ADVERTISEMENT
Monday, November 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಟ್ರೇಲರ್ ಔಟ್; ನೈಜ ಹ್ಯೂಮನಾಯ್ಡ್ ರೋಬೋಟ್‌ ನಟನೆ, ಭಾರತೀಯ ಚಿತ್ರರಂಗದಲ್ಲೇ ಮೊದಲು!

admin by admin
November 2, 2026
in Cinema, Newsbeat, ಮನರಂಜನೆ
lambodara-2-0-trailer-simple-suni-humanoid-robot-zia-november-13

lambodara-2-0-trailer-simple-suni-humanoid-robot-zia-november-13

Share on FacebookShare on TwitterShare on WhatsappShare on Telegram

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕ ಸಿಂಪಲ್ ಸುನಿ ಇದೀಗ ಸೈನ್ಸ್ ಫಿಕ್ಷನ್ ಜಗತ್ತಿಗೆ ಅಡಿಯಿಟ್ಟಿದ್ದು, ಅವರ ನಿರ್ದೇಶನದ ಬಹುನಿರೀಕ್ಷಿತ ‘ಲಂಬೋದರ 2.0’ ಸಿನಿಮಾದ ಟ್ರೇಲರ್ ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ರೆಗ್ಯುಲರ್‌ ಸಿಜಿ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬದಿಗೊತ್ತಿ, ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ನೈಜ ಭೌತಿಕ ಹ್ಯೂಮನಾಯ್ಡ್ ರೋಬೋಟ್‌ಗೆ ಪ್ರಮುಖ ಪಾತ್ರ ನೀಡಿ ಚಿತ್ರೀಕರಿಸಿರುವುದು ಈ ಸಿನಿಮಾದ ಹೆಗ್ಗಳಿಕೆಯಾಗಿದೆ. ಸಿನಿಮಾ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿರುವ ಟ್ರೇಲರ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಚಿತ್ರವು ಇದೇ ನವೆಂಬರ್ 13ರಂದು ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ.

ಈ ವೈಜ್ಞಾನಿಕ ಕಥೆಗೆ ಜೀವ ತುಂಬಲು ಬೆಂಗಳೂರು ಮೂಲದ ತಂತ್ರಜ್ಞಾನ ಸಂಸ್ಥೆ ‘ಮಚಾನಿ ರೋಬೋಟಿಕ್ಸ್’ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಹ್ಯೂಮನಾಯ್ಡ್ ರೋಬೋಟ್ ‘ಜಿಯಾ’ಳನ್ನು ಬಳಸಿಕೊಳ್ಳಲಾಗಿದೆ. ಯಾವುದೇ ಡಿಜಿಟಲ್ ಎಫೆಕ್ಟ್ಸ್ ಅಥವಾ ಪ್ರಾಸ್ಥೆಟಿಕ್ಸ್ ಮೇಕಪ್‌ನ ಹಂಗಿಲ್ಲದೆ, ಜಿಯಾ ನೇರವಾಗಿ ಚಿತ್ರೀಕರಣದ ಸೆಟ್‌ನಲ್ಲೇ ರಿಯಲ್‌ ಟೈಮ್‌ನಲ್ಲೇ ಪಾತ್ರ ನಿರ್ವಹಿಸಿರುವುದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ಸ್ ತಂತ್ರಜ್ಞಾನವು ನಟನಾ ಕ್ಷೇತ್ರವನ್ನು ಹೇಗೆ ಬದಲಾಯಿಸಬಲ್ಲದು ಎಂಬುದಕ್ಕೆ ಈ ಪ್ರಯೋಗ ಸಾಕ್ಷಿಯಾಗಿದೆ.

Related posts

ram-charan-sukumar-rc17-movie-grand-launch-muhurtham-hyderabad-mytri-movie-makers

ರಾಮ್ ಚರಣ್ – ಸುಕುಮಾರ್ ಕಾಂಬಿನೇಷನ್‌ನ ಬಹುನಿರೀಕ್ಷಿತ ‘#RC17’ ಚಿತ್ರಕ್ಕೆ ಅದ್ಧೂರಿ ಮುಹೂರ್ತ

November 2, 2026
chenkol-the-last-kingdom-aryan-santhosh-mass-song-fantasy-drama

ಆರ್ಯನ್ ಸಂತೋಷ್ ನಿರ್ದೇಶನದ ‘ಚೆಂಕೋಲ್: ದಿ ಲಾಸ್ಟ್ ಕಿಂಗ್‌ಡಮ್’ ಸಿನಿಮಾದಿಂದ ಮಾಸ್ ಸಾಂಗ್ ರಿಲೀಸ್: ಕುತೂಹಲ ಮೂಡಿಸಿದ ಫ್ಯಾಂಟಸಿ ಡ್ರಾಮಾ

November 2, 2026

ಬೆಂಗಳೂರಿನ ಹಿನ್ನೆಲೆಯಲ್ಲೇ ಸಾಗುವ ‘ಲಂಬೋದರ 2.0’ ಇಂದಿನ ಆನ್‌ಲೈನ್ ಬದುಕಿನ ಸಂಕೀರ್ಣ ಮುಖಗಳನ್ನು ಅನಾವರಣಗೊಳಿಸುವ ಹೈ-ಕಾನ್ಸೆಪ್ಟ್ ಸೈಂಟಿಫಿಕ್ ಸೋಶಿಯಲ್ ಥ್ರಿಲ್ಲರ್ ಆಗಿದೆ. ಸದಾ ಸ್ಕ್ರೀನ್ ಟೈಮ್‌ನಲ್ಲಿ ಮುಳುಗಿರುವ, ಎಲ್ಲರೊಂದಿಗೆ ಸಂಪರ್ಕದಲ್ಲಿದ್ದರೂ ಒಂಟಿತನ ಅನುಭವಿಸುವ ಹಾಗೂ ಅದೃಶ್ಯ ಡಿಜಿಟಲ್ ಕಣ್ಗಾವಲಿನಲ್ಲಿ ಸಿಲುಕಿರುವ ಇಂದಿನ ಡಿಜಿಟಲ್ ಜಗತ್ತಿನ ಹಾಗೂಜೀವನದಲ್ಲಿನ ಸಂತೋಷದ ಮಹತ್ವ ಎದುರಿಸುವ ಮಾನಸಿಕ ತುಮುಲಗಳ ಸುತ್ತ ಕಥೆ ಹೆಣೆಯಲಾಗಿದೆ.

ಈ ಚಿತ್ರದ ಮೂಲಕ ಅನಿಲ್ ಶೆಟ್ಟಿ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ಸ್ವತಃ ಅವರೇ ಸ್ಕ್ರಿಪ್ಟ್‌ ಬರೆದಿದ್ದಾರೆ. ಈವರೆಗೆ ತಮ್ಮದೇ ಕಥೆಗಳಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದ ನಿರ್ದೇಶಕ ಸುನಿ, ಇದೇ ಮೊದಲ ಬಾರಿಗೆ ಬೇರೆಯವರ ಸ್ಕ್ರಿಪ್ಟ್‌ಗೆ ನಿರ್ದೇಶನ ಮಾಡಿರುವುದು ವಿಶೇಷ. ಅನಿಲ್ ಶೆಟ್ಟಿಗೆ ನಾಯಕಿಯಾಗಿ ಸಾಚಿ ಬಿಂದ್ರಾ ಸಾಥ್ ನೀಡಿದ್ದಾರೆ.

ಜೊತೆಗೆ ‘ರಂಗ್ ದೇ ಬಸಂತಿ’, ‘ಡಾನ್ 2’ ಖ್ಯಾತಿಯ ಬಾಲಿವುಡ್ ನಟ ಕುನಾಲ್ ಕಪೂರ್ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಅವರ ಪಾತ್ರವೇ ಕಥೆಗೆ ದೊಡ್ಡ ತಿರುವು ನೀಡಲಿದೆ. ಮೇಘನಾ ಗಾವಂಕರ್ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ರಹಸ್ಯವಾಗಿರುವ ಕೃಷ್ಣನ ಪಾತ್ರವೊಂದಿದ್ದು, ಅದರ ಸುತ್ತ ಸಸ್ಪೆನ್ಸ್ ಕಾಯ್ದುಕೊಳ್ಳಲಾಗಿದೆ. ಬಾಲಿವುಡ್‌ನ ಖ್ಯಾತ ಮಹಾವೀರ್ ಜೈನ್ ಫಿಲಮ್ಸ್ ಈ ಸಿನಿಮಾಗೆ ಸಾಥ್ ನೀಡಿದ್ದು, ಕುತೂಹಲ ಕೆರಳಿಸಿರುವ ಟ್ರೇಲರ್ ಸಿನಿಪ್ರಿಯರ ಮೆಚ್ಚುಗೆ ಗಳಿಸುತ್ತಿದೆ.

ShareTweetSendShare
Join us on:

Related Posts

ram-charan-sukumar-rc17-movie-grand-launch-muhurtham-hyderabad-mytri-movie-makers

ರಾಮ್ ಚರಣ್ – ಸುಕುಮಾರ್ ಕಾಂಬಿನೇಷನ್‌ನ ಬಹುನಿರೀಕ್ಷಿತ ‘#RC17’ ಚಿತ್ರಕ್ಕೆ ಅದ್ಧೂರಿ ಮುಹೂರ್ತ

by admin
November 2, 2026
0

ಹೈದರಾಬಾದ್: ಭಾರತೀಯ ಚಿತ್ರರಂಗದ ಮೋಸ್ಟ್ ಸಕ್ಸಸ್‌ಫುಲ್ ಜೋಡಿಗಳಲ್ಲಿ ಒಂದಾದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಕ್ರಿಯೇಟಿವ್ ನಿರ್ದೇಶಕ ಸುಕುಮಾರ್ ಅವರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರಕ್ಕೆ...

