Chamarajanagar | ಒಂಟಿ ಸಲಗನಿಂದ ಜಸ್ಟ್ ಮಿಸ್…!
ಚಾಮರಾಜನಗರ : ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕಬಿನಿ ಹಿನ್ನೀರಿನಲ್ಲಿ ಒಂಟಿಸಲಗ ಅಟ್ಯಾಕ್ ಮಾಡಿದೆ.
ಬಂಡೀಪುರದ ಕಬಿನಿ ಹಿನ್ನೀರಿನಲ್ಲಿ ಸಫಾರಿ ಜೀಪ್ನ ಮೇಲೆ ಒಂಟಿ ಸಲಗವೊಂದು ಅಟ್ಯಾಕ್ ಮಾಡಿದೆ. ಈ ವೇಳೆ ಜೀಪಿನ ಚಾಲಕನ ಸಮಯ ಪ್ರಜ್ಣೆ ಹಾಗೂ ಧೈರ್ಯದಿಂದ ಜೀಪನ್ನು ಹಿಮ್ಮುಖವಾಗಿ ಓಡಿಸಿದ್ದಾನೆ.
ಇನ್ನೇನೋ ಸಲಗವು ಕೊಂಬಿನಿಂದ ಜೀಪಿನಮೇಲೆ ದಾಳಿ ಮಾಡಬೇಕು ಎನ್ನುವಷ್ಟರಲ್ಲಿ ಜೀಪಿನ ವೇಗ ಹೆಚ್ಚಿಸಿ ಅಪಾಯದಿಂದ ಪಾರಾಗಿದ್ದಾನೆ.

ಈ ವೇಳೆ ಸಫಾರಿ ಜೀಪು ಹಿಮ್ಮುಖವಾಗಿ ಚಲಿಸಿದ್ದಿದ್ರೆ ಪ್ರವಾಸಿಗರು ಅಪಾಯಕ್ಕೆ ಸಿಲುಕುತ್ತಿದ್ರು. ಅದೃಷ್ಟವಶಾತ್ ಪ್ರವಾಸಿಗರು ಅಪಾಯದಿಂದ ಪಾರಾಗಿದ್ದಾರೆ.
ಅಟ್ಟಾಡಿಸಿಕೊಂಡು ಬಂದ ಒಂಟಿ ಸಲಗ ವಾಪಸ್ ಕಾಡಿಗೆ ಮರಳಿದೆ. ಈ ಘಟನೆಯಿಂದ ಸಫಾರಿಯಲ್ಲಿದ್ದ ಜೀಪ್ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.