ಚೆನ್ನೈ: ಕೆಕೆಆರ್ ಗೆಲುವಿನ ಓಟಕ್ಕೆ ಚೆನ್ನೈ ಸೂಪರ್ ಆಗಿ ಬ್ರೇಕ್ ಹಾಕಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನೆಡದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ವಿಕೆಟ್‌ಗಳ ಭರ್ಜರಿ ಸಾಧಿಸಿತು. ಈ ಮೂಲಕ ಸತತ ಎರಡು ಬಾರಿ ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈಗೆ ಗೆಲುವಿನ ನಗೆ ಸಿಕ್ಕಿದೆ. ಅಲ್ಲದೇ, ಸತತವಾಗಿ ಮೂರು ಪಂದ್ಯದಲ್ಲಿ ಗೆಲ್ಲುವು ಮೂಲಕ ಅಭಿಯಾನ ಮುಂದುವರೆಸಿದ್ದ ಕೆಕೆಆರ್ ಗೆ ಇದು ಮೊದಲ ಸೋಲಾಗಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಚೆನ್ನೈ ತಂಡ ಬೌಲಿಂಗ್ ಆಯ್ದುಕೊಂಡಿತು. ಜಡೇಜಾ ಹಾಗೂ ತುಷಾರ್ ದಾಳಿಗೆ ಕೆಕೆಆರ್ ತತ್ತರಿಸಿ ಹೋಯಿತು. ಪರಿಣಾಮವಾಗಿ ಕೆಕೆಆರ್ 137 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಮುಗಿಸಿತು. 138 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಚೆನ್ನೈ 17.4 ಓವರ್‌ಗೆ 3 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿ ಸುಲಭವಾಗಿ ಗೆದ್ದು ಬೀಗಿತು.
ಆರಂಭದಿಂದಲೂ ಕೆಕೆಆರ್ ಪರ ಯಾರೂ ಮಿಂಚಲಿಲ್ಲ. ಪ್ರಮುಖ ಆಟಗಾರರು ಫೆವಲಿಯನ್ ಪರೇಡ್ ನಡೆಸಿದ್ದರಿಂದಾಗಿ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲು ತಿಣುಕಾಡಿತು. ಜಡೇಜಾ, ತುಷಾರ್ ದೇಶಪಾಂಡೆ ಮಾರಕ ಬೌಲಿಂಗ್ ದಾಳಿಗೆ ಕೆಕೆಆರ್ ಬ್ಯಾಟರ್‌ಗಳು ಸುಸ್ತಾಗಿ ಹೋದರು. ಕೋಲ್ಕತ್ತಾ ತಂಡದ ಸುನೀಲ್ ನರೈನ್ 27, ರಘುವಂಶಿ 24, ನಾಯಕ ಶ್ರೇಯಸ್ ಅಯ್ಯರ್ 34 ರನ್ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟರ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇನ್ನೂ ಸಿಎಸ್ ಕೆ ಪರ ನಾಯಕ ರುತುರಾಜ್ ಗಾಯಕ್ವಾಡ್ ಅರ್ಧ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.