chenkol-the-last-kingdom-aryan-santhosh-mass-song-fantasy-drama

ಆರ್ಯನ್ ಸಂತೋಷ್ ನಿರ್ದೇಶನದ ‘ಚೆಂಕೋಲ್: ದಿ ಲಾಸ್ಟ್ ಕಿಂಗ್‌ಡಮ್’ ಸಿನಿಮಾದಿಂದ ಮಾಸ್ ಸಾಂಗ್ ರಿಲೀಸ್: ಕುತೂಹಲ ಮೂಡಿಸಿದ ಫ್ಯಾಂಟಸಿ ಡ್ರಾಮಾ

by admin
November 2, 2026
0

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಆರ್ಯನ್ ಸಂತೋಷ್ ಈಗ ನಿರ್ದೇಶಕರಾಗಿ ಹೊಸ ಹೆಜ್ಜೆ ಇಡುತ್ತಿದ್ದಾರೆ. ಅವರು ನಟಿಸಿ, ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಮಹತ್ವಾಕಾಂಕ್ಷೆಯ...

anna-from-mexico-dolly-dhananjay-mass-song-release-vasuki-vaibhav-december-24

ಡಾಲಿʼ ಧನಂಜಯ್ ನಟನೆಯ ‘ಅಣ್ಣ ಫ್ರಂ ಮೆಕ್ಸಿಕೋ’ ಚಿತ್ರದ ಪವರ್‌ಫುಲ್ ಮಾಸ್ ಸಾಂಗ್ ರಿಲೀಸ್

by admin
November 2, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ, ‘ನಟರಾಕ್ಷಸ’ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಈಗಾಗಲೇ ಬಿಡುಗಡೆಯಾಗಿ ಅಪಾರ...

charchge-barada-bjp-eega-padayatre-priyank-kharge

ಸ್ಟಿಂಗ್ ಪ್ರಕರಣದಲ್ಲಿ ಬಯಲಾಯಿತು ದೆಹಲಿ ನಂಟು: ಇದು ಬರೀ ಟ್ರೇಲರ್, ಪಿಕ್ಚರ್ ಅಭಿ ಬಾಕಿ ಹೈ ಎಂದು ಗುಡುಗಿದ ಪ್ರಿಯಾಂಕ್ ಖರ್ಗೆ

by Shwetha
November 2, 2026
0

ಕಲಬುರಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಚರ್ಚಾಸ್ಪದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದ ನಂಟು ಬಯಲಾಗುತ್ತಿದ್ದಂತೆಯೇ...

ರಾಜಕೀಯದಲ್ಲಿ ಮಹಿಳೆಯರು ಕೇವಲ ಕರಿಬೇವಿನ ಸೊಪ್ಪಿನಂತಾಗಿದ್ದಾರೆ: ಸಂಸತ್ತಿನಲ್ಲಿ ಮೀಸಲಾತಿ ಚರ್ಚೆ, ಸಂಪುಟದಲ್ಲಿ ಮಾತ್ರ ಮಹಿಳೆಯರಿಗಿಲ್ಲ ಸ್ಥಾನ- ಎಲ್ಲಾ ಪಕ್ಷಗಳ ಮನಸ್ಥಿತಿ ಒಂದೇ ಎಂದ ಕೈ ಹಿರಿಯ ನಾಯಕಿ

ರಾಜಕೀಯದಲ್ಲಿ ಮಹಿಳೆಯರು ಕೇವಲ ಕರಿಬೇವಿನ ಸೊಪ್ಪಿನಂತಾಗಿದ್ದಾರೆ: ಸಂಸತ್ತಿನಲ್ಲಿ ಮೀಸಲಾತಿ ಚರ್ಚೆ, ಸಂಪುಟದಲ್ಲಿ ಮಾತ್ರ ಮಹಿಳೆಯರಿಗಿಲ್ಲ ಸ್ಥಾನ- ಎಲ್ಲಾ ಪಕ್ಷಗಳ ಮನಸ್ಥಿತಿ ಒಂದೇ ಎಂದ ಕೈ ಹಿರಿಯ ನಾಯಕಿ

by Shwetha
November 2, 2026
0

ಹಾಸನ: ಅಡುಗೆಯ ರುಚಿ ಮತ್ತು ಘಮ ಹೆಚ್ಚಿಸಲು ಒಗ್ಗರಣೆಗೆ ಬಳಸಿ, ಊಟ ಮಾಡುವಾಗ ಎತ್ತಿ ಆಚೆ ಬಿಸಾಡುವ ಕರಿಬೇವಿನ ಸೊಪ್ಪಿನಂತೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರನ್ನು ನಡೆಸಿಕೊಳ್ಳಲಾಗುತ್ತಿದೆ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram