ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಶಿಫ್ಟ್ ಕಾರು ಪಲ್ಟಿಯಾಗಿದ್ದು, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ದಾವಣಗೆರೆ ಮೂಲದ ಶಿಫ್ಟ್ ಕಾರಿನಲ್ಲಿ ಐವರು ಚಾರ್ಮಾಡಿ ಘಾಟ್ ಮುಖಾಂತರ ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಚಾರ್ಮಾಡಿ ಘಾಟಿಯ ರಸ್ತೆಯಲ್ಲಿ ಭಾರೀ ಪ್ರಮಾಣದ ಮಂಜು ಕವಿದಿದ್ದ ಕಾರಣ ಸೋಮನಕಾಡು ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಐವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ. ಜಲಪಾತದ ಬಳಿ ಮಗುಚಿ ಬಿದ್ದ ಕಾರನ್ನ ಸ್ಥಳಿಯರು ಹಾಗೂ ಬಣಕಲ್ ಪೊಲೀಸರು ಸಹಕಾರದೊಂದಿಗೆ ಹಿಟಾಚಿ ಮೂಲಕ ಮೇಲೆತ್ತಿದ್ದಾರೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
https://youtu.be/aqzcsTp3v5I