Cheteshwar Pujara | ರೀ ಎಂಟ್ರಿ ಬಗ್ಗೆ ಚೇತೇಶ್ವರ್ ಹೇಳಿದ್ದೇನು..?
ಟೀಂ ಇಂಡಿಯಾದ ಹಿರಿಯ ಆಟಗಾರ ಚೇತೇಶ್ವರ್ ಪೂಜಾರಾ ಬ್ಯಾಡ್ ಫಾರ್ಮ್ ನಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದು ಗೊತ್ತೇ ಇದೆ.
ಆದ್ರೆ ಟೀಂ ಇಂಡಿಯಾದಿಂದ ಕಿಕೌಟ್ ಆದ ಬಳಿಕ ಪೂಜಾರಾ, ರಣಜಿ ಟ್ರೋಫಿ, ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನಲ್ಲಿ ಅಬ್ಬರಿಸಿದರು.
ಹೀಗಾಗಿ ಅವರು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಪೂಜಾರಾ ತಂಡಕ್ಕೆ ಆಯ್ಕೆ ಆಗಿದ್ದಾರೆ.
ಈ ಹಿನ್ನೆಲೆಯಲ್ಲಿ ಮತ್ತೆ ಟೀಂ ಇಂಡಿಯಾ ವಾಪಸ್ ಆಗಿರುವ ಬಗ್ಗೆ ಪೂಜಾರಾ ಸ್ಪಂದಿಸಿದ್ದಾರೆ.
ರಣಜಿ ಟ್ರೋಫಿಯಲ್ಲಿ ಆಡಿದ್ದರಿಂದ ನಾನು ಫಾರ್ಮ್ ಗೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.
“ಸಸೆಕ್ಸ್ ತಂಡದ ಪರ ಆಡೋದಕ್ಕೆ ಮೊದಲು ಫಸ್ಟ್ ಕ್ಲಾಸ್ ಮ್ಯಾಚ್ ನಲ್ಲಿ ಆಡಿದ್ದು ನನಗೆ ಕೂಡಿ ಬಂತು.

ರಣಜಿ ಟ್ರೋಫಿಯಲ್ಲಿ ನಾನು ಸೌರಾಷ್ಟ್ರ ಪರ ಆಡಿದ ಎಲ್ಲಾ ಮೂರು ಪಂದ್ಯಗಳಲ್ಲಿ ನಾನು ಮಿಂಚಿದ್ದೇನೆ.
ಆಗಲೇ ನಾನು ರಿಧಮ್ ವಾಪಸ್ ಪಡೆದುಕೊಂಡೆ.
ನಾನು ರಣಜಿ ಟ್ರೋಫಿ ಯಲ್ಲಿ ನನ್ನ ಬ್ಯಾಟಿಂಗ್ ತಂತ್ರದಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ನಾನು ಫಾರ್ಮ್ ಪಡೆದುಕೊಂಡ ಬಳಿಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು.
ಮುಖ್ಯವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಆಡಲು ನಾನು ಇಷ್ಟ ಪಡುತ್ತೇನೆ.
ಇನ್ಮುಂದೆ ನನಗೆ ಸಿಗುವ ಪ್ರತಿಯೊಂದು ಅವಕಾಶವನ್ನು ಉಪಯೋಗಿಸಿಕೊಳ್ಳುತ್ತೇನೆ ಎಂದು ಪೂಜಾರಾ ತಿಳಿಸಿದ್ದಾರೆ.








