ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದ ಹೊಸ ನಿಯಮಗಳು ..!
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯಕ್ಕೆ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸನ್ನದ್ಧಗೊಳ್ಳುತ್ತಿವೆ.
ಈಗಾಗಲೇ ಉಭಯ ತಂಡಗಳು ಕ್ವಾರಂಟೈನ್ ನಲ್ಲಿದ್ದುಕೊಂಡು ಜಿಮ್ ನಲ್ಲಿ ಕಸರತ್ತು ನಡೆಸುತ್ತಿವೆ. ಪ್ರತಿಷ್ಠಿತ ಫೈನಲ್ ಪಂದ್ಯಕ್ಕೆ ಉಭಯ ತಂಡಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧಗೊಳ್ಳುತ್ತಿವೆ.
ಇನ್ನು ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯಕ್ಕೆ ಐಸಿಸಿ ಕೆಲವೊಂದು ನಿಯಮಗಳನ್ನು ತರಲಾಗಿದೆ.
ನಿಯಮ 1- ಒಂದು ವೇಳೆ ಫೈನಲ್ ಪಂದ್ಯ ಡ್ರಾ ಅಥವಾ ಟೈಗೊಂಡ್ರೆ ಉಭಯ ತಂಡಗಳನ್ನು ಜಂಟಿ ವಿಜೇತರನ್ನಾಗಿ ಘೋಷಣೆ ಮಾಡಲಾಗುವುದು.
ನಿಯಮ 2- ಐಸಿಸಿ ನಿಯಮದ ಪ್ರಕಾರ ಫೈನಲ್ ಟೆಸ್ಟ್ ಪಂದ್ಯಕ್ಕೆ ಹೆಚ್ಚುವರಿ ಒಂದು ದಿನವನ್ನು ಮೀಸಲಿಡಲಾಗಿದೆ. ಐದು ದಿನಗಳ ಪಂದ್ಯಕ್ಕೆ ಅಡಚಣೆಯಾದ್ರೆ ಹೆಚ್ಚುವರಿ ಮೀಸಲು ದಿನದಂದು ಪಂಂದ್ಯವನ್ನು ನಡೆಸಲಾಗುವುದು. ಐಸಿಸಿ ಮ್ಯಾಚ್ ರೆಫ್ರಿ ಅಂತಿಮ ದಿನದ ಒಂದು ಗಂಟೆ ಮುಂಚಿತವಾಗಿ ಹೆಚ್ಚುವರಿ ದಿನ ಆಡಿಸಬೇಕೋ ಬೇಡವೋ ಎಂಬುದನ್ನು ತಿಳಿಸಲಿದ್ದಾರೆ.
ನಿಯಮ -3 – ಸಾಮಾನ್ಯವಾಗಿ ಟೀಮ್ ಇಂಡಿಯಾ ತವರಿನಲ್ಲಿ ಎಸ್ ಜಿ ಚೆಂಡಿನಲ್ಲಿ ಆಡಿದ್ರೆ, ನ್ಯೂಜಿಲೆಂಡ್ ತವರಿನಲ್ಲಿ ಕುಕಾಬುರಾ ಚೆಂಡಿನಲ್ಲಿ ಆಡುತ್ತದೆ. ಆದ್ರೆ ಫೈನಲ್ ಪಂದ್ಯಕ್ಕೆ ಈ ಬಾರಿ ಡ್ಯೂಕ್ ಗ್ರೇಡ್ -1 ಚೆಂಡಿನಲ್ಲಿ ಆಡಲಿದೆ.
ನಿಯಮ -4- ಶಾರ್ಟ್ ರನ್ ಬಗ್ಗೆ ಮೂರನೇ ಅಂಪೈರ್ ನಿರ್ಧಾರ ತಗೆದುಕೊಳ್ಳಲಿದ್ದಾರೆ. ಬ್ಯಾಟ್ಸ್ ಮೆನ್ ಓಡುವಾಗ ಕ್ರೀಸ್ಗೆ ಸರಿಯಾಗಿ ತಲುಪಿದ್ದಾರೋ ಇಲ್ಲವೋ ಎಂಬುದನ್ನು ತಿಳಿದುಕೊಂಡು ಫೀಲ್ಡ್ ಅಂಪೈರ್ ಜೊತೆ ಸಂವಹನವನ್ನು ಮಾಡಲಿದ್ದಾರೆ.
ನಿಯಮ =5- ಫ್ಲೇಯರ್ಸ್ ರಿವ್ಯೂ ಮತ್ತು ಡಿಆರ್ ಎಸ್ ರಿವ್ಯೂ ಬಗ್ಗೆಯೂ ಅಂಪೈರ್ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ.