ಮಾತು ಉಳಿಸಿಕೊಳ್ಳದ ಪೂಜಾರ ಟೆಸ್ಟ್ ಗೆ ಹೇಳ್ತಾರಾ ಗುಡ್ ಬೈ Chetheshwar pujara saaksha tv
ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪುಜಾರ ಮತ್ತೆ ವಿಫಲರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‍ನ ಎರಡೂ ಇನ್ನಿಂಗ್ಸ್‍ಗಳಲ್ಲಿ ಪೂಜಾರ ಎಡವಿದ್ದಾರೆ.
ಈ ಬಾರಿ ಶತಕ ಬಾರಿಸುತ್ತೇನೆ ಎಂದಿದ್ದ ಪೂಜಾರ ಕನಿಷ್ಠ ಅರ್ಧಶತಕ ಕೂಡ ಸಿಡಿಸದೇ ಮಾತು ತಪ್ಪಿಸಿದ್ದಾರೆ. ಕಿವೀಸ್ ವಿರುದ್ಧದ ಮೊದಲ ಟೆಸ್ಟ್‍ನ ಮೊದಲ ಇನ್ನಿಂಗ್ಸ್‍ನಲ್ಲಿ 26 ರನ್ ಗಳಿಸಿದ್ದ ಪೂಜಾರ ಎರಡನೇ ಇನ್ನಿಂಗ್ಸ್‍ನಲ್ಲಿ 22 ರನ್ ಗಳಿಸಿ ಔಟಾದರು.
ಟೀಂ ಇಂಡಿಯಾ ಪರ ಬ್ಯಾಟಿಂಗ್ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿ ಬರುವ ಪೂಜಾರ 2019ರ ಆಸೀಸ್ ಪ್ರವಾಸದಲ್ಲಿ ಕೊನೆಯ ಬಾರಿ ಶತಕ (193) ಗಳಿಸಿದ್ದರು.
ಅಂದಿನಿಂದ ಅವರು ಆಡಿದ 39 ಇನ್ನಿಂಗ್ಸ್‍ಗಳಲ್ಲಿ ಒಂದೇ ಒಂದು ಶತಕವನ್ನು ಸಿಡಿಸಿಲ್ಲ. ಆ ಮೂಲಕ ಚೇತೇಶ್ವರ್ ಒಂದು ಕೆಟ್ಟ ದಾಖಲೆಯನ್ನು ಬರೆದಿದ್ದಾರೆ.
ಇದಕ್ಕೂ ಮೊದಲು, ಭಾರತದ ಮಾಜಿ ನಾಯಕ ಅಜಿತ್ ವಾಡೇಕರ್ ಟೆಸ್ಟ್‍ನಲ್ಲಿ ಒನ್ ಡೌನ್ ಬಂದು 39 ಇನ್ನಿಂಗ್ಸ್‍ಗಳಲ್ಲಿ ಶತಕ ಗಳಿಸಲು ವಿಫಲರಾಗಿದ್ದರು. ಇದೀಗ ಈ ದಾಖಲೆ ಪೂಜಾರ ಪಾಲಾಗಿದೆ.
ಪೂಜಾರ ಪ್ರದರ್ಶನದ ಬಗ್ಗೆ ಅಭಿಮಾನಿಗಳು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.









