗ ಅದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಂತಾಗಿದೆ.