ಚಿಕನ್ ಬೀಟ್ರೂಟ್ ಸಮೋಸಾ ಮಾಡೋದು ಹೇಗೆ..?
ಚಿಕಿನ್ ಬೀಟ್ರೂಟ್ ಸಮೋಸಾ ಮಾಡೋಕೆ ಬೇಕಿರುವ ಪದಾರ್ಥಗಳು
ಬೋನ್ಲೆಸ್ ಚಿಕನ್ – (ಉಪ್ಪು, ಮೆಣಸು ಮತ್ತು ಅರಿಶಿನದೊಂದಿಗೆ ಬೆರೆಸಿ, ಮೃದುವಾಗಿ ಬೇಯಿಸಿ ತುರಿಯಂತೆ ಮಾಡಿಕೊಂಡಿರಬೇಕು)
ಬೀಟ್ರೂಟ್ ತುರಿ – 4 ಟೀಸ್ಪೂನ್
ಸೋಯಾ ಸಾಸ್, ಟೊಮೆಟೊ ಸಾಸ್ – 1 ಟೇಬಲ್ ಸ್ಪೂನ್
ಮೈದಾ ಹಿಟ್ಟು – 2 ಕಪ್, ಗೋಧಿ ಹಿಟ್ಟು – 1 ಕಪ್
ಕಾಳುಮೆಣಸಿನ ಪುಡಿ – 1 ಟೀಸ್ಪೂನ್
ಬೀಟ್ರೂಟ್ ರಸ – ಸಾಕಾಗುವಷ್ಟು (ಚಪಾತಿ ಹಿಟ್ಟಿಗಾಗಿ ನೀರಿನ ಬದಲಿಗೆ ಬೀಟ್ರೂಟ್ ರಸ ಬಳಸಬೇಕು)
ಉಪ್ಪು – ಸಾಕಾಗುವಷ್ಟು
ಎಣ್ಣೆ –
ತಯಾರಿಕೆಯ ವಿಧಾನ
ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಬೀಟ್ ರೂಟ್ ತುರಿ, ಪೆಪ್ಪರ್ ಪೌಡರ್, ಚಿಕನ್ ತುರಿ, ಸೋಯಾ ಸಾಸ್, ಟೊಮೇಟೊ ಸಾಸ್ ಮತ್ತು ಚಿಟಿಕೆ ಉಪ್ಪು ಹಾಕಿ ಪಕ್ಕಕ್ಕೆ ಇಡಿ. ಇನ್ನೊಂದು ಬೌಲ್ ನಲ್ಲಿ ಮೈದಾ ಹಿಟ್ಟು, ಗೋಧಿ ಹಿಟ್ಟು, ಅರ್ಧ ಚಮಚ ಎಣ್ಣೆ, ಸ್ವಲ್ಪ ಬೀಟ್ ರೂಟ್ ರಸ, ಉಪ್ಪು ಹಾಕಿ ಚಪಾತಿ ಹಿಟ್ಟು ಮಾಡಿಕೊಳ್ಳಿ. ಅದನ್ನ ಒದ್ದೆಯಾದ ಬಟ್ಟೆಯಿಂದ ಮುಚ್ಚಿ ಮತ್ತು ಅರ್ಧ ಘಂಟೆಯವರೆಗೆ ಪಕ್ಕಕ್ಕೆ ಇರಿಸಿ. ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ, ಹಿಟ್ಟನ್ನು ಚಪಾತಿ ಮಾಡಿ, ಸಮೋಸಾ ರೀತಿ ಸುತ್ತಿ ಚಿಕನ್ ಮಿಶ್ರಣವನ್ನ ಹಾಕಿ ಪೋಲ್ಡ್ ಮಾಡಿ. ಅವುಗಳನ್ನು ಎಣ್ಣೆಯಲ್ಲಿ ಕರಿದರೆ ಸಮೋಸಾ ರೆಡಿ.