ಚಾಮರಾಜನಗರ : ರಾಜ್ಯದಲ್ಲಿ ಒಂದೆಡೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಮತ್ತೊದೆಡೆ ಗುಣಮುಖ ಪ್ರಮಾಣವೂ ಹೆಚ್ಚಾಗುತ್ತಿದೆ. ರಾಜ್ಯದ ಚಾಮರಾಜನಗರ ಜಿಲ್ಲೆಯಲ್ಲಿ ಯುವಕನೊಬ್ಬ ಕೊರೊನಾ ಸೋಂಕಿನಿಂದ ಗುಣಮಖನಾಗಿದ್ದಾನೆ. ಮುಂಬೈ ನಿಂದ ಬಂದಿದ್ದ ಯುವಕನಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಇದೀಗ ಆ ಯುವಕ ಗುಣಮುಖನಾಗಿದ್ದಾನೆ ಎಂಬ ಮಾಹಿತಿಯನ್ನು ಜಿಲ್ಲಾಧಿಕಾರಿ ಡಾ.ಎಂ. ಆರ್ ರವಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆ ಮೂಲಕ ಕೊರಾನಾ ಧೃಡ ವಾಗಿದ್ದ ಮುಂಬೈ ಮೂಲದ ಯುವಕ ಆರೋಗ್ಯದತ್ತ ಸಾಗಿದ್ದಾನೆ. ಕೊರೊನಾ ಮುಕ್ತ ಹಸಿರು ವಲಯದಲ್ಲಿ ಮುಂಬೈ ಮೂಲದ ಯುವಕನಿಗೆ ಕೊರಾನಾ ದೃಡವಾಗಿತ್ತು. ಆತನ ಸಂಪರ್ಕ ದಲ್ಲಿದ್ದ ಅವರ ಮಾವ ಸೇರಿದಂತೆ 24 ಮಂದಿಯ ವೈದ್ಯಕೀಯ ಪರೀಕ್ಷೆಯಲ್ಲಿ ಕೊರಾನಾ ನೆಗಟೀವ್ ಬಂದಿತ್ತು. ಇದೀಗ ಯುವಕ ಚೇತರಿಕೆ ಕಂಡಿದ್ದಾನೆ. ಆ ಮೂಲಕ ಮತ್ತೇ ಚಾಮರಾಜನಗರ ಜಿಲ್ಲೆ ಕೊರಾನಾ ಮುಕ್ತ ಹಸಿರು ಹಸಿರು ವಲಯದತ್ತ ಸಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಹೈಕಮಾಂಡ್ ಅಂಗಳದಲ್ಲಿ ಸಮರ್ಥ್ ಗೆಲುವಿನ ನಗು: ಅಲ್ಪಸಂಖ್ಯಾತರ ಮನವೊಲಿಸಿ ದಾವಣಗೆರೆ ಟಿಕೆಟ್ ಗಿಟ್ಟಿಸಿದ ಯುವ ನಾಯಕ
ಬಹು ದಿನಗಳ ತೀವ್ರ ಕುತೂಹಲ ಹಾಗೂ ಒಳಮನೆ ಜಟಾಪಟಿಗೆ ಕೊನೆಗೂ ತೆರೆಬಿದ್ದಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಹಿರಿಯ ನಾಯಕ,...








