Chamarajanagar ಜಿಲ್ಲಾ ಕೇಂದ್ರದಲ್ಲಿ ಲೈವ್ ಆಪರೇಷನ್..!!
ಚಾಮರಾಜನಗರ : ಗಡಿ ಜಿಲ್ಲೆ ಚಾಮರಾಜನಗರದ ಜಿಲ್ಲಾ ಕೇಂದ್ರದಲ್ಲಿ ಲೈವ್ ಆಪರೇಷನ್ ನಡೆಯಲಿದೆ..
ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ಡಿಸೆಂಬರ್ 17 ರ ಶನಿವಾರ ಲೈವ್ ಆಪರೇಷನ್ ನಡೆಯಲಿದೆ..
ಲೈವ್ ಆಪರೇಷನ್ ಮೂಲಕ ಗಡಿ ಜಿಲ್ಲೆಯ ವೈದ್ಯರ ವಿನೂತನ ಪ್ರಯತ್ನ ಮಾಡಿದ್ದಾರೆ..
ಗಡಿ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಮೊಣಕಾಲಿನ ಆರ್ತ್ರೋ ಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆಯ ನೇರ ಪ್ರದರ್ಶನ ನಡೆಯಲಿದೆ ಎಂದು ಪ್ರಸಿದ್ದ ಮೂಳೆ ತಜ್ಣ ಡಾ.ಮಾರುತಿ ತಿಳಿಸಿದ್ಧಾರೆ.
ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಾ.ಮಾರುತಿ, ಡಿ.17ರಂದು ಚಾಮರಾಜ ನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನೂತನ ಬೋಧನಾ ಆಸ್ಪತ್ರೆಯಲ್ಲಿ ಕೀಲು ಮತ್ತು ಮೂಳೆ ವಿಭಾಗದ ವತಿಯಿಂದ ಮೊಣಕಾಲಿನ ಆರ್ತ್ರೋಪ್ಲ್ಯಾಸ್ಟಿ ಕಾರ್ಯಾಗಾರದಲ್ಲಿ ಶಸ್ತ್ರಚಿಕಿತ್ಸೆಯ ನೇರ ಪ್ರದರ್ಶನ ನಡೆಯಲಿದೆ ಎಂದರು.
ರಾಜ್ಯದ ಸರ್ಕಾರಿ ಸಂಸ್ಥೆಗಳಲ್ಲಿ ಮೊದಲ ಬಾರಿಗೆ ಸಿ.ಎಂ.ಇ ಮೊಣ ಕಾಲಿನ ಆರ್ತ್ರೋಪ್ಲ್ಯಾಸ್ಟಿ ಶಸ್ತ್ರ ಚಿಕಿತ್ಸೆಯ ನೇರ ಪ್ರದರ್ಶನ ಮಾಡುತ್ತಿರುವುದು ಚಾಮರಾಜನಗರದಲ್ಲಿ ಮಾತ್ರ. ಇದು ನಮಗೆ ಹೆಮ್ಮೆಯ ಕಾರ್ಯವಾಗಿದೆ. ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಆಸ್ಪತ್ರೆ ಮತ್ತು ಸಂಸ್ಥೆಗಳಿಂದ ಕೀಲು ಮತ್ತು ಮೂಳೆ ವಿಭಾಗಗಳಿಂದ 30ಕ್ಕೂ ಹೆಚ್ಚು ತಜ್ಞ ವೈದ್ಯರು ನೋಂದಾ ಯಿಸಿಕೊಂಡಿದ್ದಾರೆ ಎಂದು ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಡಾ.ಮಾರುತಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೃಷ್ಣಪ್ರಸಾದ್ ತಿಳಿಸಿದರು.
ನೇರ ಶಸ್ತ್ರಚಿಕಿತ್ಸೆ ಪ್ರಾತ್ಯಕ್ಷಿಕೆಯಲ್ಲಿ ಒಟ್ಟು ಐದು ತಂಡಗಳು, ಐದು ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿ ಶಸ್ತ್ರಚಿಕಿತ್ಸೆ ಕೈಗೊಳ್ಳುವರು. ಈ ಶಸ್ತ್ರಚಿಕಿತ್ಸೆಯ ನ್ನು ಯಾವ ರೋಗಿಗಳಲ್ಲಿ, ಹೇಗೆ ಮಾಡಬೇಕು, ಹೇಗೆ ಮಾಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ವಿವಿಧೆಡೆಯಿಂದ ಸುಮಾರು 250ಕ್ಕೂ ಹೆಚ್ಚು ವೈದ್ಯರು ಬರುತ್ತಿದ್ದಾರೆ. ಹೊಸ ವೈದ್ಯರು ಯಾವ ರೀತಿಯಾಗಿ ಶಸ್ತ್ರಚಿಕಿತ್ಸೆಗೆ ಸಿದ್ದರಾಗಬೇಕು ಮತ್ತು ಹೇಗೆ ಅದನ್ನು ಮಾಡಬೇಕು ಎನ್ನುವುದನ್ನು ತಿಳಿಸಿಕೊಡುವುದಕ್ಕಾಗಿ ಶಸ್ತ್ರಚಿಕಿತ್ಸೆಯ ನೇರ ಪ್ರದರ್ಶನದ ಪ್ರಮುಖ ಉದ್ದೇಶವಾಗಿದೆ. ಇದನ್ನು ಇದೇ ಮೊದಲ ಬಾರಿಗೆ ಚಾಮರಾಜನಗರದಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
Chamarajanagar , live operation in sims updates








