ಅಹ್ಮದಾಬಾದ್: ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಸಬರಮತಿಗೆ ಬಂದ ಟ್ರಂಪ್ ಗೆ ಖಾದಿ ಅಂಗವಸ್ತ್ರವನ್ನ ಕೊಡುವ ಮೂಲಕ ಮೋದಿ ಅವರು ಸಬರಮತಿಗೆ ಸ್ವಾಗತಿಸಿದರು. ಮೋದಿ ಹಾಗೂ ಟ್ರಂಪ್ ಗಾಂಧೀಜಿ ಭಾವಚಿತ್ರಕ್ಕೆ ಖಾದಿ ನೂಲಿನ ಹಾರ ಹಾಕುವ ಮೂಲಕ ನಮನ ಸಲ್ಲಿಸಿದ್ರು. ಬಳಿಕ ಪ್ರಧಾನಿ ಮೋದಿ ಸಬರಮತಿಯ ಮಹತ್ವವನ್ನ ಟ್ರಂಪ್ ಅವರಿಗೆ ವಿವರಿಸಿದರು. ಅಲ್ಲದೆ ಗಾಂಧಿ ಅವರ ಚರಕದ ಬಳಿ ಟ್ರಂಪ್, ಮೆಲಾನಿಯ ಟ್ರಂಪ್ ಮತ್ತು ನರೇಂದ್ರ ಮೋದಿ ಕಾಲ ಕಳೆದರು. ಈ ವೇಳೆ ಪ್ರಧಾನಿ ಮೋದಿಯೇ ಗೈಡ್ ಆಗಿ ಟ್ರಂಪ್ ಗೆ ಸಬರಮತಿ ಆಶ್ರಮದ ವಿಶೇಷತೆ ಬಗ್ಗೆ ವಿವರಣೆ ನೀಡಿದ್ರು. ಜೊತೆಗೆ ಗಾಂಧೀಜಿ ಚರಕದ ಮುಂದೆ ಕುಳಿತ ಟ್ರಂಪ್, ಚರಕವನ್ನ ತಿರುಗಿಸಿ, ಅದು ಹೇಗೆ ಕಾರ್ಯನಿರ್ವಹಿಸುತ್ತೆ ಎಂದು ವೀಕ್ಷಿಸಿದ್ರು. ಬಳಿಕ ಆಶ್ರಮದ ಸಿಬ್ಬಂದಿ ಬಂದು ಚರಕದಲ್ಲಿ ನೇಯ್ಗೆ ಮಾಡುವುದನ್ನ ತೋರಿಸಿದ್ರು.
film- ‘ನ್ಯಾಚುರಲ್ ಸ್ಟಾರ್’ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸ್ಫೋಟಕ ಟೀಸರ್ ರಿಲೀಸ್: ಸೆಪ್ಟೆಂಬರ್ 24ಕ್ಕೆ ವಿಶ್ವಾದ್ಯಂತ ಬಿಡುಗಡೆ!
'ನ್ಯಾಚುರಲ್ ಸ್ಟಾರ್' ನಾನಿ ಅಭಿನಯದ 'ದಿ ಪ್ಯಾರಡೈಸ್' ಸ್ಫೋಟಕ ಟೀಸರ್ ರಿಲೀಸ್: ಸೆಪ್ಟೆಂಬರ್ 24ಕ್ಕೆ ವಿಶ್ವಾದ್ಯಂತ ಬಿಡುಗಡೆ! ಹೈದರಾಬಾದ್: 'ನ್ಯಾಚುರಲ್ ಸ್ಟಾರ್' ನಾನಿ ಅಭಿನಯದ ಬಹುನಿರೀಕ್ಷಿತ ಪ್ಯಾನ್-ವರ್ಲ್ಡ್...








