ಸಿಂಪಲ್ ಆಗಿ ಟಂಪಲ್ ಅಲ್ಲಿ ಮದುವೆಯಾದ ಬಿಗ್ ಬಾಸ್ ಚೈತ್ರಾ ಕೊಟ್ಟೂರು..!
ಬೆಂಗಳೂರು: BIGGBOSS ಕನ್ನಡ ಸೀಸನ್ 7ರ ಸ್ಪರ್ಧಿಯಾಗಿದ್ದ ಚೈತ್ರಾ ಕೊಟ್ಟೂರು ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬ್ಯಾಟರಾಯನಪುರದಲ್ಲಿರುವ ಗಣೇಶ ದೇವಸ್ಥಾನದಲ್ಲಿ ಅತ್ಯಂತ ಸರಳವಾಗಿ ಮದುವೆಮಾಡಿಕೊಂಡಿದ್ದಾರೆ.
ಕನ್ಸ್ಟ್ರಕ್ಷನ್ ರಿಯಲ್ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿರುವ ನಾಗಾರ್ಜುನ್ ಎಂಬುವವರ ಕೈ ಹಿಡಿದಿದ್ದಾರೆ ಚೈತ್ರಾ ಕೊಟ್ಟೂರು. ಕರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದೆ.
ಚೈತ್ರಾ ಕೊಟ್ಟೂರು ಸೂಜಿದಾರ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಿ ಬಳಿಕ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡು ಇನ್ನೂ ಕೆಲ ಸಿನಿಮಾಗಳಲ್ಲಿ ನಡೆಸಿದ್ದಾರೆ.
BIGGBOSS 8 : ದಿವ್ಯಾ ಉರುಡುಗಾಗೆ ಬಿಗ್ ಬಾಸ್ ಕೊಟ್ಟ ಗಿಫ್ಟ್ ಎಲ್ರನ್ನೂ ಭಾವುಕರಾಗುವಂತೆ ಮಾಡಿತ್ತು..!