BIGGBOSS 8 – ಪ್ರಶಾಂತ್ ಮೈಂಡ್ ಗೇಮ್ ಗೆ ಸಿಲುಕಿ ಗಲಾಟೆ ಮಾಡಿಕೊಂಡಿದ್ದ ಮಂಜು ದಿವ್ಯಾ ಮತ್ತೆ ಒಂದಾದ್ರಾ..!
ಪ್ರಶಾಂತ್ ಸಂಬರಗಿ ಮೈಂಡ್ ಗೇಮ್ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಚರ್ಚೆಯಾಗುತ್ತಿದೆ. ಅದಕ್ಕೆ ಪುಷ್ಠಿ ಎಂಬಂತೆ ಇತ್ತೀಚೆಗೆ ಪ್ರಶಾಂತ್ ಸಂಬರಗಿ ನೀನು ಮಂಜು ಬಾಲ ಆಗ್ಬೇಡ ಬೇರೆಯವರ ನೆರಳಲ್ಲಿ ಇರಬೇಡ ಎಂದು ದಿವ್ಯಾ ಸುರೇಶ್ ಗೆ ಹೇಳಿದ್ರು. ದಿವ್ಯಾ ಈ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡು ಕೊಂಚ ಮಂಜು ಇಂದ ಅಂತರ ಕಾಯ್ದುಕೊಂಡಿದ್ದರು. ಇತ್ತೀಚೆಗೆ ಈ ಜೋಡಿ ಅಡುಗೆ ಮನೆಯಲ್ಲಿ ಕಿತ್ತಾಡಿಕೊಂಡಿತ್ತು. ಸದಾ ಅನ್ಯೋನ್ಯವಾಗಿದ್ದ ಜೋಡಿ ನಡುವಿನ ಗಲಾಟೆ ಮನೆಯವರಿಗೆ ಅಚ್ಚರಿ ಎನಿಸಿತ್ತು.
ಇದ್ರಿಂದ ಕೋಪಗೊಂಡಿದ್ದ ಮಂಜು ಮನವೊಲಿಸಲು ದಿವ್ಯಾ ಸುರೇಶ್ ಹಾಡುಗಳ ಮೂಲಕ ತಮ್ಮ ಮಾತುಗಳನ್ನ ತಿಳಿಸುವ ಪ್ರಯತ್ನ ಮಾಡ್ತಿದ್ದಾರೆ. ಇದಕ್ಕೆ ಮಂಜು ಕೂಡ ಹಾಡಿನ ಮೂಲಕವೇ ಟಾಂಟ್ ಕೊಟ್ಟಿದ್ದು, ಈ ಜೋಡಿಯ ಹಾಡಿನ ಜಟಾಪಟಿಗೆ ಮನೆ ಮಂದಿ ಮಸ್ತ್ ಎಂಟರ್ ಟೈನ್ ಆಗಿದ್ದಾರೆ. ಹೌದು, ಮೊದಲಿಗೆ ‘ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ’ ಎಂದು ದಿವ್ಯಾ ಹಾಡು ಶುರುಮಾಡಿದ್ದಾರೆ. ಬಳಿಕ ಮಂಜು ಕೂಡ ಹಾಡಿನ ಮೂಲಕವೇ ಪ್ರತಿಕ್ರಿಯೆ ನೀಡಿದ್ದು, ‘ಪ್ರೇಮಮಂ ಶರಣಂ ಗಚ್ಛಾಮೀ ಅಲ್ಲಿ ಮೋಸವೋ’ ಎಂದು ಹಾಡಿ ಕೋಪಗೊಂಡಿರೋದನ್ನ ತೋರಿಸಿಕೊಳ್ತಾರೆ.
ಬಳಿಕ ದಿವ್ಯಾ ಸುರೇಶ್ ಮತ್ತೆ ಹಾಡು ಹಾಡಿದ್ದಾರೆ. ‘ ನೀನೆಂದರೆ ನನಗೆ ಇಷ್ಟ ಕಣೋ’ ಎಂದಿದ್ದಾರೆ. ಇದಕ್ಕೆ ಮಂಜು ‘ಮೆಟ್ಟಲಿ ಹೊಡಿತೀನಿ ಸಮ್ನೆ ಇರು’ ಎಂದು ಹಾಡಿದ್ದಾರೆ. ಇದಕ್ಕೆ ದಿವ್ಯಾ ಮತ್ತೆ ಹಾಡು ಹಾಡಿದ್ದು, ‘ಏಕೆ ಹೀಗಾಯ್ತೋ ನಾನು ಕಾಣೇನೋ’ ಎಂದು ಹಾಡು ಹೇಳಿದ್ದಾರೆ. ಈ ವೇಳೆ ರಾಜೀವ್ ಹಾಗೂ ಚಂದ್ರಕಲಾ ಕೂಡ ದಿವ್ಯಾಗೆ ಸಾಥ್ ನೀಡಿದ್ದಾರೆ. ನಂತರ ಮಂಜು ‘ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯ ಬರಹ’ ಎಂದು ಹಾಡುತ್ತಾರೆ. ಬಳಿಕ ಮಾತಿನ ಮಲ್ಲ ಮಂಜು ‘ಯಾರೇ ಕೂಗಡಾಲಿ ಊರೇ ಹೋರಾಡಲಿ’ ಮಂಜ ನಿನಗೆ ಸಾಟಿ ಇಲ್ಲ ಎಂದು ಹಾಡು ಹಾಡಿಕೊಳ್ತಾರೆ.
