12 ವರ್ಷದಲ್ಲಿ 5 ಮದುವೆಯಾಗಿ ಯಾಮಾರಿಸಿದ ಮಹಿಳೆ – ಕೊನೆಗೂ ಸಿಕ್ಕಿಬಿದ್ದಳು..
ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅಂತ ಹಿರಿಯರು ಹೇಳಿದ್ದಾರೆ.. ಆದ್ರೆ ಇಲ್ಲೊಂದು ಚಾಲಾಕಿ ಹೆಣ್ಣು ಸುಳ್ಳು ಹೇಳುತ್ತಲೇ ಒಂದಲ್ಲ ಐದು ಮದುವೆ ಮಾಡಿಕೊಂಡಿದ್ದಾಳೆ. 12 ವರ್ಷದಲ್ಲಿ ಐದು ಮದುವೆ ಮಾಡಿಕೊಂಡಿ ಈ ಹೆಣ್ಣು ಮದುವೆ ಮುಗಿದು 1 ತಿಂಗಳು ಕಳೆಯವಷ್ಟರಲ್ಲೇ ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗುತ್ತಾಳೆ. ಇದೀಗ ಐದನೇ ಗಂಡ ನೀಡಿದ ದೂರಿನ ಮೇರೆಗೆ ಆ ಚಾಲಾಕಿ ಹೆಣ್ಣನ್ನ ಪೊಲೀಸರು ಬಂದಿಸಿದ್ದಾರೆ.
ತಮಿಳುನಾಡಿನ ಮದುರೈನ 32 ವರ್ಷದ ಅಭಿನಯ 12 ವರ್ಷದಲ್ಲಿ ಐದು ಮದುವೆಯಾಗಿ ಪರಾರಿಯಾದ ಮಹಿಳೆ. ಐದನೇ ಗಂಡನ ದೂರಿನ ಆಧಾರದ ಮೇಲೆ ತಾಂಬರಂನಲ್ಲಿ ಆಕೆಯನ್ನ ಬಂಧಿಸಲಾಗಿದೆ. ಇಷ್ಟಕ್ಕೆಲ್ಲ ಸಾಥ್ ಕೊಟ್ಟ ಆಕೆಯ ಎರಡನೇ ಪತಿ ಸೆಂಥಿಲ್ ಕುಮಾರ್ ಗೂ ಪೊಲೀಸರು ಕೈಕೋಳ ತೊಡಿಸಿದ್ದಾರೆ. ತಾಂಬರಂನ ಬೇಕರಿಯೊಂದರಲ್ಲಿ ಸಹೋದ್ಯೋಗಿಯಾಗಿದ್ದ ಹಿನ್ನೆಲೆಯಲ್ಲಿ ತಾಂಬರಂನ ರಂಗನಾಥಪುರದ ನಟರಾಜನನ್ನು ಅಭಿನಯ ಮದುವೆಯಾಗಿದ್ದಳು . ತಾನು ಅನಾಥೆ ಎಂದು ಹೇಳಿಕೊಂಡಿದ್ದರಿಂದ ಪೋಷಕರು ತಾಂಬರಂನಲ್ಲಿರುವ ದೇವಸ್ಥಾನದಲ್ಲಿ ಮದುವೆ ನಡೆಸಿ ಪ್ರತ್ಯೇಕ ಮನೆಯಲ್ಲಿ ಇರಿಸಿದ್ದರು.
ದೀಪಾವಳಿಗೆ ಮುನ್ನ ನಟರಾಜ ಹೊಸ ಬಟ್ಟೆ ತೆಗೆದುಕೊಳ್ಳಲು ಟೈಲರ್ ಅಂಗಡಿಗೆ ಹೋದಾಗ ಅಭಿನಯಾ 17 ಪವನ್ ಚಿನ್ನಾಭರಣ ಹಾಗೂ ₹20 ಸಾವಿರ ನಗದು ಸಮೇತ ಪರಾರಿಯಾಗಿದ್ದಳು. ನಟರಾಜನ ದೂರಿನ ಮೇರೆಗೆ ಪೊಲೀಸರು ಮಹಿಳೆಗಾಗಿ ಹುಡುಕಾಟ ಆರಂಭಿಸಿದ್ದು ಶುಕ್ರವಾರ ಆಕೆಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಅಭಿನಯಾ ತಾನು 2011ರಲ್ಲಿ ವಿಜಯ್ನನ್ನು ಮದುವೆಯಾಗಿದ್ದು, ಆತನೊಂದಿಗೆ ಮಗುವನ್ನು ಹೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 2013ರಲ್ಲಿ ಆಕೆ ತನ್ನ ಮಗು ಮತ್ತು ವಿಜಯ್ನನ್ನು ತ್ಯಜಿಸಿ 10 ಪವನ್ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಳು. ನಂತರ ಸೆಂಥಿಲ್ ಕುಮಾರ್ ಅವರನ್ನು ವಿವಾಹವಾಗಿ ಅವನೊಟ್ಟಿಗೆ ದೀರ್ಘಕಾಲ ಇದ್ದಳು.
ನಂತರ ಅಬಿನಯಾ ಚೆನ್ನೈಗೆ ಬಂದು ತನ್ನ ಹೆಸರನ್ನು ಬದಲಾಯಿಸಿಕೊಂಡು ಮತ್ತಿಬ್ಬರನ್ನ ಬಂಧಿಸಿ ಯಾಮಾರಿಸಿದ್ದಾಳೆ. ಅಭಿನಯಾ ತನ್ನ ಆಧಾರ್ ಕಾರ್ಡ್ ಬಳಸಿ 32 ಸಿಮ್ ಕಾರ್ಡ್ಗಳನ್ನು ಖರೀದಿಸಿ ಸೋಶಿಯಲ್ ಮೀಡಿಯಾ ಮೂಲಕ ಆಮಿಷ ಒಡ್ಡಿ ಬ್ಲಾಕ್ ಮೇಲ್ ಕೂಡ ಮಾಡುತ್ತಿದ್ದಳು ಎಂದು ಪೊಲೀಸರು ತನಿಖೆಯಲ್ಲಿ ಕಂಡುಹಿಡಿದ್ದಾರೆ.
Chennai: Woman who cheated on 5 marriages in 12 years – finally caught..