Chennai: ಮಳೆ ಕಡಿಮೆಯಾದರೂ ತಪ್ಪುತ್ತಿಲ್ಲ ಸಂಕಷ್ಟ – ಧರೆಗುಳಿದ ಸಾವಿರಕ್ಕೂ ಹೆಚ್ಚು ಮರ
ಮಂಡೂಸ್ ಚಂಡಮಾರು ಕರಾವಳಿಯನ್ನು ದಾಟಿ ನಾಲ್ಕು ದಿನಗಳು ಕಳೆದ ಮೇಲೂ ಚೆನೈ ನಗರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮನೆಗಳು ಇನ್ನೂ ಜಲಾವೃತಗೊಂಡಿದೆ.
ಮಂಡೂಸ್ ಚಂಡಮಾರುತದ ಪ್ರಭಾವದಿಂದ ಚೆನೈ ಉಪನಗರ ಅವಡಿಯಲ್ಲಿ 17 ಸೆಂ.ಮೀ ಮಳೆ ದಾಖಲಾಗಿದೆ. ಇದರಿಂದ ಆವಡಿಯ ಪರುತ್ತಿಪಟ್ಟು ಕೆರೆ ತುಂಬಿ ಬಡಾವಣೆಗಳತ್ತ ಹರಿದಿದೆ. ಸಧ್ಯಕ್ಕೆ ಕೆರೆಯಿಂದ ಹೆಚ್ಚುವರಿ ನೀರು ಬಿಡಲಾಗುತ್ತಿದೆ.
ಬಡವಾಣೆ ಸುತ್ತ ಮಳೆ ನೀರು ಹರಿದಿದ್ದರಿಂದ ತರಕಾರಿ ಖರೀದಿಸಲು ಕೂಡ ಮಾರುಕಟ್ಟೆಗೆ ತೆರಳಲಾಗದೆ ಗೃಹಿಣಿಯರು ಕಂಗಾಲಾಗಿದ್ದಾರೆ. ರಾತ್ರಿ ವೇಳೆ ಮಳೆ ನೀರಿನಲ್ಲಿ ಹಾವು, ಇತರೆ ಕೀಟಗಳ ಕಾಟ ಹೆಚ್ಚಾಗಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಯ್ಯಪಾಕಂ ಹೊಂಡದವರೆಗೆ ನಿರ್ಮಿಸುತ್ತಿರುವ ರಾಜಕಾಲುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸ್ಥಳೀಯರು ಸರಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಮಂಡೂಸ್ ಚಂಡಮಾರುತಕ್ಕೆ ನಗರದ ವಿವಿಧೆಡೆ 1115 ಮರಗಳು ಬಿದ್ದಿವೆ ಎಂದು ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಅಧಿಕಾರಿಗಳು ಲೆಕ್ಕ ಹಾಕಿದ್ದಾರೆ. ಅದೇ ರೀತಿ ಅರಣ್ಯ ಇಲಾಖೆಗೆ ಸೇರಿದ ಪ್ರದೇಶಗಳಲ್ಲಿ ಸುಮಾರು 1000 ಮರಗಳನ್ನು ಭಾಗಶಃ ಕಡಿದು ಹಾಕಲಾಗಿದೆ ಎಂದು ಹೇಳಿದ್ದಾರೆ.
Chennai: Even if the rains subside, the difficulties will not go away, Mandus typhoon