ಚಾಮರಾಜನಗರ | ಬಂಡೀಪುರದಲ್ಲಿ ಬೆಂಕಿರೇಖೆ ನಿರ್ಮಾಣ
ಚಾಮರಾಜನಗರ : ಅಗ್ನಿ ಅವಘಡಗಳನ್ನು ತಡೆಯಲು ಬಂಡೀಪುರದಲ್ಲಿ ಬೆಂಕಿರೇಖೆ ನಿರ್ಮಾಣ ಹಾಗೂ ವಾಯುಪಡೆ ಹೆಲಿಕಾಪ್ಟರ್ ಬಳಕೆಗೂ ಚಿಂತನೆ ಮಾಡಲಾಗಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್.ಆರ್ ನಟೇಶ್ ತಿಳಿಸಿದ್ದಾರೆ.
ಕರ್ನಾಟಕ ತಮಿಳುನಾಡು ಹಾಗೂ ಕೇರಳ ರಾಜ್ಯಳ ಗಡಿಯಲ್ಲಿ ವಿಸ್ತರಿಸಿಕೊಂಡಿರುವ ಬಂಡೀಪುರ ಅಭಯಾರಣ್ಯದಲ್ಲಿ ಈ ವರ್ಷ ಭಾರೀ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬೆಂಕಿ ನಿಯಂತ್ರಣಕ್ಕೆ ಈ ಬಾರಿ ಅರಣ್ಯ ಇಲಾಖೆ ಬೇಸಿಗೆಗು ಮುನ್ನವೇ ಬೆಂಕಿ ರೇಖೆ ನಿರ್ಮಾಣ ಮಾಡಿದೆ. ಇದಲ್ಲದೆ ಅತಿ ಅವಶ್ಯಕತೆ ಬಿದ್ದಲ್ಲಿ ವಾಯುಪಡೆ ಹೆಲೆಕ್ಯಾಪ್ಟರ್ ಗಳ ಬಳಕೆಗು ಅರಣ್ಯ ಇಲಾಖೆ ಕ್ರಮ ವಹಿಸಿದೆ.
ಬಂಡೀಪುರ ರಾಜ್ಯದಲ್ಲಿಯೇ ಅತೀ ಹೆಚ್ಚು ಹುಲಿಗಳನ್ನ ಹೊಂದಿರುವ ತಾಣ. ಹುಲಿಯಷ್ಟೆ ಅಲ್ಲದೆ ಆನೆ ಚಿರತೆ, ಕರಡಿ ಕಾಡೆಮ್ಮೆ, ಜಿಂಕೆ ಸೇರೀದಂತೆ ಅಸಂಖ್ಯಾತ ಪ್ರಾಣಿ ಪಕ್ಷಿಗಳನ್ನು ಹೊಂದಿರುವ ಅಭಯಾರಣ್ಯವಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ 4 ಸಾವಿರ ಹೆಕ್ಟೇರ್ ಗು ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಅಮೂಲ್ಯ ಅರಣ್ಯ ಸಂಪತ್ತು ಸುಟ್ಟು ಭಸ್ಮವಾಗಿತ್ತು.
ವ್ಯಾಪಕವಾಗಿ ಹಬ್ಬಿದ ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆ ಹರಸಾಹಸವನ್ನೆ ನಡೆಸಿತ್ತು. ದುರ್ಗಮ ಅರಣ್ಯದಲ್ಲಿ ವಾಯುಪಡೆ ಹೆಲೆಕ್ಯಾಪ್ಟರ್ ಗಳ ಮೂಲಕ ಬೆಂಕಿ ನಂದಿಸಲಾಗಿತ್ತು.
ಚಿತ್ರದುರ್ಗದಲ್ಲಿ ಸತತ 6 ಗಂಟೆಗಳಿಂದ ಭಾರಿ ವರ್ಷಧಾರೆ
ಹಾಗಾಗಿ ಕಳೆದ ವರ್ಷ ಹತ್ತು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಯಾವುದೇ ಕಡೆ ಬೆಂಕಿ ಬೀಳದಂತೆ ಕ್ರಮ ವಹಿಸಲಾಗಿತ್ತು. ಅದೇ ರೀತಿ ಈ ವರ್ಷವೂ ಸಹ ಝೀರೋ ಫೈರ್ ಇಯರ್ ಮಾಡಲು ಬಂಡೀಪುರ ಅರಣ್ಯಾಧಿಕಾರಿಗಳು ಶ್ರಮಿಸುತ್ತಿದ್ದಾರೆ.
ಅದರಂತೆ ಬಂಡೀಪುರದ ನಡುವೆ ಹಾದು ಹೋಗುವ ರಸ್ತೆಗಳು ಅರಣ್ಯದಲ್ಲಿನ ಸಫಾರಿ ಮಾರ್ಗ, ಗೇಮ್ ರಸ್ತೆಗಳು ಸೇರಿದಂತೆ ಈ ಬಾರಿ 2828 ಕಿಲೋಮೀಟರ್ ಗು ಹೆಚ್ಚು ಉದ್ದ ಬೆಂಕಿ ರೇಖೆ ನಿರ್ಮಿಸಲಾಗಿದೆ.