ಬಿಗ್ ಬಾಸ್  ನ ಮಾಜಿ ಸ್ಪರ್ಧಿ ಚೈತ್ರ ಕೊಟ್ಟೂರು ಆತ್ಮಹತ್ಯೆಗೆ ಯತ್ನ..!

1 min read

ಬಿಗ್ ಬಾಸ್  ನ ಮಾಜಿ ಸ್ಪರ್ಧಿ ಚೈತ್ರ ಕೊಟ್ಟೂರು ಆತ್ಮಹತ್ಯೆಗೆ ಯತ್ನ..!

ಬಿಗ್ ಬಾಸ್ ಸೀಸನ್ 7 ರಲ್ಲಿ ಗಮನ ಸೆಳೆದು ಕೆಲ ಸಿನಿಮಾಗಳು ಹಾಗೂಡ ಆಲ್ಬಂ ಸಾಂಗ್ ಗಳಲ್ಲಿ ಕಾಣಿಸಿಕೊಂಡಿದ್ದ ಚೈತ್ರಾ ಕೊಟ್ಟೂರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇತ್ತೀಚಿಗಷ್ಟೇ  ಸರಳವಾಗಿ ಚೈತ್ರಾ ಕೊಟ್ಟೂರು ಮದುವೆಯಾಗಿದ್ದರು. ಆದ್ರೆ ಮದುವೆಯಾದ ಸಂಜೆಯೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇವರ ಮದುವೆ ವಿಚಾರವಾಗಿ ಸಾಕಷ್ಟು ಹೈಡ್ರಾಮಾ ನಡೆದಿತ್ತು.

ಮದುವೆಯ ಬಗ್ಗೆ ಅನೇಕ ಊಹಾಪೋಹಗಳು ವರದಿಯಾಗಿತ್ತು. ಕೊಟ್ಟೂರು ಮದುವೆಯಾಗಿದ್ದ ಹುಡುಗ ಕೂಡ ಅವರ ಕುಟುಂಬದ ಪರ ನಿಂತು ಇದು ಬಲವಂತದ ಮದುವೆ ಎಂದಿದ್ದರು. ಆದ್ರೆ ಆತನಿಗೆ ಅವರ ಮನೆಯವರು ಬ್ರೈನ್ ವಾಶ್ ಮಾಡಿ ಹಾಗೆ ಹೇಳಿಸುತ್ತಿದ್ದಾರೆ ಎಂದು ಚೈತ್ರಾ ಆರೋಪ ಮಾಡಿದ್ದರು. ಅಲ್ಲದೇ ಅವರ ಬಾಂಧವ್ಯ ತೀರ ನಿಕಟ ಎನ್ನುವದನ್ನ ಸಾಬೀತು ಪಡಿಸಲು ಕೆಲ ಫೋಟೋಗಳನ್ನೂ ಕೂಡ ಶೇರ್ ಮಾಡಿದ್ದರು.

ಅಲ್ಲದೇ ನಾನು ಬಣ್ಣ ಹಚ್ಚುವವಳು ಅಂತ ಹೀಯಾಳಿಸಿ ತಮ್ಮ ಹಿರಿಯ ಅಪ್ಪ ಅಪ್ಪನನ್ನ ತಳ್ಳಾಡಿ ಸಹೋದರರ ಮೇಲೂ ಹಲ್ಲೆ ನಡೆಸಿದ್ದರು ಎಂದು ಚೈತ್ರಾ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದರು. ಇಷ್ಟೆಲ್ಲಾ ಹೈಡ್ರಾಮಾಗಳ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.  ಕೋಲಾರದ ಖಾಸಗಿ ಆಸ್ಪತ್ರಯಲ್ಲಿ ಚೈತ್ರಾ ಕೊಟ್ಟೂರು ಅವರಿಗೆ ಚಿಕಿತ್ಸೆ ನೀಡಲಾಗಿದೆ.

‘ದುಬಾರಿ’ ಕೈಬಿಟ್ಟ ಧ್ರುವ …! ಯಾಕೆ…? ಮುಂದೇನ್ ಕಥೆ..?

ಸ್ಟೈಲಿಶ್‌ ಸ್ಟಾರ್‌ ಬರ್ತ್‌ಡೇ ಗೆ ʻಪುಷ್ಪʼ ಟೀಸರ್‌ ಗಿಫ್ಟ್‌.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd