ADVERTISEMENT
Monday, November 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಆರ್ಯನ್ ಸಂತೋಷ್ ನಿರ್ದೇಶನದ ‘ಚೆಂಕೋಲ್: ದಿ ಲಾಸ್ಟ್ ಕಿಂಗ್‌ಡಮ್’ ಸಿನಿಮಾದಿಂದ ಮಾಸ್ ಸಾಂಗ್ ರಿಲೀಸ್: ಕುತೂಹಲ ಮೂಡಿಸಿದ ಫ್ಯಾಂಟಸಿ ಡ್ರಾಮಾ

admin by admin
November 2, 2026
in Cinema, Newsbeat, ಮನರಂಜನೆ
chenkol-the-last-kingdom-aryan-santhosh-mass-song-fantasy-drama

chenkol-the-last-kingdom-aryan-santhosh-mass-song-fantasy-drama

Share on FacebookShare on TwitterShare on WhatsappShare on Telegram

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಆರ್ಯನ್ ಸಂತೋಷ್ ಈಗ ನಿರ್ದೇಶಕರಾಗಿ ಹೊಸ ಹೆಜ್ಜೆ ಇಡುತ್ತಿದ್ದಾರೆ. ಅವರು ನಟಿಸಿ, ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಮಹತ್ವಾಕಾಂಕ್ಷೆಯ ಸಿನಿಮಾ ‘ಚೆಂಕೋಲ್: ದಿ ಲಾಸ್ಟ್ ಕಿಂಗ್‌ಡಮ್’. ಬೃಹತ್ ಕ್ಯಾನ್ವಾಸ್, ನಿಗೂಢತೆ ಹಾಗೂ ವಿಭಿನ್ನ ಕಾಲಘಟ್ಟಗಳ ಕಥಾಹಂದರ ಹೊಂದಿರುವ ಈ ಫ್ಯಾಂಟಸಿ ಡ್ರಾಮಾದಿಂದ ಇದೀಗ ಮಾಸ್ ಸಾಂಗ್ ಒಂದು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. “ಅತಿಶಯ ಪುಲಿ ಕಲಾ ನೋಡಿದ್ಯಾ ಇವ್ನಾ.. ಕ್ಲೀನ್ ಶೇವ್ ತಿಳಿ ಮೈಕಟ್ ಫೇರ್ ಆದ ಬಣ್ಣ..” ಎಂಬ ಸಾಹಿತ್ಯವಿರುವ ಈ ಗೀತೆ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದು, ಚಿತ್ರದಲ್ಲಿ ಆರ್ಯನ್ ನಿರ್ವಹಿಸಿರುವ ‘ಡಿಜೆ ಸಂತು’ ಪಾತ್ರದ ಖದರ್ ಅನ್ನು ಪರಿಚಯಿಸಿದೆ.

ಚಿತ್ರದ ಶೀರ್ಷಿಕೆಯಾಗಿರುವ ‘ಚೆಂಕೋಲ್’ ನ್ಯಾಯಯುತ ಅಧಿಕಾರ ಮತ್ತು ಆಳ್ವಿಕೆಯ ಸಂಕೇತವಾಗಿದೆ. ಈ ಕಥೆಯು ಪ್ರಮುಖವಾಗಿ ಎರಡು ಕಾಲಘಟ್ಟಗಳಲ್ಲಿ ಸಾಗಲಿದೆ. ಬೆಂಗಳೂರಿನಿಂದ ಕೇರಳದವರೆಗೆ ಸಾಗುವ ಕಥೆಯಲ್ಲಿ ಮೊದಲಾರ್ಧದಲ್ಲಿ ಇಂದಿನ ಕಾಲಘಟ್ಟದ ‘ಡಿಜೆ ಸಂತು’ ಪಾತ್ರವನ್ನು ತೋರಿಸಲಾಗುತ್ತದೆ. ಇನ್ನೂ ಈಗ ರಿಲೀಸ್ ಆಗಿರುವ ಹಾಡನ್ನು ಬರೆದು ಸಂಯೋಜಿಸಿ ಹಾಡಿರುವುದು ಆಲ್ ಓಕೆ ಅಲೋಕ್ ಅವರು. ಈ ಹಾಡಿನಲ್ಲಿ ತಮಿಳಿನ ಖ್ಯಾತ ನಟಿ ದಿಯಾ ಶಾರದಾ ಕಾಣಿಸಿಕೊಂಡಿರೋದು ವಿಶೇಷ.

Related posts

ram-charan-sukumar-rc17-movie-grand-launch-muhurtham-hyderabad-mytri-movie-makers

ರಾಮ್ ಚರಣ್ – ಸುಕುಮಾರ್ ಕಾಂಬಿನೇಷನ್‌ನ ಬಹುನಿರೀಕ್ಷಿತ ‘#RC17’ ಚಿತ್ರಕ್ಕೆ ಅದ್ಧೂರಿ ಮುಹೂರ್ತ

November 2, 2026
lambodara-2-0-trailer-simple-suni-humanoid-robot-zia-november-13

ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಟ್ರೇಲರ್ ಔಟ್; ನೈಜ ಹ್ಯೂಮನಾಯ್ಡ್ ರೋಬೋಟ್‌ ನಟನೆ, ಭಾರತೀಯ ಚಿತ್ರರಂಗದಲ್ಲೇ ಮೊದಲು!

November 2, 2026

ಈ ಚಿತ್ರದಲ್ಲಿ ಮಹಿಳಾ ಪಾತ್ರವರ್ಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ನಾಲ್ವರು ಪ್ರತಿಭಾವಂತ ನಟಿಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಖ್ಯಾತಿಯ ಮಾನಸ್ವಿ ಮನು ಕಥೆಯ ಕೇಂದ್ರ ಬಿಂದುವಾದ ‘ಮಹಿಮಾ’ ಪಾತ್ರದಲ್ಲಿ ನಟಿಸಿದ್ದು, ಸಮಕಾಲೀನ ಸನ್ನಿವೇಶವನ್ನು ಐತಿಹಾಸಿಕ ಹಿನ್ನೆಲೆಯೊಂದಿಗೆ ಬೆಸೆಯುವ ಜವಾಬ್ದಾರಿ ಇವರ ಮೇಲಿದೆ. ಇವರೊಂದಿಗೆ ಮಲಯಾಳಂನಿಂದ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿರುವ ಶರಣ್ಯ ‘ಪಾರ್ವತಿ’ ಪಾತ್ರದಲ್ಲೂ, ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡಿರುವ ಅಕ್ಷಿತಾ ಬೋಪಯ್ಯ ‘ಚಿರಕ್ಕಲ್ ದೇವಿ’ ಪಾತ್ರದಲ್ಲೂ ಮತ್ತು ಪೂಜಾ ಶೆಟ್ಟಿ ಚಿರಕ್ಕಲ್ ಸಾಮ್ರಾಜ್ಯದ ರಾಜಕುಮಾರಿಯ ಪಾತ್ರದಲ್ಲೂ ಅಭಿನಯಿಸಿದ್ದಾರೆ.

ತಾರಾಗಣದಲ್ಲಿ ಆರ್ಯನ್ ಸಂತೋಷ್, ಮಾನಸವಿ, ಶರಣ್ಯ, ಅಕ್ಷಿತಾ ಬೋಪಯ್ಯ, ಪೂಜಾ ಶೆಟ್ಟಿ ಅವರೊಂದಿಗೆ ಮಹಾಂತೇಶ್, ಅರವಿಂದ್ ರಾವ್, ಅರುಣಾ ಬಾಲರಾಜ್, ಸುಂದರ್ ವೀಣಾ, ನಂದ ಕಿಶೋರ್, ವಂಶಿ ಉದಯ್, ವಿಜಯ್ ರಾಜ್, ಸಚಿನ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

‘ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್’ ಮತ್ತು ‘ಪಿಕ್ಸಿ ಒರಿಜಿನಲ್ಸ್’ ಜಂಟಿಯಾಗಿ ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿವೆ. ಆರ್ಯನ್ ಸಂತೋಷ್ ಅವರೇ ಕಥೆ ಬರೆದಿದ್ದು, ಎಲ್.ಆರ್.ಜೀವನ್, ಎಸ್.ಕೆ.ಸಂತೋಷ್ ಹಾಗೂ ಮಿಧುನ್ ಸಂಭಾಷಣೆ ರಚಿಸಿದ್ದಾರೆ. ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತ ಹಾಗೂ ಜೋ ಕೋಸ್ಟಾ – ಗೌತಮ್ ದಾಸ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ವಿಪಿಂದ್ ವಿ ರಾಜ್ ಛಾಯಾಗ್ರಹಣ ಹಾಗೂ ಉಮೇಶ್ ಆರ್.ಬಿ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಹಾಡು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ

ShareTweetSendShare
Join us on:

Related Posts

ram-charan-sukumar-rc17-movie-grand-launch-muhurtham-hyderabad-mytri-movie-makers

ರಾಮ್ ಚರಣ್ – ಸುಕುಮಾರ್ ಕಾಂಬಿನೇಷನ್‌ನ ಬಹುನಿರೀಕ್ಷಿತ ‘#RC17’ ಚಿತ್ರಕ್ಕೆ ಅದ್ಧೂರಿ ಮುಹೂರ್ತ

by admin
November 2, 2026
0

ಹೈದರಾಬಾದ್: ಭಾರತೀಯ ಚಿತ್ರರಂಗದ ಮೋಸ್ಟ್ ಸಕ್ಸಸ್‌ಫುಲ್ ಜೋಡಿಗಳಲ್ಲಿ ಒಂದಾದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಕ್ರಿಯೇಟಿವ್ ನಿರ್ದೇಶಕ ಸುಕುಮಾರ್ ಅವರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರಕ್ಕೆ...

lambodara-2-0-trailer-simple-suni-humanoid-robot-zia-november-13

ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಟ್ರೇಲರ್ ಔಟ್; ನೈಜ ಹ್ಯೂಮನಾಯ್ಡ್ ರೋಬೋಟ್‌ ನಟನೆ, ಭಾರತೀಯ ಚಿತ್ರರಂಗದಲ್ಲೇ ಮೊದಲು!

by admin
November 2, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕ ಸಿಂಪಲ್ ಸುನಿ ಇದೀಗ ಸೈನ್ಸ್ ಫಿಕ್ಷನ್ ಜಗತ್ತಿಗೆ ಅಡಿಯಿಟ್ಟಿದ್ದು, ಅವರ ನಿರ್ದೇಶನದ ಬಹುನಿರೀಕ್ಷಿತ 'ಲಂಬೋದರ 2.0' ಸಿನಿಮಾದ ಟ್ರೇಲರ್ ಕನ್ನಡ ಹಾಗೂ...

anna-from-mexico-dolly-dhananjay-mass-song-release-vasuki-vaibhav-december-24

ಡಾಲಿʼ ಧನಂಜಯ್ ನಟನೆಯ ‘ಅಣ್ಣ ಫ್ರಂ ಮೆಕ್ಸಿಕೋ’ ಚಿತ್ರದ ಪವರ್‌ಫುಲ್ ಮಾಸ್ ಸಾಂಗ್ ರಿಲೀಸ್

by admin
November 2, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ, ‘ನಟರಾಕ್ಷಸ’ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಈಗಾಗಲೇ ಬಿಡುಗಡೆಯಾಗಿ ಅಪಾರ...

charchge-barada-bjp-eega-padayatre-priyank-kharge

ಸ್ಟಿಂಗ್ ಪ್ರಕರಣದಲ್ಲಿ ಬಯಲಾಯಿತು ದೆಹಲಿ ನಂಟು: ಇದು ಬರೀ ಟ್ರೇಲರ್, ಪಿಕ್ಚರ್ ಅಭಿ ಬಾಕಿ ಹೈ ಎಂದು ಗುಡುಗಿದ ಪ್ರಿಯಾಂಕ್ ಖರ್ಗೆ

by Shwetha
November 2, 2026
0

ಕಲಬುರಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಚರ್ಚಾಸ್ಪದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದ ನಂಟು ಬಯಲಾಗುತ್ತಿದ್ದಂತೆಯೇ...

ರಾಜಕೀಯದಲ್ಲಿ ಮಹಿಳೆಯರು ಕೇವಲ ಕರಿಬೇವಿನ ಸೊಪ್ಪಿನಂತಾಗಿದ್ದಾರೆ: ಸಂಸತ್ತಿನಲ್ಲಿ ಮೀಸಲಾತಿ ಚರ್ಚೆ, ಸಂಪುಟದಲ್ಲಿ ಮಾತ್ರ ಮಹಿಳೆಯರಿಗಿಲ್ಲ ಸ್ಥಾನ- ಎಲ್ಲಾ ಪಕ್ಷಗಳ ಮನಸ್ಥಿತಿ ಒಂದೇ ಎಂದ ಕೈ ಹಿರಿಯ ನಾಯಕಿ

ರಾಜಕೀಯದಲ್ಲಿ ಮಹಿಳೆಯರು ಕೇವಲ ಕರಿಬೇವಿನ ಸೊಪ್ಪಿನಂತಾಗಿದ್ದಾರೆ: ಸಂಸತ್ತಿನಲ್ಲಿ ಮೀಸಲಾತಿ ಚರ್ಚೆ, ಸಂಪುಟದಲ್ಲಿ ಮಾತ್ರ ಮಹಿಳೆಯರಿಗಿಲ್ಲ ಸ್ಥಾನ- ಎಲ್ಲಾ ಪಕ್ಷಗಳ ಮನಸ್ಥಿತಿ ಒಂದೇ ಎಂದ ಕೈ ಹಿರಿಯ ನಾಯಕಿ

by Shwetha
November 2, 2026
0

ಹಾಸನ: ಅಡುಗೆಯ ರುಚಿ ಮತ್ತು ಘಮ ಹೆಚ್ಚಿಸಲು ಒಗ್ಗರಣೆಗೆ ಬಳಸಿ, ಊಟ ಮಾಡುವಾಗ ಎತ್ತಿ ಆಚೆ ಬಿಸಾಡುವ ಕರಿಬೇವಿನ ಸೊಪ್ಪಿನಂತೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರನ್ನು ನಡೆಸಿಕೊಳ್ಳಲಾಗುತ್ತಿದೆ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram