ಚಂದ್ರಮುಖಿ 2 ನಲ್ಲಿ ರಜನಿ ಬದಲಿಗೆ ಮತ್ತೊಬ್ಬ ಸ್ಟಾರ್ ನಟ..!
ಆಪ್ತ ಮಿತ್ರ ಆಲ್ ಟೈಮ್ ಫೇವರೇಟ್ ಸಿನಿಮಾ. ಈ ಸಿನಿಮಾ ಕನ್ನಡ ನಂತರ ತಮಿಳು ತೆಲುಗು ಹಿಂದಿ ಎಲ್ಲಾ ಭಾಷೆಗಳಲ್ಲಿಯೂ ಸೂಪರ್ ಹಿಟ್ ಆಗಿತ್ತು. ಬಳಿಕ ಈ ಸಿನಿಮಾದ ಸೀಕ್ಷೆಲ್ ಕನ್ನಡದಲ್ಲಿ ‘ಆಪ್ತರಕ್ಷಕ’, ತೆಲುಗಿನಲ್ಲಿ ‘ನಾಗವಲ್ಲಿ’ ಸೂಪರ್ ಹಿಟ್ ಆಗಿತ್ತು. ಈ ಎರಡು ಚಿತ್ರಗಳನ್ನು ಪಿ ವಾಸು ನಿರ್ದೇಶಿಸಿದ್ದರು.
ಕನ್ನಡದಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್ , ತೆಲುಗಿನಲ್ಲಿ ವೆಂಕಟೇಶ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ತಮಿಳಿನಲ್ಲೂ ಚಂದ್ರಮುಖಿ 2 ತಯಾರಾಗಲಿದೆ. ಆದ್ರೆ ಚಂದ್ರಮುಖಿಯಲ್ಲಿ ರಜನಿ ಆಕ್ಟ್ ಮಾಡಿದ್ದರು. ಇದೀಗ ಅವರ ಬದಲಾಗಿ ಕಾಲಿವುಡ್ ನ ಮತ್ತೊಬ್ಬ ಸ್ಟಾರ್ ನಟ ಅಭಿನಯಿಸಲಿದ್ದಾರೆ ಎನ್ನಲಾಗ್ತಿದೆ.
ಹೌದು ಹಾಗಾದ್ರೆ ಆ ನಟ ಯಾರು..?
ಎಲ್ಲಾ ಅಂದುಕೊಂಡತೆ ಆಗಿದ್ದರೆ ಈ ವೇಳೆಗಾಗ್ಲೇ ಚಂದ್ರಮುಖಿ 2 ಸಹ ರಿಲೀಸ್ ಆಗಬೇಕಾಗಿತ್ತು. ಪಿ ವಾಸು ಈ ಸಿನಿಮಾ ಡೈರೆಕ್ಷನ್ ಮಾಡಲು ಸಹ ಮುಂದಾಗಿದ್ದರು. ಆದ್ರೆ ರಜನಿಕಾಂತ್ ಆಸಕ್ತಿ ತೋರಿರಲಿಲ್ಲ. ಇದೀಗ ಈ ಸಿನಿಮಾವನ್ನ ಮಾಡಲು ಪಿ ವಾಸು ಮನಸ್ಸು ಮಾಡಿದ್ದಾರೆ. ಬರೋಬ್ಬರಿ 15 ವರ್ಷಗಳ ಬಳಿಕ ಚಂದ್ರಮುಖಿಯ ಸೀಕ್ವೆಲ್ ಬರುತ್ತಿದ್ದು, ಸಿನಿಪ್ರೇಕ್ಷಕರು ಕೂಡ ಥ್ರಿಲ್ ಆಗಿದ್ದಾರೆ.
ಅಂದ್ಹಾಗೆ ರಜನಿ ಕಾಂತ್ ಜಾಗಕ್ಕೆ ನಟ, ನಿರ್ದೇಶಕ, ಹಾಗೂ ಡ್ಯಾನ್ಸ್ ಕೊರಿಯೋಗ್ರಾಫರ್ ಕಾಂಚನಾ ಖ್ಯಾತಿಯ ರಾಘವ ಲಾರೆನ್ಸ್ ಎಂಟ್ರಿಯಾಗಿದ್ದಾರೆ. ಅಲ್ಲದೇ ಈಗಾಗಲೇ ಸಿನಿಮಾದ ಪೂರ್ವ ತಯಾರಿ ಸಹ ನಡೆದಿದ್ದು, ಸದ್ಯದಲ್ಲೇ ಶೂಟಿಂಗ್ ಪ್ರಾರಂಭವಾಗುತ್ತೆ.