ಇದಕ್ಕೆ ದಿವ್ಯಾ ‘ನನ್ನ ನೀನು ಗೆಲ್ಲಲಾರೆ ತಿಳಿದು ತಿಳಿದು ಛಲವೇತಕೆ ಎಲ್ಲರೆದುರು ಮಾನ ಹೋಗಿ ಕೊನೆಗೆ ಮನೆಗೆ ಹೋಗುವೆ’ ಎಂದು ಹೇಳುತ್ತಾ ಹಾಸ್ಯ ಮಾಡಿದ್ದಾರೆ. ಇದಕ್ಕೆ ಮಂಜು ‘ಓ ಭ್ರಮೆ’ ಎಂಬ ಡೈಲಾಗ್ ಹೊಡೆದಿದ್ದಾರೆ. ‘ಕಣ್ಣೀರಿದು ರಕ್ತ ಕಣ್ಣೀರಿದು ಪರರ ಕಣ್ಣಿರಿನ ಪ್ರತಿಬಿಂಬ ಇದು’ ಎಂದು ಹಾಡಿ ಬೇಸರವಾಗಿರೋದನ್ನ ತೋರಿಸಿಕೊಳ್ತಾರೆ. ಆಗ ದಿವ್ಯಾ ‘ಅಳಬ್ಯಾಡ ಕಣೋ ಸಮ್ಮಕ್ಕಿರು ನನ್ನ ಮುದ್ದಿನ ರಾಜ’ ಅನ್ನುತ್ತಾರೆ.
ಇದಕ್ಕೆ ಮಂಜು ‘ಹಾವಾದ್ರೂ ಕಚ್ಚಾಬಾರ್ದ ಚೇಳಾದ್ರೂ ಕುಕ್ಕಾಬಾರ್ದ’ ಎಂದು ಹಾಸ್ಯಾಸ್ಪದವಾಗಿ ಹಾಡುತ್ತಾರೆ. ಬಳಿಕ ದಿವ್ಯಾ ‘ಸಿಟ್ಯಾಕೋ ಸಿಡುಕ್ಯಾಕೋ ನನ್ನ ಜಾಣ’ ಎಂದು ಹಾಡುತ್ತಾರೆ. ಒಟ್ಟಾರೆ ಕಿಚನ್ ಕಿತ್ತಾಟದಲ್ಲಿ ಮುನಿಸಿಕೊಂಡಿರುವ ಲ್ಯಾಗ್ ಮಂಜು ಸಮಾಧಾನಪಡಿಸಲು ದಿವ್ಯಾ ಹಾಡು ಹಾಡಿದ್ರೆ ಅದಕ್ಕೆ ಸಖತ್ ಹಾಗಿ ಹಾಡಿನ ಮೂಲಕವೇ ಮಾತಿನ ಮಲ್ಲ ಮಂಜ ಟಾಂಗ್ ಕೊಟ್ಟು ಮನೆಮಂದಿಯನ್ನೆಲ್ಲಾ ನಕ್ಕಿದ್ದಾನೆ. ಈ ಜೋಡಿಯ ಕ್ಯೂಟ್ ಕಿತ್ತಾಟಕ್ಕೆ ಮನೆ ಮಂದಿ ಅಷ್ಟೇ ಅಲ್ಲ ಪ್ರೇಕ್ಷಕರು ಕೂಡ ಫಿದಾ ಆಗಿದ್ದಾರೆ.
ಚಿನ್ನದ ಸರ ಸಾಗಿಸುತ್ತಿರುವ ಕಳ್ಳ ಇರುವೆಗಳ ವಿಡಿಯೋ ವೈರಲ್..!
BIGGBOSS 8 : ದಿವ್ಯಾ ಉರುಡುಗಾಗೆ ಬಿಗ್ ಬಾಸ್ ಕೊಟ್ಟ ಗಿಫ್ಟ್ ಎಲ್ರನ್ನೂ ಭಾವುಕರಾಗುವಂತೆ ಮಾಡಿತ್ತು..!
BIGGBOSS 8 – ಪ್ರಿಯಕರನ ಧ್ವನಿ ಕೇಳಿ ಕುಣಿದು ಕುಪ್ಪಳಿಸಿದ ಶುಭಾ..!
‘ದಾಸ’ನ ‘ರಾಬರ್ಟ್’ ವಿಜಯ ಯಾತ್ರೆ ಬಂದ್… ಕಾರಣ..?
ಸಲ್ಮಾನ್- ಶಾರುಖ್ ಜಗಳದ ನಂತರ ಚಲ್ತೆ ಚಲ್ತೆ ಚಲನಚಿತ್ರದಲ್ಲಿ ಐಶ್ವರ್ಯಾ ಬದಲಿಗೆ ರಾಣಿ ಆಯ್ಕೆಯಾದ ಬಳಿಕ ಏನೇನಾಯಿತು ?
90 ರ ದಶಕದ ಮಾದಕ ನಟಿ ಶಕೀಲಾ ರಾಜಕೀಯಕ್ಕೆ ಎಂಟ್ರಿ..!
ತೆಲುಗು ರಾಜ್ಯಗಳಲ್ಲಿ ಕನ್ನಡ ಸ್ಟಾರ್ ಗಳ ಅಬ್ಬರ..! ತೆಲುಗಿನಲ್ಲಿ ಕೋಟಿಗೊಬ್ಬ 3..!